ಪ್ರಖ್ಯಾತ ಭಾರತೀಯ ನಟ, ಕಿಚ್ಚ ಸುದೀಪ್ ಅವರ ಸಹಯೋಗದೊಂದಿಗೆ ತನ್ನ ಸ್ಮಾರ್ಟ್ಸ್ಪೀಕರ್ಗಳಲ್ಲಿ ಮೊದಲ ಬಾರಿಗೆ ಸೆಲೆಬ್ರಿಟಿ ವಾಯ್ಸ್ ಫೀಚರ್ ಅನ್ನು ಬಿಡುಗಡೆ ಮಾಡುವುದಾಗಿ PhonePe ಇಂದು ಘೋಷಿಸಿತು. ಈ ಹೊಸ ಫೀಚರ್ನಿಂದ ಕರ್ನಾಟಕ ಚಲನಚಿತ್ರೋದ್ಯಮದ ಅಪ್ರತಿಮ ನಟ ಕಿಚ್ಚ ಸುದೀಪ್ ಅವರ ವಿಶಿಷ್ಠ ವಾಯ್ಸ್ನಲ್ಲಿ ಭಾರತದಾದ್ಯಂತ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಗ್ರಾಹಕರ ಪಾವತಿಗಳನ್ನು ಮೌಲ್ಯೀಕರಿಸಲು PhonePe ಸ್ಮಾರ್ಟ್ಸ್ಪೀಕರ್ಗಳಿಗೆ ಸಾಧ್ಯವಾಗಿಸುತ್ತದೆ. PhonePe ಸ್ಮಾರ್ಟ್ಸ್ಪೀಕರ್ ಅನ್ನು ಒಂದು ವರ್ಷದ ಹಿಂದೆ ಪ್ರಾರಂಭಿಸಲಾಯಿತು. ಅಂದಿನಿಂದ, ದೇಶದ 90% ಪೋಸ್ಟಲ್ ಕೋಡ್ಗಳಲ್ಲಿ […]readmore
ಲಾಯಲ್ ವರ್ಲ್ಡ್ ಮಾರ್ಕೆಟ್ ನ ಎರಡನೇ ಶಾಖೆ ಬೆಂಗಳೂರಿನ ಹೆಬ್ಬಾಳದ ಫೀನಿಕ್ಸ್ ಮಾಲ್ ಆಫ್ ಏಷ್ಯಾ ನಲ್ಲಿಂದು ಶುಭಾರಂಭಗೊಂಡಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಲಾಯಲ್ ವರ್ಲ್ಡ್ ಮಾರ್ಕೆಟ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು. ದೈನಂದಿನ ಅಗತ್ಯ ವಸ್ತುಗಳ ಲಾಯಲ್ ವರ್ಲ್ಡ್ ಮಾರ್ಕೆಟ್ ಈಗಾಗಲೇ ಬೆಂಗಳೂರಿನ ವೈಟ್ ಫೀಲ್ಡ್ ಹಾಗೂ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಫೀನಿಕ್ಸ್ ಮಾಲ್ ಆಫ್ ಏಷ್ಯಾ ದಲ್ಲಿರುವ ಲಾಯಲ್ ವರ್ಲ್ಡ್ ಮಾರ್ಕೆಟ್ […]readmore
ಇನ್ಫೋಸಿಸ್ ಸಂಸ್ಥೆ ಮುಖ್ಯಸ್ಥರಾದ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ತಿರುಪತಿಗಿರಿವಾಸನಾದ ಶಂಖಚಕ್ರಧಾರಿ ತಿಮ್ಮಪ್ಪನಿಗೆ ಬಂಗಾರದ ಶಂಖವನ್ನು ಕಾಣಿಕೆ ನೀಡಿದ್ದಾರೆ. ಇನ್ಫೋಸಿಸ್ ಫೌಂಡೇಶನ್ ಮೂಲಕ ಸುಧಾಮೂರ್ತಿ ಅವರು ಸಾಕಷ್ಟು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಮೊದಲಿನಿಂದಲೂ ಸರಳ ಜೀವನ ನಡೆಸುತ್ತಾ ಅನೇಕರಿಗೆ ಮಾಧರಿಯಾಗಿದ್ದಾರೆ. ಅವರ ದಾಂಪತ್ಯ ಜೀವನಕ್ಕೆ ಈಗ ನಲವತ್ತೈದು ವರ್ಷ. ಈ ನಲವತ್ತು ವರ್ಷಗಳಲ್ಲಿ ತಮ್ಮ ಬಳಿಯಿದ್ದ ಕೆಲವೇ ಕೆಲವು ಆಭರಣಗಳಿಂದ ಈ ಬಂಗಾರದ ಶಂಖವನ್ನು ಮಾಡಿಸಿ ತಿಮ್ಮಪ್ಪನಿಗೆ ನೀಡಿದ್ದಾರೆ.readmore
