• June 17, 2026

ಮ್ಯಾಗಜೀನ್ ಗಾಗಿ ಬೆತ್ತಲಾದ ರಣವೀರ್ ಸಿಂಗ್: ಆಕ್ರೋಶ ಹೊರ ಹಾಕಿದ ನೆಟ್ಟಿಗರು

ಸಿನಿಮಾ ಹಾಗೂ ವಿಭಿನ್ನ ಕಾಸ್ಟ್ಯೂಮ್ ನಿಂದಲೇ ಪ್ರತಿಭಾರಿ ಸುದ್ದಿಯಾಗೋ ನಟ ರಣವೀರ್ ಸಿಂಗ್ ಈ ಬಾರಿ ಫೋಟೋ ಶೂಟ್ ಮೂಲಕ ನೆಟ್ಟಿಗರನ್ನು ಹೌಹಾರುವಂತೆ ಮಾಡಿದ್ದಾರೆ. ಮ್ಯಾಗಜೀನ್ ಫೋಟೋ ಶೂಟ್ ಗಾಗಿ ರಣವೀರ್ ಸಿಂಗ್ ಬೆತ್ತಲಾಗಿ ಫೋಸ್ ನೀಡಿದ್ದು ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟರ್ಕಿ ದೇಶದ ಜನಪ್ರಿಯ ರಗ್‌ನ ನೆಲದ ಮೇಲೆ ಹಾಸಿ ಅದರ ಮೇಲೆ ಬೆತ್ತಲಾಗಿ ಮಲಗಿಕೊಂಡು ರಣವೀರ್ ಸಿಂಗ್ ಫೋಟೋಗೆ ಫೋಸ್ ನೀಡಿದ್ದಾರೆ. 1972ರಲ್ಲಿ ಬುರ್ಟ್ ರೆನಾಲ್ಡ್ ಕೊಸ್ಮೋಪಾಲಿಟನ್ ಮ್ಯಾಗಜಿನ್ ಗೆ ಇದೇ ರೀತಿ ಫೋಸ್ ಕೊಟ್ಟು ಫೋಟೋ ಶೂಟ್ ಮಾಡಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇದೀಗ ರಣವೀರ್ ಕೂಡ ಅದೇ ರೀತಿ ಫೋಟೋ ಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಜನಪ್ರಿಯ ಫ್ಯಾಷನ್ ವಾಚ್ ಡಾನ್ ಆಗಿರುವ ಡಯಟ್ ಸಬ್ಯಾ, ರಣವೀರ್ ನನ್ನು ಅಮೆರಿಕಾ ನಟ ಬುರ್ಟ್ ರೆನಾಲ್ಡ್ ಗೆ ಹೋಲಿಸಿದ್ದಾರೆ.  ರಣವೀರ್ ಫೋಟೋ ಶೂಟ್ ನೋಡಿ ಸಾಕಷ್ಟು ಮಂದಿ ಸಾಕಷ್ಟು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಫೋಟೋ ಶೂಟ್ ನಲ್ಲಿ ರಣವೀರ್ ಸಿಂಗ್ ಸೂಪರ್ ಹಾಟ್ ಆಗಿ ಕಾಣ್ತಿದ್ದಾರೆ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಈ ಅವತಾರ ನೋಡಿ ಆಕ್ರೋಶ ಹೊರ ಹಾಕಿದ್ದಾರೆ. ರಣವೀರ್ ಸಿಂಗ್ ಕೊನೆಯದಾಗಿ ಜಯೇಶ್‌ಭಾಯ್ ಜೋರ್ದಾರ್‌ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಗಳಿಕೆ ಕಾಣಲಿಲ್ಲ. ಸದ್ಯ ರಣವೀರ್ ಸಿಂಗ್ ಸರ್ಕಸ್, ರಾಕಿ ಮತ್ತು ರಾಣಿ ಕಿ ಪ್ರೇಮ್ ಕಹಾನಿ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ತೊಡಗಿಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now