• June 2, 2026

ಹಸೆಮಣೆ ಏರಲು ಸಜ್ಜಾದ ಕೆ.ಎಲ್.ರಾಹುಲ್, ಅಥಿಯಾ ಶೆಟ್ಟಿ: ಡಿಸೆಂಬರ್ ಅಂತ್ಯದಲ್ಲಿ ಕಲ್ಯಾಣ

ಬಾಲಿವುಡ್ ನಲ್ಲಿ ಒಂದರ ಹಿಂದೊದರಂತೆ ಮದುವೆಗಳು ನಡೆಯುತ್ತಿವೆ. ಸೆಲೆಬ್ರಿಟಿಗಳು ಪ್ರೀತಿಸಿದವರ ಕೈ ಹಿಡಿದು ಹೊಸ ಜೀವನ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಮತ್ತೊಂದು ಜೋಡಿ ಹಸೆಮಣೆ ಏರಲು ರೆಡಿಯಾಗಿದ್ದು ತೆರೆ ಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಕಳೆದ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್.ರಾಹುಲ್ ಹಸೆಮಣೆ ಏರೋಕೆ ಸಿದ್ದವಾಗಿದ್ದಾರೆ. ಮಗಳ ಮದುವೆಯನ್ನು ಸಾಕಷ್ಟು ಅದ್ದೂರಿಯಾಗಿ ಮಾಡೋಕೆ ನಟ ಸುನೀಲ್ ಶೆಟ್ಟಿ ಮುಂದಾಗಿದ್ದು ತೆರೆ ಮರೆಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಈಗಾಗ್ಲೆ ಮದುವೆಯ ದಿನಾಂಕ ಹಾಗೂ ಸ್ಥಳವನ್ನು ಫಿಕ್ಸ್ ಮಾಡಲಾಗಿದೆ. ಹೋದಲ್ಲಿ ಬಂದಲ್ಲೆಲ್ಲ ಕೈ ಕೈ ಹಿಡಿದು ಸುತ್ತಾಡುತ್ತಿದ್ದ ರಾಹುಲ್ ಹಾಗೂ ಅಥಿಯಾ ಇದೀಗ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಇದೇ ಡಿಸೆಂಬರ್ ಅಂತ್ಯದ ವೇಳೆಗೆ ಹಸೆಮಣೆ ಏರಲು ಸಜ್ಜಾಗಿದ್ದು ಸುನೀಲ್ ಶೆಟ್ಟಿ ಅವರ ಖಂಡಾಲ ಬಂಗಲೆಯಲ್ಲಿ ಮದುವೆಯ ನಡೆಯಲಿದೆಯಂತೆ. ಮಗಳ ಮದುವೆಯ ಕುರಿತು ಸುನೀಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಹಾಗೂ ಅಥಿಯಾ ಮದುವೆಯಾಗಬೇಕು ಎಂದು ನಿರ್ಧರಿಸಿದ ತಕ್ಷಣವೇ ನಾನು ಒಪ್ಪಿಕೊಂಡೆ. ಆದರೆ ರಾಹುಲ್ ಸದ್ಯ ಹಲವು ಪಂದ್ಯಗಳಲಿ ತೊಡಗಿಕೊಂಡಿದ್ದಾರೆ. ರಾಹುಲ್ ಏಷ್ಯಾಕಪ್, ವಿಶ್ವಕಪ್, ದಕ್ಷಿಣ ಆಫ್ರಿಕಾ ಪ್ರವಾಸ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸರಣಿ ಆಡಬೇಕಿದ್ದು, ಅದರಿಂದ ವಿರಾಮ ಸಿಕ್ಕ ತಕ್ಷಣವೇ ಮದುವೆಯಾಗುತ್ತಾರೆ. ಏಕೆಂದರೆ ಮದುವೆ ಒಂದು ದಿನದಲ್ಲಿ ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಹಿಂದೆಯೂ ಸುನೀಲ್ ಶೆಟ್ಟಿ ಸಂದರ್ಶನವೊಂದರಲ್ಲಿ ಮಕ್ಕಳ ಭವಿಷ್ಯದ ಕುರಿತು ಪ್ರತಿಕ್ರಿಯಿಸಿದ್ದರು. ನನ್ನ ಇಬ್ಬರು ಮಕ್ಕಳು ಅವರ ಭವಿಷ್ಯವನ್ನು ಅವರವರೇ ನಿಭಾಯಿಸಲು ಸಮರ್ಥರಾಗಿದ್ದಾರೆ. ಅವರಿಗೆ ನನ್ನ ಆಶೀರ್ವಾದ ಸದಾ ಇರುತ್ತದೆ ಎಂದಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now