ಬೆಂಗಳೂರಿನ ಭೂಗತ ಲೋಕದ ಕಥೆ ಹೊಂದಿರುವ ಹೆಡ್ ಬುಷ್ ಸಿನಿಮಾ ಬಿಡುಗಡೆಗೆ ಇನ್ನೂ ಕೆಲ ದಿನಗಳ ಮಾತ್ರವೇ ಭಾಕಿ ಇದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದೀಗ ಹೆಡ್ ಬುಷ್ ತಂಡ ಅ.16ರಂದು ದಾವಣಗೆರೆಯಲ್ಲಿ ಅದ್ದೂರಿ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಂಡಿದ್ದು ಸಾಕಷ್ಟು ನಟ, ನಟಿಯರು ಈವೆಂಟ್ ನಲ್ಲಿ ಭಾಗಿಯಾಗಲಿದ್ದಾರೆ. ದಾವಣಗೆರೆಯ ಎಂಬಿಎ ಗ್ರೌಂಡ್ ನಲ್ಲಿ ಸಂಜೆ 5.30ಕ್ಕೆ ಹೆಡ್ ಬುಷ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದ್ದು ನಟಿಯರಾದ ರಮ್ಯಾ, ರಚಿತಾ […]readmore
ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಇತ್ತೀಚೆಗೆ ಬಿಡುಗಡೆ ಆದ ಚಿತ್ರದ ಟ್ರೈಲರ್ ಪ್ರತಿಯೊಬ್ಬರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ. ಅಯೋದ್ಯೆಯಲ್ಲಿ ಅದ್ದೂರಿಯಾಗಿ ಟ್ರೈಲರ್ ರಿಲೀಸ್ ಆದ ಆದಿಪುರುಷ ಟ್ರೈಲರ್ ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಾನಾ ಕಾರಣಗಳಿಂದ ಸಾಕಷ್ಟು ಸದ್ದು ಮಾಡಿದ್ದ ಆದಿಪುರುಷ ಸಿನಿಮಾದ ಗ್ರಾಫಿಕ್ಸ್ ನೋಡಿ ಅಭಿಮಾನಿಗಳು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ರಾಮ, ಸೀತೆ, ಆಂಜನೇಯ, ರಾವಣ ಸೇರಿದಂತೆ ಪ್ರತಿಯೊಬ್ಬರನ್ನು ಕೆಟ್ಟದಾಗಿ ತೋರಿಸಲಾಗಿದೆ. ಜೊತೆಗೆ […]readmore
ಬಾಲಿವುಡ್ ನ ಎವರ್ ಗ್ರೀನ್ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಈಗ ತಾನೇ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ತಿದ್ದಾರೆ. 2018ರಲ್ಲಿ ತೆರೆಕಂಡ ಕರಣ್ ಜೋಹರ್ ನಿರ್ಮಾಣದ, ಶಶಾಂಕ್ ನಿರ್ದೇಶನದ ದಡಕ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಜಾನ್ವೀ ಒಂದೊಳ್ಳೆ ಹಿಟ್ ಸಿನಿಮಾಗಾಗಿ ಎದುರು ನೋಡ್ತಿದ್ದಾರೆ. ಚಿತ್ರರಂಗದಲ್ಲಿ ಕಷ್ಟಪಟ್ಟು ಮೇಲೆ ಬರುತ್ತಿರುವ ಜಾನ್ವಿ ನೆಪೋಟಿಸಂ ಟ್ರೋಲ್ ನಿಂದ ಬೇಸರಗೊಂಡಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಜಾನ್ವಿ ಕಪೂರ್, ನನ್ನ ಬಗ್ಗೆ ಸಾಕಷ್ಟು ಜನರಿಗೆ […]readmore
