• June 2, 2026

ಕಾಂತಾರ ಭರ್ಜರಿ ಕಲೆಕ್ಷನ್: ಪೊನ್ನಿಯನ್ ಸೆಲ್ವನ್, ಗಾಡ್ ಫಾದರ್ ಹಿಂದಿಕ್ಕಿದ ರಿಷಬ್ ಚಿತ್ರ

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಬಿಡುಗಡೆ ಆಗಿ ಎರಡು ವಾರ ಕಳೆದಿದೆ. ಆದರೂ ಇಂದಿಗೂ ಕಾಂತಾರ ಹವಾ ಕೊಂಚವೂ ಕಮ್ಮಿಯಾಗಿಲ್ಲ. ಕಾಂತಾರ ಚಿತ್ರಕ್ಕೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದು ಪರಭಾಷೆಯ ಮಂದಿಯೂ ಕಾಂತಾರ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಉಳಿದ ಭಾಷೆಗಳಲ್ಲೂ ಕಾಂತಾರ ಬಿಡುಗಡೆಗೆ ಪ್ಲಾನ್ ನಡೆಯುತ್ತಿದೆ. ಕಾಂತಾರ ಸ್ಯಾಂಡಲ್ ವುಡ್ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡುತ್ತಿದೆ. ಸೋಮವಾರದ ಘಳಿಕೆಯಲ್ಲಿ ಕೆಜಿಎಫ್ ಸಿನಿಮಾವನ್ನು ಹಿಂದಿಕ್ಕಿದ್ದ ಕಾಂತಾರ ಇದೀಗ ಮತ್ತೊಂದು ರೆಕಾರ್ಡ್ ಬ್ರೇಕ್ ಮಾಡಿದೆ. ಕಳೆದ ಅಕ್ಟೋಬರ್ 30ರಂದು ತೆರೆಗೆ ಬಂದ ಕಾಂತಾರ ಸಿನಿಮಾ ಬಿಡುಗಡೆ ಆದ 15 ದಿನಗಳಲ್ಲಿ 58 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಹಾಗೂ ಚಿರಂಜೀವಿ ನಟನೆಯ ಗಾಡ್ ಫಾದರ್ ಸಿನಿಮಾವನ್ನು ಹಿಂದಿಕ್ಕಿದೆ. ಕಾಂತಾರ ವಿಶ್ವಾದ್ಯಂತ ₹80+ ಕೋಟಿ ಗಳಿಸಿದೆ. ಮಂಗಳವಾರ ದೇಶೀಯವಾಗಿ ಸುಮಾರು ₹ 5 ಕೋಟಿ ನಿವ್ವಳ ಗಳಿಸಿದೆ. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಎಲ್ಲಾ ಭಾಷೆಗಳಲ್ಲಿ ಸುಮಾರು ₹ 4 ಕೋಟಿ ಗಳಿಸಿದೆ. ಗಾಡ್‌ಫಾದರ್ ಕೇವಲ ₹ 2 ಕೋಟಿ ಗಳಿಸಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ‘ಕೆ.ಜಿ.ಎಫ್ 2’ ಚಿತ್ರವನ್ನು ಬಾಲಿವುಡ್ ನಲ್ಲಿ ದಾಖಲೆ ಮಟ್ಟದ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ ಕಾಂತಾರ ಚಿತ್ರವನ್ನು ಅಧಿಕ ಸಂಖ್ಯೆಯ ಚಿತ್ರಮಂದಿಗಳಲ್ಲಿ ಬಿಡುಗಡೆ ಮಾಡುವ ಮೂಲಕ ಹೊಂಬಾಳೆ ಬ್ಯಾನರ್ ಸದ್ದು ಮಾಡುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now