ಸ್ಯಾಂಡಲ್ ವುಡ್ ನ ಮೋಹಕ ತಾರೆ ನಟಿ ರಮ್ಯಾ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ಕೆಲ ವರ್ಷಗಳೆ ಕಳೆದುಹೋಗಿದೆ. ಆದರೆ ಇಂದಿಗೂ ಆಕೆಯ ಮೇಲಿರೋ ಕ್ರೇಜ್ ಕೊಂಚವೂ ಕಮ್ಮಿಯಾಗಿಲ್ಲ. ರಮ್ಯಾ ಮತ್ತೆ ಯಾವಾಗ ಚಿತ್ರರಂಗಕ್ಕೆ ಬರ್ತಾರೆ ಅಂತ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಮಧ್ಯೆ ರಮ್ಯಾರ ಹಳೆಯ ಫೋಟೋವೊಂದು ವೈರಲ್ ಆಗಿದೆ. ನಟಿ ರಮ್ಯಾ ಲಕ್ಷಾಂತರ ಹುಡುಗರ ಕನಸಿನ ಕನ್ಯೆ. ನಟನೆಯ ಜೊತೆಗೆ ತಮ್ಮ ಬ್ಯೂಟಿಯಿಂದಲೂ ಸಿನಿ ರಸಿಕರ ಮನ ಗೆದ್ದಿರುವ ರಮ್ಯಾ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. […]readmore
ಶ್ರೀ ಧರ್ಮಶಾಸ್ತ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “ಆಲ್ಫಾ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು, ಹಾಸನ, ಸಕಲೇಶಪುರ, ಕುಂದಾಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಚಿತ್ರದ ಮೊದಲ ಪ್ರತಿ ಸಿದ್ದವಾಗಲಿದೆ. ಸೆಪ್ಟೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಚಿರಂತ ಎಂಬ ನೂತನ ಪ್ರತಿಭೆ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮೂಲತಃ ಬಾಕ್ಸರ್ ಆಗಿರುವ ಚಿರಂತ ಅವರಿಗೆ “ಆಲ್ಫಾ” ಚೊಚ್ಚಲ ಚಿತ್ರ. ನಾಯಕನಾಗಿ ಕಾಣಿಸಿಕೊಂಡಿರುವ ಚಿರಂತ […]readmore
ಇನ್ನೆನ್ನೂ ಒಟಿಟಿ ಬಿಗ್ ಬಾಸ್ ಶೋಗೆ ದಿನಗಣನೆ ಶುರುವಾಗಿದೆ. ಆಗಸ್ಟ್ 6 ಹಾಗೂ 7ರಂದು ಬಿಗ್ ಬಾಸ್ ಗ್ರ್ಯಾಂಗ್ ಓಪನಿಂಗ್ ಇದೆ. ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಹೋಗಲಿದ್ದಾರೆ? ಅನ್ನೋ ಚರ್ಚೆ ಶುರುವಾಗಿದೆ. ಈ ಮಧ್ಯೆ ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹಾಗೂ ನಟ ಕಿಚ್ಚ ಸುದೀಪ್ ಸುದ್ದಿಗೋಷ್ಠಿಯಲ್ಲಿ ಕೆಲ ಮಾಹಿತಿ ಹಂಚಿಕೊಂಡರು. ಈಗಾಗ್ಲೆ ತೆಲುಗು ಹಾಗೂ ಹಿಂದಿಯಲ್ಲಿ ಬಿಗ್ ಬಾಸ್ ಓಟಿಟಿಯಲ್ಲಿ ಪ್ರಸಾರವಾಗಿದೆ. ಕನ್ನಡದ ವೀಕ್ಷಕರಿಗೆ ಇದು ಹೊಸತು. ಇದೇ ಕಾರಣಕ್ಕೆ […]readmore
