• June 19, 2026

karnatakaspecial.in

https://karnatakaspecial.in/

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಪಟ್ಟಕ್ಕೆ ವಾರ್: ಮನೆಯಿಂದ ಹೊರ ಹೋಗಲು ಮುಂದಾದ

ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ಬಿರುಸು ಹೆಚ್ಚಾಗುತ್ತಿದೆ. ಈಗಾಗ್ಲೆ ನಾಲ್ಕೈದು ಜನ ಮನೆಯಿಂದ ಹೊರ ಹೋಗಿದ್ದು ಉಳಿದ ಸ್ಪರ್ಧಿಗಳು ಭಾರಿ ಪೈಪೋಟಿಗೆ ಬಿದ್ದು ಆಟವಾಡುತ್ತಿದ್ದಾರೆ. ಇದೀಗ ಕ್ಯಾಪ್ಟೆನ್ಸಿ ಟಾಸ್ಕ್ ವಿಚಾರಕ್ಕೆ ಅನುಪಮಾ ಗೌಡ ಹಾಗೂ ರೂಪೇಶ್ ರಾಜಣ್ಣ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ರೂಪೇಶ್ ರಾಜಣ್ಣ ಮನೆಯಿಂದ ಹೊರ ಹೋಗಲು ಮುಂದಾಗಿದ್ದಾರೆ. ಆರಂಭದಲ್ಲಿ ಚೇನ್ನಾಗಿಯೇ ಇದ್ದ ಮನೆ ಮಂದಿಯ ಮಧ್ಯೆ ಇದೀಗ ಮನಸ್ತಾಪ ಶುರುವಾಗಿದೆ. ದೊಡ್ಮನೆ ದಿನದಿಂದ ದಿನಕ್ಕೆ ಸಾಕಷ್ಟು ರೋಚಕ ತಿರುವು ಪಡೆದುಕೊಂಡು […]Read More

ಅನಾರೋಗ್ಯದ ಸುದ್ದಿ ಬೆನ್ನಲ್ಲೆ ಸಮಂತಾರನ್ನು ಭೇಟಿ ಮಾಡಲಿದ್ದಾರೆ ನಾಗಚೈತನ್ಯ

ಟಾಲಿವುಡ್ ನಟಿ ಸಮಂತಾ `ಮೈಯೋಸಿಟಿಸ್’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಇತ್ತೀಚೆಗಷ್ಟೇ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಈ ಸುದ್ದಿಯ ಬೆನ್ನಲ್ಲೆ ಸಮಂತಾ ಕುರಿತ ಮತ್ತೊಂದು ಸುದ್ದಿಯೊಂದು ಹರಿದಾಡುತ್ತಿದೆ. ಸಮಂತಾಗೆ ಅನಾರೋಗ್ಯದಿಂದಾಗಿ ಸಾಕಷ್ಟು ನೋವಿ ಅನುಭವಿಸಿದ್ದಾರೆ. ಆರೋಗ್ಯ ಕೈಕೊಟ್ಟ ಬೆನ್ನಲ್ಲೇ ಮಾಜಿ ಪತ್ನಿ ಸಮಂತಾರನ್ನು ನಾಗಚೈತನ್ಯ ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಮಂತಾ `ಮೈಯೋಸಿಟಿಸ್’ ಕಾಯಿಲೆಯಿಂದ ಬಳುತ್ತಿರುವುದು ಹೇಳಿಕೊಂಡಿದ್ದು ಆದಷ್ಟು ಬೇಗ ಅದರಿಂದ ಆಚೆ ಬರುವುದಾಗಿ ಹೇಳಿದ್ದಾರೆ,. ಸಮಂತಾರಾ ಆರೋಗ್ಯದ ಸುದ್ದಿ ತಿಳಿದ ಸಾಕಷ್ಟು […]Read More

ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದ ಅವ್ಯವಸ್ಥೆ ಕುರಿತು ವ್ಯಂಗ್ಯವಾಡಿದ ಡಿಕೆಶಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನವೆಂಬರ್ 1ರಂದು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಆದರೆ ಕಾರ್ಯಕ್ರಮದ ಅವ್ಯವಸ್ಥೆಯ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡ ಡಿ.ಕೆ. ಶಿವಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ. ಸುಸಜ್ಜಿತ ವೇದಿಕೆಯಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿಲ್ಲವಲ್ಲ ಎಂದು ಸರಕಾರವನ್ನು ವ್ಯಂಗ್ಯವಾಡಿದ್ದಾರೆ. ‘ನಿನ್ನೆ ಯಾಕೆ ಸ್ಟೇಜ್ ಹಾಗಾಯ್ತು, ಸ್ಟೇಜ್ ಕಥೆ ಏನಾಯ್ತು ಎಂದು ಪ್ರಶ್ನೆ ಮಾಡಿರುವ  ಅವರು, ಸ್ಟೇಜ್ ಆರ್ಗನೈಸೆಷನ್ ಬಗ್ಗೆ ಕಿಡಿಕಾರಿದ್ದಾರೆ. ‘ವೆರಿ ಸಾರಿ ಫಾರ್ ಸ್ಟೇಜ್ […]Read More

