ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮೆಕ್ಕಾಗೆ ಹೊರಟ್ರಾ ಇಳಯರಾಜ ಪುತ್ರ ಯುವನ್ ಶಂಕರ್?
2014ರಲ್ಲಿ ಶಂಕರ್ ಯುವನ್ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವುದುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಮೈಕ್ರೋ ಬ್ಲಾಗಿಂಗ್ ಟ್ವಿಟರ್ ನಲ್ಲಿ ನಾನು ಇಸ್ಲಾಂ ಧರ್ಮದ ಹಿಂಬಾಲಕನಾಗಿದ್ದು, ಅದಕ್ಕಾಗಿ ನನಗೆ ಹೆಮ್ಮೆಯಿದೆ ಎಂದು ಯುವನ್ ಬರೆದು ಕೊಂಡಿದ್ದರು. ಈ ವಿಚಾರದಲ್ಲಿ ನನ್ನ ಮತ್ತು ನನ್ನ ತಂದೆಯ ನಡುವೆ ಭಿನ್ನಾಬಿಪ್ರಾಯವಿಲ್ಲ ಎಂದು ಕೂಡ ಯುವನ್ ಶಂಕರ್ ರಾಜ್ ಹೇಳಿದ್ದರು.
ಯುವನ್ ಶಂಕರ್ ಇಸ್ಲಾಂ ಧರ್ಮದ ಮತಾಂತರಗೊಳ್ಳುವ ಮುನ್ನ ಇಸ್ಲಾ ಧರ್ಮದ ಪದ್ದತಿಯ ಬಗ್ಗೆ ಒಂದು ವರ್ಷ ತರಬೇತಿ ಪಡೆದಿದ್ದರು. ದಿನವೊಂದಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದಾರೆ. ತನ್ನ ಬ್ಯೂಸಿ ಕೆಲಸದ ಒತ್ತಡದ ನಡುವೆಯೂ ನಮಾಜ್ ಮಾತ್ರ ಯುವನ್ ತಪ್ಪಿಸುತ್ತಿರಲಿಲ್ಲವಂತೆ.
ಯುವನ್ ಶಂಕರ್ ರಾಜ ಇದುವರೆಗೆ ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಪ್ರಮುಖವಾಗಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಯುವನ್ ಅವರಿಗೆ ಬಹುದೊಡ್ಡ ಹೆಸರು ಇದೆ. 1996ಲ್ಲಿ ತಮಿಳು ಚಿತ್ರ ಅರವಿಂದನ್ ಮೂಲಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಯುವನ್ ಶಂಕರ್ ರಾಜ ಸಿನಿ ಜರ್ನಿ ಆರಂಭಿಸಿದರು.
