• June 20, 2026

karnatakaspecial.in

https://karnatakaspecial.in/

ಕಾಂತಾರ ಭರ್ಜರಿ ಕಲೆಕ್ಷನ್: ಪೊನ್ನಿಯನ್ ಸೆಲ್ವನ್, ಗಾಡ್ ಫಾದರ್ ಹಿಂದಿಕ್ಕಿದ ರಿಷಬ್ ಚಿತ್ರ

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಬಿಡುಗಡೆ ಆಗಿ ಎರಡು ವಾರ ಕಳೆದಿದೆ. ಆದರೂ ಇಂದಿಗೂ ಕಾಂತಾರ ಹವಾ ಕೊಂಚವೂ ಕಮ್ಮಿಯಾಗಿಲ್ಲ. ಕಾಂತಾರ ಚಿತ್ರಕ್ಕೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದು ಪರಭಾಷೆಯ ಮಂದಿಯೂ ಕಾಂತಾರ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಉಳಿದ ಭಾಷೆಗಳಲ್ಲೂ ಕಾಂತಾರ ಬಿಡುಗಡೆಗೆ ಪ್ಲಾನ್ ನಡೆಯುತ್ತಿದೆ. ಕಾಂತಾರ ಸ್ಯಾಂಡಲ್ ವುಡ್ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡುತ್ತಿದೆ. ಸೋಮವಾರದ ಘಳಿಕೆಯಲ್ಲಿ ಕೆಜಿಎಫ್ ಸಿನಿಮಾವನ್ನು ಹಿಂದಿಕ್ಕಿದ್ದ ಕಾಂತಾರ ಇದೀಗ ಮತ್ತೊಂದು ರೆಕಾರ್ಡ್ ಬ್ರೇಕ್ ಮಾಡಿದೆ. ಕಳೆದ ಅಕ್ಟೋಬರ್ […]Read More

ನಟ ಕಂ ನಿರ್ಮಾಪಕನ ಜೊತೆ ರಾಕುಲ್ ಪ್ರೀತ್ ಸಿಂಗ್ ಮದುವೆ

ಕನ್ನಡದ ಗಿಲ್ಲಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ಪರಭಾಷೆಯಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ನಟಿ ರಾಕುಲ್ ಪ್ರೀತ್ ಸಿಂಗ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ರಾಕುಲ್ ಪ್ರೀತ್ ಸಿಂಗ್ ಹಾಗೂ ಬಾಲಿವುಡ್ ನಟ ಕಂ ನಿರ್ಮಾಪಕ ಜಕ್ಕಿ ಬಗ್ ನಾನಿ ಮದುವೆಯ ವಿಚಾರ ಸಾಕಷ್ಟು ಭಾರಿ ಸುದ್ದಿಯಾಗಿದೆ. ಇದೀಗ ಈ ಜೋಡಿಯ ಮದುವೆಯ ಕುರಿತು ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಜಕ್ಕಿ ಹಾಗೂ ರಾಕುಲ್ ಪ್ರೀತ್ ಡೇಟಿಂಗ್ ಮಾಡ್ತಿರೋ […]Read More

ಕೊನೆಗೂ ರಿವೀಲ್ ಆಯ್ತು ಹೆಡ್ ಬುಷ್ ಚಿತ್ರದಲ್ಲಿ ಕ್ರೇಜಿಸ್ಟಾರ್ ಲುಕ್: ರವಿಚಂದ್ರನ್ ನೋಡಿ

ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತ ಹೆಟ್ ಬುಷ್ ಸಿನಿಮಾ ಇದೇ ಅ. 21ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು ಇದೇ ಅ.16ರಂದು ದಾವಣಗೆರೆಯಲ್ಲಿ ಚಿತ್ರದ ಪ್ರೀರಿಲೀಸ್ ಈವೆಂಟ್ ಆರ್ಗನೈಸ್ ಮಾಡಲಾಗಿದೆ. ಹೆಡ್ ಬುಷ್ ಡಾನ್ ಕುರಿತಾದ ಸಿನಿಮಾವಾಗಿದ್ದು ಚಿತ್ರದಲ್ಲಿ ಧನಂಜಯ್ ರೆಟ್ರೊ ಲುಕ್ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರದ ಮತ್ತೋರ್ವ ಪ್ರಮುಖ ಪಾತ್ರಧಾರಿ ಕ್ರೇಜಿಸ್ಟಾರ್ ರವಿಚಂದ್ರನ್ ಲುಕ್ ರಿವೀಲ್ ಆಗಿದೆ. ಹೆಡ್ ಬುಷ್ ಸಿನಿಮಾದಲ್ಲಿ ಕ್ರೇಜಿಸ್ಟಾರ್ ಲುಕ್ ಹೇಗಿರಲಿದೆ ಅನ್ನೋ ಕ್ಯೂರಿಯಾಸಿಟಿಗೆ […]Read More

ಅ.16ರಂದು ದಾವಣಗೆರೆಯಲ್ಲಿ ಹೆಟ್ ಬುಷ್ ಪ್ರೀರಿಲೀಸ್: ರಮ್ಯಾ, ರಚಿತಾ ರಾಮ್ ಆಗಮನ

ಬೆಂಗಳೂರಿನ ಭೂಗತ ಲೋಕದ ಕಥೆ ಹೊಂದಿರುವ ಹೆಡ್ ಬುಷ್ ಸಿನಿಮಾ ಬಿಡುಗಡೆಗೆ ಇನ್ನೂ ಕೆಲ ದಿನಗಳ ಮಾತ್ರವೇ ಭಾಕಿ ಇದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದೀಗ ಹೆಡ್ ಬುಷ್ ತಂಡ ಅ.16ರಂದು ದಾವಣಗೆರೆಯಲ್ಲಿ ಅದ್ದೂರಿ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಂಡಿದ್ದು ಸಾಕಷ್ಟು ನಟ, ನಟಿಯರು ಈವೆಂಟ್ ನಲ್ಲಿ ಭಾಗಿಯಾಗಲಿದ್ದಾರೆ. ದಾವಣಗೆರೆಯ ಎಂಬಿಎ ಗ್ರೌಂಡ್ ನಲ್ಲಿ ಸಂಜೆ 5.30ಕ್ಕೆ ಹೆಡ್ ಬುಷ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದ್ದು ನಟಿಯರಾದ ರಮ್ಯಾ, ರಚಿತಾ […]Read More

ಹಿಜಬ್ ವಿವಾದ ತೀರ್ಪು: ವಿಸ್ತೃತ ಪೀಠಕ್ಕೆ ವರ್ಗಾವಣೆ

ನವದೆಹಲಿ: ಕರಾವಳಿ ಕಾಲೇಜಿನಲ್ಲಿ ಹೊತ್ತಿಕೊಂಡ ಹಿಜಾಬ್ ವಿವಾದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉಡುಪಿ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಹೇಮಂತ್ ಗುಪ್ತಾ ವಜಾಗೊಳಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ರದ್ದು ಗೊಳಿಸಿರುವ ನ್ಯಾಯಮೂರ್ತಿ ಸುಧಾಂಶ ಧುಲಿಯಾ ಪ್ರಕಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆಗೊಳಿಸಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ವಿಸ್ತ್ರೃತ ಪೀಠ ರಚನೆ ಮಾಡಿ ಮತ್ತೆ ವಿಚಾರಣೆ ನಡೆಸಲಿದ್ದಾರೆ. ಅಲ್ಲಿಯವರೆಗೂ ಕರ್ನಾಟಕ ಹೈಕೋರ್ಟ್ ತೀರ್ಪಿನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರ ಶಾಲಾ- […]Read More