ಬೆಂಗಳೂರು: ಕರ್ನಾಟಕ ವಿದ್ಯತ್ಚಕ್ತಿ ನಿಯಂತ್ರಣ ಆಯೋಗ ಕಳೆದ ಮೇ 12 ರಂದು ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ 70 ಪೈಸೆ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಬೆಸ್ಕಾಂ, ಜೂನ್ ತಿಂಗಳಲ್ಲಿ ನೀಡುವ ಮೇ ತಿಂಗಳ ವಿದ್ಯುತ್ ಬಳಕೆಯ ಬಿಲ್ ನಲ್ಲಿ ಪರಿಷ್ಕೃತ ವಿದ್ಯುತ್ ಶುಲ್ಕವನ್ನು ನಮೂದಿಸಿದೆ. ವಿದ್ಯುತ್ ದರ ಪರಿಷ್ಕರಣೆ ಆದೇಶ ಏಪ್ರಿಲ್ ನಿಂದ ಪೂರ್ವನ್ವಯವಾಗುವುದರಿಂದ ಬಿಲ್ ನಲ್ಲಿ ಏಪ್ರಿಲ್ ತಿಂಗಳ ಹಿಂಬಾಕಿಯನ್ನು ನೀಡಲಾಗಿದೆ. ಹಾಗೆಯೇ ಕೆಇಆರ್ ಸಿ ಆದೇಶದ ಪ್ರಕಾರ ಎರಡು ಶ್ರೇಣಿಗಳಲ್ಲಿ ವಿದ್ಯುತ್ ಶುಲ್ಕವನ್ನು […]readmore
ಫೆಬ್ರವರಿ 11, 2023 ರಂದು, ಅಕ್ಷರ ಯೋಗ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವು ಮಂಡಲ ಯೋಗ ಉತ್ಸವದಲ್ಲಿ 3 ಹೊಸ ಗಿನ್ನೆಸ್ ವಿಶ್ವ ದಾಖಲೆಗಳನ್ನು ಸ್ಥಾಪಿಸಿತು. ಅತಿ ಹೆಚ್ಚು ಜನರ ಭಾಗವಹಿಸಿ ಪ್ರದರ್ಶಿಸಿದ ದಾಖಲೆ ಇದಾಗಿದೆ ಹಲಸಾನ (90 ಸೆಕೆಂಡ್ಗಳು), ಉಸ್ಟ್ರಾಸನ (60 ಸೆಕೆಂಡುಗಳು), ಮತ್ತು ವಸಿಷ್ಟಾಸನ (45 ಸೆಕೆಂಡುಗಳು) . ಈ ಕಾರ್ಯಕ್ರಮದಲ್ಲಿ ಅಕ್ಷರ ಯೋಗ ಮಾಸ್ಟರ್ ಶಿಕ್ಷಕರಿಂದ ತರಬೇತಿ ಪಡೆದ ಪೊಲೀಸ್ ಅಧಿಕಾರಿಗಳು, ಹಿಂದುಳಿದ ಮತ್ತು ವಿಕಲ ಚೇತನ ಮಕ್ಕಳು ಸೇರಿದಂತೆ […]readmore
ಪುನೀತ್ ರಾಜ್ ಕುಮಾರ್ ರಸ್ತೆ ಹೆಸರಿಡಲು ಸರ್ಕಾರದ ಅನುಮೋದನೆ- ನಾಳೆ ಅದ್ದೂರಿಯಾಗಿ ನಡೆಯಲಿದೆ ಉದ್ಘಾಟನಾ ಕಾರ್ಯಕ್ರಮ ನಾಯಂಡಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ವರೆಗಿನ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹೆಸರಿಡಬೇಕು ಎಂಬ ಬೇಡಿಕೆ ಈಡೇರಿದೆ. ಪುನೀತ್ ರಾಜ್ ಕುಮಾರ್ ರಸ್ತೆ ಎಂದು ಹೆಸರಿಡಲು ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದು, ನಾಳೆ ಪದ್ಮನಾಭನಗರದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪುನೀತ್ ರಾಜ್ ಕುಮಾರ್ ರಸ್ತೆ ನಾಮಕರಣಕ್ಕೆ ಚಾಲನೆ ನೀಡಲಿದ್ದಾರೆ. ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ ಪತ್ರಿಕಾಗೋಷ್ಠಿ […]readmore
ಮಂಗಳೂರು: ವಿವಾದದ ಕೇಂದ್ರ ಬಿಂದುವಾಗಿದ್ದ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಇದೀಗ ಮತ್ತೆ ವಿವಾದದ ಮೂಲಕ ಸುದ್ದಿಯಾಗಿದೆ. ನೂತನವಾಗಿ ನಿರ್ಮಾಣ ಆಗುತ್ತಿರುವ ಮಾರುಕಟ್ಟೆಯಲ್ಲಿ ಅಧಿಕೃತ ಬೀಫ್ ಸ್ಟಾಲ್ಗೆ ನಗರ ಪಾಲಿಕೆ ಅವಕಾಶ ನೀಡಿರುವುದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಬ್ರಿಟಿಷರ ಕಾಲದಿಂದ ಇದ್ದ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನವೀಕರಣಗೊಳಿಸಲು ಕಳೆದ ವರ್ಷ ನೆಲಸಮಗೊಳಿಸಲಾಗಿತ್ತು. ಆದರೆ ಈ ವೇಳೆ ಅಲ್ಲಿದ್ದ ಅಂಗಡಿ ಮಾಲಿಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 114 ಕೋಟಿ […]readmore
