• June 13, 2026

ಹಿರಿಯ ಗಾಯಕಿ ನಿರ್ಮಲಾ ಮಿಶ್ರಾ ನಿಧನ

ಕೋಲ್ಕತ್ತಾ: ಖ್ಯಾತ ಬೆಂಗಾಲಿ ಹಾಗೂ ಒಡಿಯಾ ಗಾಯಕಿ ನಿರ್ಮಲಾ ಮಿಶ್ರಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 81 ವರ್ಷ ವಯಸ್ಸಿನ ನಿರ್ಮಲಾ ಮಿಶ್ರಾ ಭಾನುವಾರ ಮುಂಜಾನೆ ಚೆಟ್ಲಾ ಪ್ರದೇಶದ ತಮ್ಮ ನಿವಾಸದಲ್ಲಿ ನಿಧನರಾಗಿರುವ ಕುರಿತು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಬೆಂಗಾಲಿ ಹಾಗೂ ಒಡಿಯಾ ಚಲನಚಿತ್ರಗಳ ಹಾಡುಗಳಿಗೆ ಧ್ವನಿಯಾಗಿದ್ದ ನಿರ್ಮಲಾ ಮಿಶ್ರಾ ಕಳೆದ ಕೆಲ ಸಮದಯದಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಭಾನುವಾರ ಮಧ್ಯರಾತ್ರಿ 12.05ರ ಸುಮಾರಿಗೆ ನಿರ್ಮಲಾ ಮಿಶ್ರಾ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದು ತಕ್ಷಣವೇ ಸ್ಥಳೀಯ ನರ್ಸಿಂಗ್ ಹೋಂಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಾಗಲೇ ನಿರ್ಮಲಾ ಮಿಶ್ರಾ ಮೃತಪಟ್ಟಿದ್ದಾರೆ. ಸಂಗೀತ ಸುಧಾಕರ್ ಬಾಲಕೃಷ್ಣ ದಾಸ್ ಪ್ರಶಸ್ತಿಗೆ ಭಾಜನರಾಗಿದ್ದ ನಿರ್ಮಲಾ ಮಿಶ್ರಾ ಬೆಂಗಾಲಿ ಹಾಗೂ ಒಡಿಯಾ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಖ್ಯಾತಿ ಘಳಿಸಿದ್ದರು. ಎಮಾನ್ ಏಕ್ತಾ ಜಿನುಕ್’, ‘ಬೋಲೋ ತೊ ಅರ್ಷಿ’ ಮತ್ತು ‘ಈ ಬಂಗ್ಲಾರ್ ಮತಿ ತೆ’ ಹಾಡುಗಳು ನಿರ್ಮಲಾ ಮಿಶ್ರಾ ಅವರು ಹಾಡಿರುವ ಜನಪ್ರಿಯ ಬೆಂಗಾಲಿ ಹಾಡುಗಳಲ್ಲಿ ಒಂದಾಗಿದ್ದು, ಒಡಿಯಾದಲ್ಲಿ ಹಾಡಿದ್ದ ‘ನಿದಾ ಭಾರ ರಾತಿ ಮಧು ಝರಾ ಜಾನ್ಹಾ’ ಮತ್ತು ‘ಮೋ ಮನ ಬೀನಾ ರಾ ತಾರೆ’ ಹಾಡುಗಳು ಸಾಕಷ್ಟು ಫೇಮಸ್ ಆಗಿತ್ತು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now