ನಟ ವಿಜಯ್ ರಾಘವೇಂದ್ರ ಕಿರುತೆರೆಯ ಜೊತೆ ಹಿರಿತೆರೆಯಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಒಂದರ ಹಿಂದೊಂದರಂತೆ ಸಿನಿಮಾಗಳಿಗೆ ಸಹಿ ಹಾಕುತ್ತಿರುವ ವಿಜಯ್ ರಾಘವೇಂದ್ರ ಇದೀಗ ಮತ್ತೊಂದು ಸೈಕಲಾಜಿಕಲ್ ಥ್ರಿಲರ್ ಸಿನಿಮಾಗೆ ಸಹಿ ಮಾಡಿದ್ದಾರೆ. ಈಗಾಗ್ಲೆ ವಿಜಯ್ ರಾಘವೇಂದ್ರ ಸೈಕಾಲಜಿಕಲ್ ಕಥಾ ಹಂದರ ಹೊಂದಿರುವ ಸೀತಾರಾಮ್ ಬಿನೋಯ್ ಕೇಸ್ ನಂ 18 ಹಾಗೂ ಕೇಸ್ ಆಫ್ ಕೊಂಡಾಣ ಚಿತ್ರದಲ್ಲಿ ನಟಿಸಿರುವ ವಿಜಯ್ ರಾಘವೇಂದ್ರ ಇದೀಗ ಸಿದ್ಧ್ ರುವ್ ನಿರ್ದೇಶನದ ಸೈಕಲಾಜಿಕಲ್ ಸಿನಿಮಾ ಮರೀಚಿಯಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಹಿಂದೆ ಬಾಲು […]readmore
ಬಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ, ಮೀಟೂ ಆರೋಪಿ ನಿರ್ಮಾಪಕ ಸಾಜಿದ್ ಖಾನ್ ಬಿಗ್ ಬಾಸ್ ಮನೆಯಲ್ಲಿ ನೆಮ್ಮದಿಯಾಗಿ ಆಟವಾಡುತ್ತಿದ್ದಾರೆ. ಆದರೆ ಸಾಜಿದ್ ಖಾನ್ ರನ್ನು ಮನೆಯಿಂದ ಹೊರ ಕಳುಹಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಳಿವಾಲ್ ಪತ್ರ ಬರೆದಿದ್ದಾರೆ. ಇದೀಗ ಸ್ವಾತಿ ಮಳಿವಾಲ್ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಾಚಾರದ ಬೆದರಿಕೆಗಳು ಬರುತ್ತಿವೆಯಂತೆ. ಕಳೆದ ಕೆಲ ದಿನಗಳ ಹಿಂದಷ್ಟೇ ಹಿಂದಿಯಲ್ಲಿ ಬಿಗ್ ಬಾಸ್ ಸೀಸನ್ 16 […]readmore
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಜೊತೆಗೆ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ನಟಿಸುತ್ತಿರುವ ಶಿವಣ್ಣ ಧನುಷ್ ನಟನೆಯ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ ಶಿವರಾಜ್ ಕುಮಾರ್ ನಟನೆಯ ಮತ್ತೊಂದು ಹೊಸ ಸಿನಿಮಾ ಸೆಟ್ಟೇರಿದೆ. ಸಂದೇಶ್ ನಾಗರಾಜ್ ಪ್ರೊಡಕ್ಷನ್ ಹೌಸ್ ನಲ್ಲಿ ಶ್ರೀನಿ ನಿರ್ದೇಶನದ ಘೋಸ್ಟ್ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಣಿಸಿಕೊಳ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ಮುಹೂರ್ತ ಸಮಾರಂಭ ಮಿನರ್ವ ಮಿಲ್ ನಲ್ಲಿ ನೆರವೇರಿದೆ. ಚಿತ್ರದ […]readmore
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯ ಚಿತ್ರ ಗಂಧದ ಗುಡಿ ಬಿಡುಗಡೆಗೆ ಇನ್ನೂ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಈಗಾಗ್ಲೆ ಟ್ರೈಲರ್ ನೋಡಿರೋ ಪ್ರೇಕ್ಷಕರು ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಗಂಧದ ಗುಡಿ ಸಾಕ್ಷ್ಯ ಚಿತ್ರ ಬಿಡುಗಡೆಗೆ ಅಪ್ಪು ಅಭಿಮಾನಿಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಪ್ಪು ಕನಸಿನ ಸಿನಿಮಾ ಗಂಧದ ಗುಡಿ ಬಿಡುಗಡೆಯನ್ನು ಡಿಫರೆಂಟ್ ಆಗಿ ಆಯೋಜಿಸಲು ಪ್ರತಿಯೊಬ್ಬರು ಮುಂದಾಗಿದ್ದಾರೆ. ಈಗಾಗ್ಲೆ ಡಾ.ರಾಜ್ ಕುಟುಂಬ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮವನ್ನು ಸಾಕಷ್ಟು ಅದ್ದೂರಿಯಾಗಿ ಆಚರಿಸಲು […]readmore