ರಚಿತಾ ರಾಮ್ ಬಗ್ಗೆ ಕ್ರಾಂತಿ ಪ್ರೆಸ್ ಮೀಟ್ ನಲ್ಲಿ ದರ್ಶನ್ ಏನ್ ಹೇಳಿದ್ರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರಕ್ಕಾಗಿ ಕಾದು ಕೂತಿರೋ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈಗಾಗ್ಲೆ ಚಿತ್ರದ ಕೆಲಸಗಳು ಆಲ್ ಮೋಸ್ಟ್ ಕಂಪ್ಲೀಟ್ ಆಗಿದ್ದು ಥಿಯೇಟರ್ ನಲ್ಲಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. 2023 ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕ್ರಾಂತಿ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಕ್ರಾಂತಿ ಚಿತ್ರಕ್ಕೆ ವಿ. ಹರಿಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ದರ್ಶನ್ ನಟನೆಯ ಯಜಮಾನ ಚಿತ್ರ ನಿರ್ದೇಶಿಸಿದ್ದ ಹರಿಕೃಷ್ಣ ಇದೀಗ ಕ್ರಾಂತಿ […]Read More

ಸ್ಯಾಂಡಲ್ ವುಡ್ ನಲ್ಲಿ ‘ಕ್ರಾಂತಿ’ ಹರಿಸಲು ಮುಂದಾದ ದರ್ಶನ್: ಅಕ್ಷರ ಕ್ರಾಂತಿ ಆಗಮನಕ್ಕೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಕ್ರಾಂತಿ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಇಷ್ಟು ದಿನಗಳ ಚಿತ್ರದ ಕುರಿತು ಹೆಚ್ಚು ಮಾಹಿತಿ ಬಿಟ್ಟುಕೊಡದ ಚಿತ್ರತಂಡ ಇದೀಗ ಸದ್ದಿಲ್ಲದೆ ಸಿನಿಮಾ ಮುಗಿಸಿ ರಿಲೀಗೆ ಎದುರು ನೋಡುತ್ತಿದೆ. ಕ್ರಾಂತಿ ದರ್ಶನ್ ನಟನೆಯ 55ನೇ ಚಿತ್ರವಾಗಿದ್ದು ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈ ಚಿತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟ ಇದೆ. ಅವನತಿಯತ್ತ ಸಾಗುತ್ತಾ ಇರುವ ಸರ್ಕಾರಿ ಶಾಲೆಗಳನ್ನು ಉಳಿಸುವುದು ಹೇಗೆ ಮತ್ತು ಸರ್ಕಾರಿ […]Read More

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಆರೋಪಿಗಳ ಸುಳಿವು ನೀಡಿದವರಿಗೆ ಭಾರೀ ನಗದು ಬಹುಮಾನ

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳಿಗಾಗಿ ಪೊಲೀಸರು ಭಾರಿ ಶೋಧ ನಡೆಸುತ್ತಿದ್ದಾರೆ. ಇದೀಗ ಆರೋಪಿಗಳ ಪತ್ತೆಗೆ ಬಲೆ ಬೀಸಿರುವ ಖಾಕಿ ಪಡೆ ಆರೋಪಿಗಳ ಕುರಿತು ಮಾಹಿತಿ ನೀಡುವವರಿಗೆ ಬಾರಿ ನಗದು ಬಹುಮಾನ ಘೋಷಿಸಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಪ್ರಮುಖ ಆರೋಪಿಗಳ ಕುರಿತು ಮಾಹಿತಿ ನೀಡಿದವರಿಗೆ ಒಟ್ಟು 14 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಎನ್‌ಐಎ […]Read More

ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರದ ಯಂಗ್ ಲುಕ್ ರಿವೀಲ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾದ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ ಹಂಚಿಕೊಂಡು ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದ ಚಿತ್ರತಂಡ ಇದೀಗ ಶಿವಣ್ಣನ ಮತ್ತೊಂದು ಲುಕ್ ರಿವೀಲ್ ಮಾಡಿದೆ. 67ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ವೇದ ಸಿನಿಮಾ ತಂಡ ಚಿತ್ರದ ವಿಶೇಷ ಪೋಟೋ ಹಂಚಿಕೊಂಡಿದೆ. ಈ ಫೋಟೋದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವೇದ ಶಿವರಾಜ್ ಕುಮಾರ್ ನಟನೆಯ 125ನೇ […]Read More

ಮೆಕ್ಕಾಗೆ ಹೊರಟ್ರಾ ಇಳಯರಾಜ ಪುತ್ರ ಯುವನ್ ಶಂಕರ್?

ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ, ಇಳಯರಾಜ ಅವರ ಪುತ್ರ ಯುವನ್ ಶಂಕರ್ ರಾಜರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಶಂಕರ್ ರಾಜ ಮೆಕ್ಕಾ ಯಾತ್ರೆಗೆ ತೆರಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಇದಕ್ಕೆ ಪುಷ್ಠಿ ನೀಡುವಂತೆ ಫೋಟೋವೊಂದು ಸಾಮಾಜಿಕ ಜಾಲಾ ತಾಣದಲ್ಲಿ ಹರಿದಾಡುತ್ತಿದೆ. ಯುವನ್ ಶಂಕರ್ ರಾಜ್ ಯಾತ್ರಿಕರ ಉಡುಪಿನಲ್ಲಿ ವಿಮಾದಲ್ಲಿ ಕಾಣಿಸಿಕೊಂಡಿದ್ದು ಮೆಕ್ಕಾ ಯಾತ್ರೆಗೆ ಹೊರಟ್ಟಿದ್ದಾರೆ ಎನ್ನಲಾಗುತ್ತಿದೆ.  ಆದರೆ ಈ ಬಗ್ಗೆ ಯುವನ್ ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. […]Read More

ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಅಂದು ಅಪ್ಪ, ಇಂದು ಅಪ್ಪು ಎಂದ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಪ್ಪು ಅವರಿಗೆ ಮರಣೊತ್ತರವಾಗಿ ನೀಡಿದ ಪ್ರಶಸ್ತಿಯನ್ನು ಅಪ್ಪು ಪತ್ನಿ ಅಶ್ವಿನಿ ಸ್ವೀಕರಿಸಿದ್ದಾರೆ. ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದಕ್ಕಾಗಿ ನಟ ರಾಘವೇಂದ್ರ ರಾಜ್‌ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭಕ್ಕೆ ಹೆಮ್ಮೆ ಪಡಬೇಕು. ನಮ್ಮ ತಂದೆ ಕರ್ನಾಟಕ ರತ್ನ ಪಡೆದುಕೊಳ್ಳುವಾಗ 30 ವರ್ಷದ ಹಿಂದೆ ನಮ್ಮನ್ನು ಕರೆದುಕೊಂಡು ಬಂದಿದ್ದರು. ಈಗ ನನ್ನ ತಮ್ಮ ಅಪ್ಪು ಕರೆಸಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಗೂ ಒಂದು ಶಕ್ತಿ ಇರುತ್ತದೆ […]Read More

ಅಪ್ಪು ಭಾವಚಿತ್ರ ಸೇರಿದ ಕರ್ನಾಟಕ ರತ್ನ ಪದಕ: ವೈರಲ್ ಆಯ್ತು ಫೋಟೋ

ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ಸರ್ಕಾರ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ರಜನಿಕಾಂತ್, ಜೂನಿಯರ್ ಎನ್ ಟಿ ಆರ್, ಸುಧಾಮೂರ್ತಿ ಸೇರಿದಂತೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಜೋರು ಮಳೆಯಲ್ಲೂ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಮಳೆಯಲ್ಲೇ ಪತಿಯ ಪರವಾರ ಭಾವುಕರಾಗಿಯೇ ಅಶ್ವಿನಿ ‘ಕರ್ನಾಟಕ ರತ್ನ’ ಪ್ರಶಸ್ತಿ ಸ್ವೀಕರಿಸಿ ಧನ್ಯವಾದ ಸಲ್ಲಿಸಿದರು. ಬಳಿಕ  ‘ಕರ್ನಾಟಕ ರತ್ನ’ ಪ್ರಶಸ್ತಿಯ ಪದಕವನ್ನು ಪುನೀತ್ ರಾಜ್‌ಕುಮಾರ್ ಅವರ […]Read More

Phone icon
Call Now
Reach us!
WhatsApp icon
Chat Now