• June 19, 2026

ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರದ ಯಂಗ್ ಲುಕ್ ರಿವೀಲ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾದ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ ಹಂಚಿಕೊಂಡು ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದ ಚಿತ್ರತಂಡ ಇದೀಗ ಶಿವಣ್ಣನ ಮತ್ತೊಂದು ಲುಕ್ ರಿವೀಲ್ ಮಾಡಿದೆ. 67ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ವೇದ ಸಿನಿಮಾ ತಂಡ ಚಿತ್ರದ ವಿಶೇಷ ಪೋಟೋ ಹಂಚಿಕೊಂಡಿದೆ. ಈ ಫೋಟೋದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವೇದ ಶಿವರಾಜ್ ಕುಮಾರ್ ನಟನೆಯ 125ನೇ ಚಿತ್ರವಾಗಿದ್ದು ಹೋಮ್ ಬ್ಯಾನರ್ ‘ಗೀತಾ ಪಿಕ್ಚರ್ಸ್’ನಲ್ಲಿ ತಯಾರಾಗುತ್ತಿರುವ ಮೊಟ್ಟ ಮೊದಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದದಾರೆ. ವೇದ ಸಿನಿಮಾ 1960ರ ಕಥೆಯನ್ನೇ ಆಧರಿಸಿದೆ. ಸ್ವತಂತ್ರ ನಂತರದ ಕಾಲಘಟದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಪಾತ್ರ ಪೋಷಣೆ ಭಿನ್ನ-ವಿಭಿನ್ನವಾಗಿಯೇ ಇರಲಿದ್ದು, ಪ್ರತಿ ಲುಕ್​ ನಲ್ಲೂ ಶಿವರಾಜ್ ಕುಮಾರ್ ಸಖತ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇದೇ ವರ್ಷ ಡಿಸೆಂಬರ್-23 ಕ್ಕೆ ವೇದ ಸಿನಿಮಾ ರಿಲೀಸ್ ಆಗುತ್ತಿದೆ. ಕ್ರಿಸ್ಮಸ್ ಹಬ್ಬಕ್ಕೂ ಮುನ್ನವೇ ಕನ್ನಡದ ವೇದ ತೆರೆಗೆ ಬರುತ್ತದೆ. ಕನ್ನಡದ ವೇದ ಚಿತ್ರ ವಿಶೇಷವಾಗಿಯೇ ಇದೆ. ಇತ್ತೀಚಿಗೆ ಬಿಟ್ಟಿರೋ ಪೋಸ್ಟರ್ ನಲ್ಲಿ ಪ್ರಮುಖ ಮಹಿಳಾ ಪಾತ್ರಗಳು ರಿವೀಲ್ ಆಗಿದ್ದವು. ಆ ದಿನದಿಂದಲೇ ಸಿನಿಮಾ ಮಹಿಳಾ ಪ್ರಧಾನ ಚಿತ್ರವೇ ಅನ್ನೋ ಪ್ರಶ್ನೆನೂ ಹುಟ್ಟಿಕೊಂಡಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now