• June 13, 2026

ಸುದೀಪ್ ಜ್ವರದಿಂದ ಬಳಲುತ್ತಿರುವುದು ನಿಜ, ಕೋವಿಡ್ ಪಾಸಿಟಿವ್ ಆಗಿಲ್ಲ: ಜಾಕ್ ಮಂಜು

ಕಿಚ್ಚ ಸುದೀಪ್ ಅವರಿಗೆ ಎರಡನೇ ಬಾರಿ ಕೋವಿಡ್ ಸೋಂಕು ತಗುಲಿದೆ ಎಂಬ ಸುದ್ದಿ ಕೇಳಿ ಆತಂಕಗೊಂಡಿದ್ದ ಅಭಿಮಾನಿಗಳಿಗೆ ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಜ್ವರದಿಂದ ಬಳಲುತ್ತಿರುವುದು ನಿಜ, ಆದರೆ ಕೋವಿಡ್ ಪಾಸಿಟಿವ್ ಆಗಿಲ್ಲ ಎಂದು ಜಾಕ್ ಮಂಜು ಹೇಳಿದ್ದಾರೆ. ಈ ಕುರಿತು ವಿಡಿಯೋ ಮಾಡಿರುವ ಜಾಕ್ ಮಂಜು, ‘ಸುದೀಪ್ ಅವರು ಜ್ವರದಿಂದ ಬಳಲುತ್ತಿರುವುದು ನಿಜ. ಆದರೆ, ಕೋವಿಡ್ ಪಾಸಿಟಿವ್ ಆಗಿಲ್ಲ. ಹಾಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಿಗದಿತ ದಿನಾಂಕಗಳಂದು ಅವರು ಮತ್ತೆ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಜುಲೈ 23 ರಿಂದ ಅವರು ಅನೇಕ ಊರುಗಳಿಗೆ ಪ್ರಚಾರಕ್ಕಾಗಿ ತೆರಳಲಿದ್ದಾರೆ ಎಂದು ಜಾಕ್ ಮಂಜು ವಿಡಿಯೋದಲ್ಲಿ ತಿಳಿಸಿದ್ದಾರೆ. ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಇದೇ ಜುಲೈ 28ರಂದು ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸುದೀಪ್ ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವುದರಿಂದ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದೆ. ಸುದ್ದಿ ಕೇಳಿ ಕೊಂಚ ನಿರಾಳರಾಗಿರೋ ಅಭಿಮಾನಿಗಳು ಸುದೀಪ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪಾರ್ಥಿಸುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now