ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಶ್ರೀದೇವಿ ಮಗಳು ಎಂದು ಹೇಳಿಕೊಂಡು ಸ್ಟಾರ್ ಡಮ್ ಪಡೆಯಬೇಕು ಎಂದುಕೊಂಡಿಲ್ಲ: ಜಾನ್ವಿ ಕಪೂರ್
ಸಿನಿಮಾ ಸೆಟ್ ನಲ್ಲಿ ನಾನು ಎಷ್ಟು ಕಷ್ಟ ಪಡುತ್ತೇನೆ ಎಂಬುದು ನನಗೆ ಗೊತ್ತಿದೆ. ಅದನ್ನು ರಕ್ತದಲ್ಲಿ ಬೇಕಾದರು ಬರೆದುಕೊಡುತ್ತೇನೆ. ನನ್ನ ಕೆಲಸದ ಬಗ್ಗೆ ಯಾರಿಗೂ ಅನುಮಾನವೇ ಬೇಡ ಎಂದಿದ್ದಾರೆ. ಅಲ್ಲದೆ ನನ್ನ ತಾಯಿ ಶ್ರೀದೇವಿ ಸಿನಿಮಾಗಳಲ್ಲಿ ಬ್ಯುಸಿ ಇದ್ದಾಗ, ಯಶಸ್ಸಿನ ತುತ್ತ ತುದಿಯಲ್ಲಿ ಇದ್ದಾಗ ನಾನಿನ್ನು ಹುಟ್ಟಿರಲಿಲ್ಲ. ಆಕೆ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದ ಮೇಲೆ ನಾನು ಹುಟ್ಟಿದೆ ಎಂದು ಜಾನ್ವಿ ಹೇಳಿದ್ದಾರೆ.
ನಾನು ನನ್ನ ತಾಯಿಯ ಯಶಸ್ಸನ್ನು ನೋಡದೆ ಇರಬಹುದು. ಆದರೆ ಆಕೆ ಸೆಟ್ ನಲ್ಲಿ ಯಾವ ರೀತಿ ಇರುತ್ತಿದ್ದಳು, ಆಕೆಯ ಯಶಸ್ಸು ಹೇಗಿತ್ತು ಎಂಬುದನ್ನು ಬೇರೆಯವರು ಮಾತನಾಡುವಾಗ ತಿಳಿದುಕೊಂಡಿದ್ದೇನೆ ಎಂದಿದ್ದಾರೆ. ಸದ್ಯ ಜಾನ್ವಿ ಕಪೂರ್ ನಟನೆಯ ಮಿಲಿ ಟೀಸರ್ ರಿಲೀಸ್ ಆಗಿದ್ದು ನವೆಂಬರ್ 4ರಂದು ಸಿನಿಮಾ ತೆರೆಗೆ ಬರಲಿದೆ.