ಅಕ್ರಮವಾಗಿ ತಲೆ ಎತ್ತಿರುವ ದೇಶದ ಭಾರೀ ಎತ್ತರದ ಬಿಲ್ಡಿಂಗ್ ಗಳನ್ನು ನೆಲಸಮ ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಆಗಸ್ಟ್ ಕೊನೆಯಲ್ಲಿ ನೋಯ್ಡಾದಲ್ಲಿದ್ದ ಭಾರೀ ಎತ್ತರದ ಸೂಪರ್ಟೆಕ್ ಅವಳಿ ಕಟ್ಟಡ ನೆಲಸಮದ ಬಳಿಕ ಇದೀಗ ಗುರುಗ್ರಾಮದ ಬೃಹತ್ ಕಟ್ಟಡವೊಂದು ನೆಲಸಮವಾಗಲು ಸಿದ್ದವಾಗಿದೆ. ಗುರುಗ್ರಾಮದಲ್ಲಿರುವ ಚಿಂಟೆಲ್ಸ್ ಪ್ಯಾರಾಡಿಸೊ ಸೊಸೈಟಿಯಲ್ಲಿರುವ ಬೃಹತ್ ಕಟ್ಟಡವೊಂದನ್ನು ಕೆಡವಲು ನಿರ್ಧರಿಸಲಾಗಿದೆ. ನೋಯ್ಡಾದ ಅವಳಿ ಕಟ್ಟಡಗಳನ್ನು ನೆಲಸಮಗೊಳಿಸಿದ ರೀತಿಯಲ್ಲಿಯೇ ಸ್ಫೋಟಕ ಹಾಗೂ ಯಂತ್ರಗಳನ್ನು ಬಳಸಿಕೊಂಡು ಚಿಂಟೆಲ್ಸ್ ಪ್ಯಾರಾಡಿಸೊ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿರುವ ಟವರ್ ಡಿ ಅನ್ನು ಶೀಘ್ರದಲ್ಲೇ ಕೆಡವಲು […]readmore
ಮಂಗಳೂರು: ಕಳೆದ ಜುಲೈ 26ರಂದು ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಜೆಪಿ ಮನೆ ಕಟ್ಟಿಸಿಕೊಡಲು ಮುಂದಾಗಿದೆ. ಪ್ರವೀಣ್ ಮೃತಪಟ್ಟ ಸಂದರ್ಭದಲ್ಲಿ ಮನೆ ಕಟ್ಟಿಕೊಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದರು. ಇದೀಗ ಕೊಟ್ಟ ಮಾತಿನಂತೆ ಮನೆ ನಿರ್ಮಾಣ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಪ್ರವೀಣ್ ನಟ್ಟರು ಸ್ವತಃ ಮನೆ ಕಟ್ಟುವ ಕನಸು ಹೊಂದಿದ್ದರು. ಈ ವಿಷಯವನ್ನು ಪ್ರವೀಣ್ ನೆಟ್ಟಾರು ಮೃತಪಟ್ಟ ಸಂದರ್ಭದಲ್ಲಿ ಪತ್ನಿ ತಿಳಿಸಿದ್ದರು. ಈ ವೇಳೆ ಮನೆ ಕಟ್ಟಿ ಕೊಡುವ […]readmore
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳಿಗಾಗಿ ಪೊಲೀಸರು ಭಾರಿ ಶೋಧ ನಡೆಸುತ್ತಿದ್ದಾರೆ. ಇದೀಗ ಆರೋಪಿಗಳ ಪತ್ತೆಗೆ ಬಲೆ ಬೀಸಿರುವ ಖಾಕಿ ಪಡೆ ಆರೋಪಿಗಳ ಕುರಿತು ಮಾಹಿತಿ ನೀಡುವವರಿಗೆ ಬಾರಿ ನಗದು ಬಹುಮಾನ ಘೋಷಿಸಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಪ್ರಮುಖ ಆರೋಪಿಗಳ ಕುರಿತು ಮಾಹಿತಿ ನೀಡಿದವರಿಗೆ ಒಟ್ಟು 14 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಎನ್ಐಎ […]readmore
