ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಏಕಾಏಕಿ ಟ್ವಿಟರ್ ಗೆ ವಿದಾಯ ಹೇಳಿದ ಕರಣ್ ಜೋಹರ್
ಬಾಲಿವುಡ್ ಚಿತ್ರರಂಗದಲ್ಲಿ ಕರಣ್ ಜೋಹರ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಾಕಷ್ಟು ನಟ, ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕರಣ್ ಜೋಹರ್ ಅವರದ್ದು. ಸ್ಟಾರ್ ಕಿಡ್ ಗಳನ್ನು ಲಾಂಚ್ ಮಾಡುವುದರಲ್ಲಿ ಕರಣ್ ಜೋಹರ್ ಸದಾ ಮುಂದು. ಕರಣ್ ಜೋಹರ್ ರ ಒಂದೇ ಒಂದು ಟ್ವೀಟ್ ಗೆ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿರುತ್ತಾರೆ. ಆದರೆ ಇದೀಗ ಏಕಾ ಏಕಿ ಕರಣ್ ಟ್ವಿಟರ್ ಗೆ ವಿದಾಯ ಹೇಳಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಕರಣ್ ಜೋಹರ್ ನಿರ್ಮಾಣದ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಸಿನಿಮಾದ ಕಲೆಕ್ಷನ್ ಕುರಿತಾಗಿ ಸಾಕಷ್ಟು ಚರ್ಚೆಗಳು ಶುರುವಾಗಿತ್ತು. ಇದು ಕರಣ್ ಜೋಹರ್ ಗೆ ಸಾಕಷ್ಟು ನೋವುಂಟು ಮಾಡಿತ್ತು. ಅಲ್ಲದೆ ‘ನಾವು ವಿಮರ್ಶೆಯನ್ನು ಸ್ವೀಕರಿಸಲು ರೆಡಿ ಇದ್ದೇನೆ. ಆದರೆ ನೆಗೆಟಿವಿಟಿ ಸ್ವೀಕರಿಸುವುದು ಕಷ್ಟ’ ಎಂದು ಕರಣ್ ಹೇಳಿದ್ದರು. ಆ ಬೆನ್ನಲ್ಲೇ ಕರಣ್ ಜೋಹರ್ ಟ್ವಿಟರ್ನಿಂದ ಹೊರನಡೆದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