ಟಾಲಿವುಡ್ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಅಫೇರ್ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ವಿವಾದದ ಬಳಿಕ ಪವಿತ್ರಾ ಅವರಿಗೆ ಅವಕಾಶಗಳು ಕಮ್ಮಿಯಾಗುತ್ತವೆ ಎನ್ನಲಾಗಿತ್ತು. ಆದರೆ ಇದೀಗ ಎಲ್ಲವೂ ಉಲ್ಟ್ ಪಲ್ಟ್ ಆಗಿದೆ. ಈಗಾಗಲೆ ಮೂರು ಮದುವೆಯಾಗಿರೋ ನರೇಶ್ ಪವಿತ್ರಾ ಲೋಕೇಶ್ ಜೊತೆ ಅಫೇರ್ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇತ್ತ ಪತಿ ಸುಚೇಂದ್ರ ಪ್ರಸಾದ್ ಹಾಗೂ ಎರಡು ಮಕ್ಕಳನ್ನು ಬಿಟ್ಟು ಪವಿತ್ರಾ ಲೋಕೇಶ್ ನರೇಶ್ ರನ್ನು ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲಾ ಆದ ಮೇಲೆ ಪವಿತ್ರಾ ಲೋಕೇಶ್ […]readmore
ಟಾಲಿವುಡ್ನ ಖ್ಯಾತ ನಟ ನಂದಮೂರಿ ತಾರಕ್ ರಾಮ ರಾವ್ ಅವರ ಕಿರಿಯ ಪುತ್ರಿ ಉಮಾ ಮಹೇಶ್ವರಿ ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ತಿಂಗಳಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಉಮಾ ಮಹೇಶ್ವರಿ ಮುಂಬೈನ ಜುಬ್ಲಿ ಹಿಲ್ಸ್ ನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಎನ್ಟಿಆರ್ ಕಿರಿಯ ಪುತ್ರಿ ಅನಾರೋಗ್ಯದ ಬಳಲುತ್ತಿದ್ದರು. ಇದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆದುಕೊಳ್ಳುತ್ತಿದ್ದರು. ಆದರೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಉಮಾ ಇಂದು ಮುಂಜಾನೆ ಆತ್ಮಹತ್ಯೆ […]readmore
ಸಿದ್ಲಿಂಗು, ನೀರ್ ದೋಸೆ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ವಿಜಯ್ ಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್ ಸಿನಿಮಾ ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಆಗಿದೆ. ಆದರೆ ಥಿಯೇಟರ್ ಗೆ ಎಂಟ್ರಿಕೊಟ್ಟ ರಭಸದಲ್ಲೇ ಚಿತ್ರಮಂದಿರದಿಂದ ಎತ್ತಂಗಡಿ ಆಗಿದೆ. ಇದೀಗ ಸಿನಿಮಾದ ಸೋಲಿಗೆ ಸ್ವತಃ ನಾನೇ ಕಾರಣ ಎಂದು ನಿರ್ದೇಶಕರು ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಸೋಲಿನ ಬಗ್ಗೆ ಬರೆದುಕೊಂಡ ನಿರ್ದೇಶಕ ವಿಜಯ್ ಪ್ರಸಾದ್, ‘ನಮ್ಮ ಪೆಟ್ರೋಮ್ಯಾಕ್ಸ್ ಚಿತ್ರ ನಾವು ಅಂದುಕೊಂಡಂತೆ ಎಲ್ಲರನ್ನೂ […]readmore
ಕೋಲ್ಕತ್ತಾ: ಖ್ಯಾತ ಬೆಂಗಾಲಿ ಹಾಗೂ ಒಡಿಯಾ ಗಾಯಕಿ ನಿರ್ಮಲಾ ಮಿಶ್ರಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 81 ವರ್ಷ ವಯಸ್ಸಿನ ನಿರ್ಮಲಾ ಮಿಶ್ರಾ ಭಾನುವಾರ ಮುಂಜಾನೆ ಚೆಟ್ಲಾ ಪ್ರದೇಶದ ತಮ್ಮ ನಿವಾಸದಲ್ಲಿ ನಿಧನರಾಗಿರುವ ಕುರಿತು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಬೆಂಗಾಲಿ ಹಾಗೂ ಒಡಿಯಾ ಚಲನಚಿತ್ರಗಳ ಹಾಡುಗಳಿಗೆ ಧ್ವನಿಯಾಗಿದ್ದ ನಿರ್ಮಲಾ ಮಿಶ್ರಾ ಕಳೆದ ಕೆಲ ಸಮದಯದಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಭಾನುವಾರ ಮಧ್ಯರಾತ್ರಿ 12.05ರ ಸುಮಾರಿಗೆ ನಿರ್ಮಲಾ ಮಿಶ್ರಾ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದು ತಕ್ಷಣವೇ ಸ್ಥಳೀಯ ನರ್ಸಿಂಗ್ ಹೋಂಗೆ ಕರೆದೊಯ್ಯಲಾಗಿದೆ. ಆದರೆ […]readmore
ಅಚ್ಚ ಕನ್ನಡಿಗರ ಸಿರಿಕನ್ನಡ ವಾಹಿನಿಯಲ್ಲಿ ವಿಜಯ ದಶಮಿ – ಅಮ್ಮನ ಮದುವೆ ಎಂಬ ಹೊಚ್ಚಹೊಸ ಧಾರಾವಾಹಿಗಳು ಆಗಸ್ಟ್ 1 ರಿಂದ ಆರಂಭವಾಗುತ್ತಿದೆ . ಆ ಪೈಕಿ “ವಿಜಯ ದಶಮಿ” ಧಾರಾವಾಹಿಯನ್ನು ಪೂರ್ಣಿಮ ಎಂಟರ್ ಪ್ರೈಸಸ್ ಮೂಲಕ ರಾಘವೇಂದ್ರ ರಾಜಕುಮಾರ್ ಹಾಗೂ ಮಂಗಳ ರಾಘವೇಂದ್ರ ರಾಜಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಸಂಸ್ಥೆಯ ಮೂಲಕ ಅದ್ದೂರಿ ಧಾರಾವಾಹಿಯೊಂದು ನಿರ್ಮಾಣವಾಗುತ್ತಿದೆ. ಹತ್ತೊಂಭತ್ತಕ್ಕೂ ಅಧಿಕ ಮುಖ್ಯಪಾತ್ರಧಾರಿಗಳಿರುವ ಈ ಧಾರಾವಾಹಿಯಲ್ಲಿ ಎಪ್ಪತ್ತಕ್ಕೂ ಅಧಿಕ ಕಲಾವಿದರು ಅಭಿನಯಿಸುತ್ತಿದ್ದಾರೆ. ಮೊಟ್ಟಮೊದಲ ಬಾರಿಗೆ ರಾಘವೇಂದ್ರ […]readmore
ಸಿನಿಮಾ ಹಾಗೂ ವಿಭಿನ್ನ ಕಾಸ್ಟ್ಯೂಮ್ ನಿಂದಲೇ ಪ್ರತಿಭಾರಿ ಸುದ್ದಿಯಾಗೋ ನಟ ರಣವೀರ್ ಸಿಂಗ್ ಈ ಬಾರಿ ಫೋಟೋ ಶೂಟ್ ಮೂಲಕ ನೆಟ್ಟಿಗರನ್ನು ಹೌಹಾರುವಂತೆ ಮಾಡಿದ್ದಾರೆ. ಮ್ಯಾಗಜೀನ್ ಫೋಟೋ ಶೂಟ್ ಗಾಗಿ ರಣವೀರ್ ಸಿಂಗ್ ಬೆತ್ತಲಾಗಿ ಫೋಸ್ ನೀಡಿದ್ದು ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟರ್ಕಿ ದೇಶದ ಜನಪ್ರಿಯ ರಗ್ನ ನೆಲದ ಮೇಲೆ ಹಾಸಿ ಅದರ ಮೇಲೆ ಬೆತ್ತಲಾಗಿ ಮಲಗಿಕೊಂಡು ರಣವೀರ್ ಸಿಂಗ್ ಫೋಟೋಗೆ ಫೋಸ್ ನೀಡಿದ್ದಾರೆ. 1972ರಲ್ಲಿ ಬುರ್ಟ್ ರೆನಾಲ್ಡ್ ಕೊಸ್ಮೋಪಾಲಿಟನ್ ಮ್ಯಾಗಜಿನ್ ಗೆ […]readmore
ಕಿಚ್ಚ ಸುದೀಪ್ ಅವರಿಗೆ ಎರಡನೇ ಬಾರಿ ಕೋವಿಡ್ ಸೋಂಕು ತಗುಲಿದೆ ಎಂಬ ಸುದ್ದಿ ಕೇಳಿ ಆತಂಕಗೊಂಡಿದ್ದ ಅಭಿಮಾನಿಗಳಿಗೆ ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಜ್ವರದಿಂದ ಬಳಲುತ್ತಿರುವುದು ನಿಜ, ಆದರೆ ಕೋವಿಡ್ ಪಾಸಿಟಿವ್ ಆಗಿಲ್ಲ ಎಂದು ಜಾಕ್ ಮಂಜು ಹೇಳಿದ್ದಾರೆ. ಈ ಕುರಿತು ವಿಡಿಯೋ ಮಾಡಿರುವ ಜಾಕ್ ಮಂಜು, ‘ಸುದೀಪ್ ಅವರು ಜ್ವರದಿಂದ ಬಳಲುತ್ತಿರುವುದು ನಿಜ. ಆದರೆ, ಕೋವಿಡ್ ಪಾಸಿಟಿವ್ ಆಗಿಲ್ಲ. ಹಾಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಿಗದಿತ ದಿನಾಂಕಗಳಂದು ಅವರು ಮತ್ತೆ ಪ್ರಚಾರದಲ್ಲಿ […]readmore