‘ಆದಿಪುರುಷ’ ಚಿತ್ರತಂಡದ ಮೇಲೆ ಕೇಸ್: ಪ್ರಭಾಸ್, ಸೈಫ್ ಅಲಿ ಖಾನ್ ಗೆ ಕಾನೂನು

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಇತ್ತೀಚೆಗೆ ಬಿಡುಗಡೆ ಆದ ಚಿತ್ರದ ಟ್ರೈಲರ್ ಪ್ರತಿಯೊಬ್ಬರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ. ಅಯೋದ್ಯೆಯಲ್ಲಿ ಅದ್ದೂರಿಯಾಗಿ ಟ್ರೈಲರ್ ರಿಲೀಸ್ ಆದ ಆದಿಪುರುಷ ಟ್ರೈಲರ್ ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಾನಾ ಕಾರಣಗಳಿಂದ ಸಾಕಷ್ಟು ಸದ್ದು ಮಾಡಿದ್ದ ಆದಿಪುರುಷ ಸಿನಿಮಾದ ಗ್ರಾಫಿಕ್ಸ್ ನೋಡಿ ಅಭಿಮಾನಿಗಳು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ರಾಮ, ಸೀತೆ, ಆಂಜನೇಯ, ರಾವಣ ಸೇರಿದಂತೆ ಪ್ರತಿಯೊಬ್ಬರನ್ನು ಕೆಟ್ಟದಾಗಿ ತೋರಿಸಲಾಗಿದೆ. ಜೊತೆಗೆ […]Read More

ಶ್ರೀದೇವಿ ಮಗಳು ಎಂದು ಹೇಳಿಕೊಂಡು ಸ್ಟಾರ್ ಡಮ್ ಪಡೆಯಬೇಕು ಎಂದುಕೊಂಡಿಲ್ಲ: ಜಾನ್ವಿ ಕಪೂರ್

ಬಾಲಿವುಡ್ ನ ಎವರ್ ಗ್ರೀನ್ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಈಗ ತಾನೇ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ತಿದ್ದಾರೆ. 2018ರಲ್ಲಿ ತೆರೆಕಂಡ ಕರಣ್ ಜೋಹರ್ ನಿರ್ಮಾಣದ, ಶಶಾಂಕ್ ನಿರ್ದೇಶನದ ದಡಕ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಜಾನ್ವೀ ಒಂದೊಳ್ಳೆ ಹಿಟ್ ಸಿನಿಮಾಗಾಗಿ ಎದುರು ನೋಡ್ತಿದ್ದಾರೆ. ಚಿತ್ರರಂಗದಲ್ಲಿ ಕಷ್ಟಪಟ್ಟು ಮೇಲೆ ಬರುತ್ತಿರುವ ಜಾನ್ವಿ ನೆಪೋಟಿಸಂ ಟ್ರೋಲ್ ನಿಂದ ಬೇಸರಗೊಂಡಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಜಾನ್ವಿ ಕಪೂರ್, ನನ್ನ ಬಗ್ಗೆ ಸಾಕಷ್ಟು ಜನರಿಗೆ […]Read More