ಯಕ್ಷಗಾನ ಪಾತ್ರಧಾರಿಯ ವೇಷದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಲವು ದಶಕಗಳ ಕನಸನ್ನು ನಟ ರಮೇಶ್ ಅರವಿಂದ್ ನನಸು ಮಾಡಿಕೊಂಡಿದ್ದಾರೆ. ಶಿವರಾಮ್ ಕಾರಂತ ಪ್ರಶಸ್ತಿ ಸ್ವೀಕರಿಸಲು ಉಡುಪಿಗೆ ಭೇಟಿ ನೀಡಿದ್ದ ವೇಳೆ ನಟ ರಮೇಶ್ ಅರವಿಂದ್ ಯಕ್ಷಗಾನದ ವೇಷ ತೊಟ್ಟು ಕ್ಯಾಮೆರಾಗೆ ಫೋಸ್ ನೀಡಿದ್ದಾರೆ. ಉಡುಪಿಯ ಕೂದ್ರು ನೆಸ್ಟ್ ಗೆಸ್ಟ್ ಹೌಸಿಗೆ ಭೇಟಿ ಕೊಟ್ಟಿ ನೀಡಿದ್ದ ರಮೇಶ್ ಅರವಿಂದ್ ಈ ವೇಳೆ ಯಕ್ಷಗಾನದ ವೇಷ ತೊಟ್ಟು ಬಣ್ಣ ಹಚ್ಚಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಅವರಿಗೆ ಸಾಂಪ್ರದಾಯಿಕ ವೇಷ ಮತ್ತು ಬಣ್ಣವನ್ನು ಕಲಾವಿದ […]readmore
ಸದ್ಯ ಎಲ್ಲಿ ನೋಡಿದ್ರು ಕಾಂತಾರ ಸಿನಿಮಾದ್ದೇ ಹವಾ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರಕ್ಕೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದು ಪರಭಾಷೆಯ ಮಂದಿಯೂ ಕಾಂತಾರ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಉಳಿದ ಭಾಷೆಗಳಲ್ಲೂ ಕಾಂತಾರ ಬಿಡುಗಡೆಗೆ ಪ್ಲಾನ್ ನಡೆಯುತ್ತಿದೆ. ಕಾಂತಾರ ಸಿನಿಮಾ ಬಿಡುಗಡೆ ಆಗಿ ಎರಡು ವಾರ ಕಳೆದಿದೆ. ಆದರೆ ಇಂದಿಗೂ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಸ್ಟಾರ್ ನಟರೇ ರಿಷಬ್ ನಟನೆಯನ್ನು ಮೆಚ್ಚಿ ಹಾಡಿ ಹೊಗಳುತ್ತಿದ್ದಾರೆ. ಈ ಮಧ್ಯೆ ಕಾಂತಾರ ಸಿನಿಮಾ ಹಿಂದಿಯಲ್ಲಿ ಬಿಡುಗಡೆಗೆ […]readmore
ಈಗೇನಿದ್ರು ಸೋಷಿಯಲ್ ಮೀಡಿಯಾ ಯುಗ. ಅದರಲ್ಲೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲಾ ತಾಣದಲ್ಲಿ ಸದಾ ಸಖತ್ ಆಕ್ಟೀವ್ ಆಗಿರ್ತಾರೆ. ಸಿನಿಮಾ, ಪರ್ಸನಲ್ ಲೈಫ್ ಹೀಗೆ ಪ್ರತಿಯೊಂದು ವಿಷಯಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ತಲುಪಿಸುತ್ತಾರೆ. ಆದ್ರೆ ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಿದ್ದ ಖ್ಯಾತ ನಿರ್ದೇಶನ ಹಾಗೂ ನಿರ್ಮಾಪಕ ಕರಣ್ ಜೋಹರ್ ನಿನ್ನೆ ಇದ್ದಕ್ಕಿದ್ದ ಹಾಗೆ ಟ್ವೀಟರ್ ಖಾತೆಗೆ ವಿದಾಯ ಹೇಳಿದ್ದಾರೆ. ಏಕಾಏಕಿ ಸೋಷಿಯಲ್ ಮೀಡಿಯಾ ಖಾತೆಯಿಂದ ಹೊರ ನಡೆದಿರುವ ಕರಣ್ ಜೋಹರ್ ನಡೆಯ ಕುರಿತು ಸಾಕಷ್ಟು ಚರ್ಚೆ […]readmore
