ಟಾಲಿವುಡ್ ಸ್ಟಾರ್ ನಟಿ ಸಮಂತಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ನಟಿಸಿದ ಸಾಕಷ್ಟು ಸಿನಿಮಾಗಳು ಸೂಪರ್ ಹಿಟ್ ಆಗಿದ್ದು ಈ ಮಧ್ಯೆ ಬಾಲಿವುಡ್ ಗೂ ಎಂಟ್ರಿಕೊಟ್ಟಿದ್ದಾರೆ. ನಾಗಚೈತನ್ಯರಿಂದ ದೂರವಾದ ಬಳಿಕ ಸಮಂತಾರ ಮತ್ತಷ್ಟು ಯಶಸ್ಸಿನ ಏಣಿಗಳನ್ನು ಏರುತ್ತಿದ್ದಾರೆ. ಈ ಮಧ್ಯೆ ನೆಟ್ಟಿಗರು ಮಾತ್ರ ಸಮಂತಾ ಮೇಲೆ ಗರಂ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಸಮಂತಾ ಆಗಾಗ ತಮ್ಮ ಹೊಸ ಹೊಸ ಫೋಟೋಗಳು, ಅಪ್ ಡೇಟ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ, ಅಂತೆಯೇ […]readmore
ಕನ್ನಡದ ಬಿಗ್ ಬಾಸ್ ಓಟಿಟಿ ಶೋ ನಾಲ್ಕನೇ ವಾರ ಪೂರೈಸಿ ಐದನ್ನೆ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ದೊಡ್ಮನೆ ಒಳಗೆ ಪ್ರೀತಿ, ಪ್ರೇಮ, ಜಗಳ, ಕದನಗಳು ಹೆಚ್ಚುತ್ತಲೆ ಇದೆ. ನಿನ್ನೆ ತಾನೇ ಸೋನು ಗೌಡ ಮೇಲೆ ಆರ್ಯವರ್ಧನ್ ಗುರೂಜಿ ಗರಂ ಆಗಿದ್ದರು. ಇದೀಗ ರಾಕೇಶ್ ವಿಷಯದಿಂದ ಸೋನು ಮೇಲೆ ಮತ್ತೆ ಆರ್ಯವರ್ಧನ್ ಕೋಪ ಮಾಡಿಕೊಂಡಿದ್ದಾರೆ. ದೊಡ್ಮನೆಗೆ ಬಂದ ದಿನದಿಂದಲೂ ಸೋನು ಗೌಡ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೆ ಇದ್ದಾರೆ. ತಮ್ಮ ಬಾಯಿಯಿಂದಲೇ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ಸೋನು […]readmore
ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ನೃತ್ಯಗಾರ್ತಿಯಾಗಿ ಸಾಕಷ್ಟು ಖ್ಯಾತಿ ಘಳಿಸಿದ್ದಾರೆ. ಈ ಹಿಂದೆ ರಿಷಭಪ್ರಿಯ ಹೆಸರಿನ ಕಿರು ಚಿತ್ರದಲ್ಲಿ ನಟಸುವ ಮೂಲಕ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ರಾಗಿಣಿ ಬಳಿಕ ಲಾ ಸಿನಿಮಾದಲ್ಲಿ ನಾಯಕಿಯಾಗಿ ಗುರುತಿಸಿಕೊಂಡರು. ಆ ಬಳಿಕ ಪ್ರಜ್ವಲ್ ದೇವರಾಜ್ ನಟನೆಯ ಇನ್ಸ್ ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ರಾಗಿಣಿ ಇದೀಗ ಹೊಸ ಸಿನಿಮಾದ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ಶಾನುಭೋಗರ ಮಗಳು ಎಂದು ಹೆಸರಿಡಲಾಗಿದೆ. ಕನ್ನಡದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕರಲ್ಲಿ […]readmore