‘ಮರೀಚಿ’ಯಲ್ಲಿ ವಿಜಯ್ ರಾಘವೇಂದ್ರಗೆ ಜೊತೆಯಾದ ಸೋನು ಗೌಡ

ನಟ ವಿಜಯ್ ರಾಘವೇಂದ್ರ ಕಿರುತೆರೆಯ ಜೊತೆ ಹಿರಿತೆರೆಯಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಒಂದರ ಹಿಂದೊಂದರಂತೆ ಸಿನಿಮಾಗಳಿಗೆ ಸಹಿ ಹಾಕುತ್ತಿರುವ ವಿಜಯ್ ರಾಘವೇಂದ್ರ ಇದೀಗ ಮತ್ತೊಂದು ಸೈಕಲಾಜಿಕಲ್ ಥ್ರಿಲರ್ ಸಿನಿಮಾಗೆ ಸಹಿ ಮಾಡಿದ್ದಾರೆ. ಈಗಾಗ್ಲೆ ವಿಜಯ್ ರಾಘವೇಂದ್ರ ಸೈಕಾಲಜಿಕಲ್ ಕಥಾ ಹಂದರ ಹೊಂದಿರುವ ಸೀತಾರಾಮ್ ಬಿನೋಯ್ ಕೇಸ್ ನಂ 18 ಹಾಗೂ ಕೇಸ್ ಆಫ್ ಕೊಂಡಾಣ ಚಿತ್ರದಲ್ಲಿ ನಟಿಸಿರುವ ವಿಜಯ್ ರಾಘವೇಂದ್ರ ಇದೀಗ ಸಿದ್ಧ್ ರುವ್ ನಿರ್ದೇಶನದ ಸೈಕಲಾಜಿಕಲ್ ಸಿನಿಮಾ ಮರೀಚಿಯಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಹಿಂದೆ ಬಾಲು […]Read More

ಬಿಗ್ ಬಾಸ್ ನಿಂದ ಸಾಜಿದ್ ಖಾನ್ ರನ್ನು ಹೊರಹಾಕಿ ಎಂದ ಡಿಸಿಡಬ್ಲ್ಯೂ ಮುಖ್ಯಸ್ಥೆಗೆ

ಬಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ, ಮೀಟೂ ಆರೋಪಿ ನಿರ್ಮಾಪಕ ಸಾಜಿದ್ ಖಾನ್ ಬಿಗ್ ಬಾಸ್ ಮನೆಯಲ್ಲಿ ನೆಮ್ಮದಿಯಾಗಿ ಆಟವಾಡುತ್ತಿದ್ದಾರೆ. ಆದರೆ ಸಾಜಿದ್ ಖಾನ್ ರನ್ನು ಮನೆಯಿಂದ ಹೊರ ಕಳುಹಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಳಿವಾಲ್ ಪತ್ರ ಬರೆದಿದ್ದಾರೆ. ಇದೀಗ ಸ್ವಾತಿ ಮಳಿವಾಲ್ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಾಚಾರದ ಬೆದರಿಕೆಗಳು ಬರುತ್ತಿವೆಯಂತೆ. ಕಳೆದ ಕೆಲ ದಿನಗಳ ಹಿಂದಷ್ಟೇ ಹಿಂದಿಯಲ್ಲಿ ಬಿಗ್ ಬಾಸ್ ಸೀಸನ್ 16 […]Read More

ಅದ್ದೂರಿಯಾಗಿ ನೆರವೇರಿತು ಶಿವರಾಜ್ ಕುಮಾರ್ ನಟನೆಯ ಘೋಸ್ಟ್ ಸಿನಿಮಾದ ಮುಹೂರ್ತ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಜೊತೆಗೆ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ನಟಿಸುತ್ತಿರುವ ಶಿವಣ್ಣ ಧನುಷ್ ನಟನೆಯ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ ಶಿವರಾಜ್ ಕುಮಾರ್ ನಟನೆಯ ಮತ್ತೊಂದು ಹೊಸ ಸಿನಿಮಾ ಸೆಟ್ಟೇರಿದೆ. ಸಂದೇಶ್ ನಾಗರಾಜ್ ಪ್ರೊಡಕ್ಷನ್ ಹೌಸ್ ನಲ್ಲಿ ಶ್ರೀನಿ ನಿರ್ದೇಶನದ ಘೋಸ್ಟ್ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಣಿಸಿಕೊಳ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ಮುಹೂರ್ತ ಸಮಾರಂಭ ಮಿನರ್ವ ಮಿಲ್ ನಲ್ಲಿ ನೆರವೇರಿದೆ. ಚಿತ್ರದ […]Read More

Phone icon
Call Now
Reach us!
WhatsApp icon
Chat Now