ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಯಕ್ಷಗಾನ ಪಾತ್ರಧಾರಿ ವೇಷದಲ್ಲಿ ಮಿಂಚಿದ ನಟ ರಮೇಶ್ ಅರವಿಂದ್
ಉಡುಪಿಯ ಕೂದ್ರು ನೆಸ್ಟ್ ಗೆಸ್ಟ್ ಹೌಸಿಗೆ ಭೇಟಿ ಕೊಟ್ಟಿ ನೀಡಿದ್ದ ರಮೇಶ್ ಅರವಿಂದ್ ಈ ವೇಳೆ ಯಕ್ಷಗಾನದ ವೇಷ ತೊಟ್ಟು ಬಣ್ಣ ಹಚ್ಚಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಅವರಿಗೆ ಸಾಂಪ್ರದಾಯಿಕ ವೇಷ ಮತ್ತು ಬಣ್ಣವನ್ನು ಕಲಾವಿದ ಶೈಲೇಶ್ ಮಾಡಿದ್ದಾರೆ. ಅಂತರಾಷ್ಟ್ರೀಯ ಛಾಯಾಗ್ರಾಹಕ ಫೋಕಸ್ ರಾಘು ರಮೇಶ್ ಅರವಿಂದ್ ಅವರ ಫೋಟೋಗಳನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ.
ಉಡುಪಿಗೆ ಭೇಟಿ ನೀಡಿದ್ದ ರಮೇಶ್ ಅರವಿಂದ್ ಈ ವೇಳೆ ಮನೋವೈದ್ಯ ಡಾ. ವಿರೂಪಾಕ್ಷ ದೇವರು ಮನೆಯವರೊಂದಿಗೆ ಫೋಕಸ್ ರಾಘು ಅವರ ಕುದ್ರು ನೆಸ್ಟ್ ಭೇಟಿ ನೀಡಿದ್ದರು. ಪರಿಸರ, ನದಿ, ಮನೆ, ಕ್ರಿಯಾಶೀಲ ವಿನ್ಯಾಸವನ್ನು ಕಂಡು ಮೆಚ್ಚುಗೆ ಸೂಚಿಸಿದ್ದ ರಮೇಶ ಅರವಿಂದ್ ರಾಘು ಅವರ ಬಳಿ ತನಗೂ ಫೋಟೋ ಶೂಟ್ ಮಾಡ್ತೀರಾ ಎಂದು ಕೇಳಿದ್ದರು. ಈ ಮೂಲಕ ಕೊನೆಗೂ ತಮ್ಮ ಸಾಕಷ್ಟು ದಶಕಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.