ಬಾಲಿವುಡ್ ನಲ್ಲಿ ಒಂದರ ಹಿಂದೊದರಂತೆ ಮದುವೆಗಳು ನಡೆಯುತ್ತಿವೆ. ಸೆಲೆಬ್ರಿಟಿಗಳು ಪ್ರೀತಿಸಿದವರ ಕೈ ಹಿಡಿದು ಹೊಸ ಜೀವನ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಮತ್ತೊಂದು ಜೋಡಿ ಹಸೆಮಣೆ ಏರಲು ರೆಡಿಯಾಗಿದ್ದು ತೆರೆ ಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಕಳೆದ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್.ರಾಹುಲ್ ಹಸೆಮಣೆ ಏರೋಕೆ ಸಿದ್ದವಾಗಿದ್ದಾರೆ. ಮಗಳ ಮದುವೆಯನ್ನು ಸಾಕಷ್ಟು ಅದ್ದೂರಿಯಾಗಿ ಮಾಡೋಕೆ ನಟ ಸುನೀಲ್ ಶೆಟ್ಟಿ ಮುಂದಾಗಿದ್ದು ತೆರೆ ಮರೆಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಈಗಾಗ್ಲೆ ಮದುವೆಯ […]readmore
ಸಾಮಾನ್ಯವಾಗಿ ನಟ, ನಟಿಯರು ಸಿನಿಮಾಗಳಿಗೆ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇದ್ದೆ ಇರುತ್ತೆ. ಆದರೆ ಈ ಬಗ್ಗೆ ಸೆಲೆಬ್ರಿಟಿಗಳು ಮಾತ್ರ ಯಾವುದೇ ಕಾರಣಕ್ಕೂ ಬಾಯಿ ಬಿಡುವುದಿಲ್ಲ. ಆಕಸ್ಮಿಕವಾಗಿ ಯಾರಾದರು ಕೇಳಿದರೆ ಏನಾದರೊಂದು ಹೇಳಿ ಮಾತು ತೇಲಿಸಿ ಬಿಡುತ್ತಾರೆ. ಸದ್ಯ ಇದೇ ಮೊದಲ ಭಾರಿಗೆ ಕನ್ನಡದ ಸ್ಟಾರ್ ನಟರೊಬ್ಬರು ತಮ್ಮ ಸಂಭಾವನೆ ಕುರಿತು ಮಾತನಾಡಿದ್ದಾರೆ. ಸ್ಯಾಂಡಲ್ ವುಡ್ ನಟ ಜಗ್ಗೇಶ್ ಸಾಕಷ್ಟು ವರ್ಷಗಳಿಂದಲೂ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿದ್ದಾರೆ. ಕಾಮಿಡಿ ನಟನಾಗಿ ಸಿನಿ ರಂಗಕ್ಕೆ ಎಂಟ್ರಿಕೊಟ್ಟ […]readmore
ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಕೆಲ ವರ್ಷಗಳ ಬಳಿಕ ಮದುವೆಯಾಗಲು ನಿರ್ಧರಿಸಿದ್ದಾರೆ. ಈ ಮಧ್ಯೆ ನಟ ಜಗ್ಗೇಶ್ ಇಂಟ್ರಸ್ಟಿಂಗ್ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಎಲ್ಲ ಅಂದುಕೊಂಡತೆ ಆಗಿದ್ದಿದ್ದರೆ ಅದಿತಿ ಪ್ರಭುದೇವ್ ಹಾಗೂ ಡಾಲಿ ಧನಂಜಯ್ ಮದುವೆಯಾಗ ಬೇಕಿತ್ತು ಎಂದು ಹೇಳಿ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ರಿಯಲ್ ಲೈಫ್ ನಲ್ಲಿ ಅದಿತಿ ಪ್ರಭುದೇವ ಹಾಗೂ ಡಾಲಿ ಧನಂಜಯ್ ಮಗುವೆ ಆಗಬೇಕಿತ್ತು. ಅದಕ್ಕಾಗಿ ಪೂರ್ವ ತಯಾರಿ ಕೂಡ ನಡೆದಿತ್ತು. ಇಬ್ಬರನ್ನು ಒಂದು […]readmore
ಬಿಗ್ ಬಾಸ್ ಮನೆಯಲ್ಲಿ ಒಬ್ಬರ ಮೇಲೊಬ್ಬರು ಕೂಗಾಡುವುದು ಕಿರುಚಾಡುವುದು ಇದ್ದಿದ್ದೆ. ಮೊನೆ ತಾನೆ ಸೋನು ಗೌಡ ಕಳಪೆ ಪಟ್ಟ ತೊಟ್ಟು ಬಿಗ್ ಬಾಸ್ ಮನೆಯ ಜೈಲು ಸೇರಿದ್ದಾಗ ಆಕೆಯನ್ನು ಸಮಾಧಾನ ಮಾಡಿದ್ದ ಆರ್ಯವರ್ಧನ್ ಗುರೂಜಿ ಇಂದು ಸೋನು ಗೌಡ ಮೇಲೆ ಫುಲ್ ಗರಂ ಆಗಿದ್ದಾರೆ. ಅತೀ ಹೆಚ್ಚು ಮಾತನಾಡುವ ವಿಚಾರವಾಗಿ ಆರ್ಯವರ್ಧನ್ ಗುರೂಜಿ ಮತ್ತು ಸೋನು ಶ್ರೀನಿವಾಸ್ ಗೌಡ ಮಧ್ಯೆ ಮಾತಿನ ಚಕಮಕಿ ನಡೆದು ಗಲಾಟೆ ಆಗಿದೆ. ಈ ವೇಳೆ ಆರ್ಯವರ್ಧನ್ ಆಡಿದ ಕೆಲವೊಂದು ಮಾತುಗಳಿಂದ ಸೋನು […]readmore
ಕಳೆದ ಕೆಲ ದಿನಗಳಿಂದ ಜೊತೆ ಜೊತೆಯಲಿ ಧಾರಾವಾಹಿ ಸೆಟ್ ನಲ್ಲಿ ನಡೆಯುತ್ತಿದ್ದ ಗದ್ದಲಕ್ಕೆ ಕೊನೆಗೂ ನಿರ್ದೇಶಕರು ಅಂತ್ಯ ಹಾಡಿದ್ದಾರೆ. ನಟ ಅನಿರುದ್ಧ್ ಹಾಗೂ ನಿರ್ದೇಶಕರ ನಡುವೆ ಮನಸ್ತಾಪ ಉಂಟಾಗಿದ್ದು ಈ ಕಾರಣಕ್ಕೆ ನಟ ಅನಿರುದ್ಧ್ ರನ್ನು ಧಾರಾವಾಹಿಯಿಂದ ಕೈ ಬಿಡಲಾಗಿದೆ. ಸದ್ಯ ಜೊತೆ ಜೊತೆಯಲಿ ಧಾರಾವಾಹಿ ಪ್ರೊಮೋ ಒಂದನ್ನ ಬಿಡುಗಡೆ ಮಾಡಿದ್ದು ಅದರಲ್ಲಿ ಅನಿರುದ್ಧ್ ಪಾತ್ರವನ್ನು ಮುಗಿಸಿದ್ದಾರೆ. ಅನಿರುದ್ಧ್ ಪಾತ್ರಕ್ಕೆ ಸಾಕಷ್ಟು ಮಂದಿಯ ಹೆಸರು ಕೇಳಿ ಬಂದಿತ್ತು. ಆದರೆ ಯಾವುದೂ ಫೈನಲ್ ಆಗಿರಲಿಲ್ಲ. ಸದ್ಯ ಧಾರಾವಾಹಿ ತಂಡ […]readmore
ಮಾಜಿ ವಿಶ್ವಸುಂದರಿ ಬಾಲಿವುಡ್ ನಟಿ ಸುಷ್ಮಿತಾ ಸೇನ್ ಜೊತೆಗಿರುವ ಫೋಟೋವನ್ನು ಕಳೆದು ಒಂದೂವರೆ ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಹಂಚಿಕೊಂಡಿದ್ದರು. ಜೊತೆಗೆ ಆಕೆಯ ಜೊತೆ ಡೇಟಿಂಗ್ ಮಾಡ್ತಿರೋದಾಗಿಯೂ ಹೇಳಿಕೊಂಡಿದ್ದರು. ಲಲಿತ್ ಮೋದಿ ಹಂಚಿಕೊಂಡಿದ್ದ ಫೋಟೋ ಸೋಷಿಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಟ್ಟದಲ್ಲಿ ಸದ್ದು ಮಾಡಿತ್ತು. ಲಲಿತ್ ಮೋದಿ ಜೊತೆಗಿನ ಫೋಟೋಗಳು ವೈರಲ್ ಆದರೂ ಸುಷ್ಮಿತಾ ಮಾತ್ರ ಯಾವುದಕ್ಕೂ ಪ್ರತಿಕ್ರಿಯಿಸದೇ ಸೈಲೆಂಟ್ ಆಗಿ ಬಿಟ್ಟಿದ್ದರು.ಜೊತೆಗೆ ವಿದೇಶಕ್ಕೆ ಹಾರಿ ಅಲ್ಲಿನ ಸುಂದರ ಸ್ಥಳಗಳಲ್ಲಿ ಎಂಜಾಯ್ […]readmore
ಎಂಭತ್ತರ ದಶಕದಲ್ಲಿ ದ್ವಾರಕೀಶ್ ನಿರ್ಮಾಣದ ” ಗುರು ಶಿಷ್ಯರು ” ಚಿತ್ರ ಕನ್ನಡಿಗರ ಮನ ಗಿದ್ದಿತ್ತು. ಈಗ ಆದೇ ಹೆಸರಿನ ಚಿತ್ರ ಮತ್ತೊಮ್ಮೆ ಬರುತ್ತಿದೆ. ಶರಣ್ ಕೃಷ್ಣ ಹಾಗೂ ತರುಣ್ ಕಿಶೋರ್ ಸುಧೀರ್ ನಿರ್ಮಿಸಿರುವ ಈ ಚಿತ್ರವನ್ನು ಜಡೇಶ್ ಕೆ ಹಂಪಿ ನಿರ್ದೇಶಿಸಿದ್ದಾರೆ. ಶರಣ್ ಹಾಗೂ ನಿಶ್ವಿಕಾ ನಾಯ್ಡು ನಾಯಕ – ನಾಯಕಿಯಾಗಿ ನಟಿಸಿರುವ ಈ ಚಿತ್ರ, ದೇಸಿ ಕ್ರೀಡೆಯಾದ ಖೊಖೊ ಆಟದ ಸುತ್ತ ನಡೆಯುತ್ತದೆ.. ಖೊಖೊ ಕೋಚರ್ ಆಗಿ ಶರಣ್ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಹದಿಮೂರು ಜನ […]readmore
