• March 14, 2026

ನನಗೆ ದೇವರು ಕೊಟ್ಟ ಗಿಫ್ಟ್ ನೀನು: ಮುದ್ದು ಮಡದಿಯನ್ನು ಹೊಗಳಿದ ನಿರ್ಮಾಪಕರ ರವೀಂದರ್

ಕಳೆದ ಮೂರು ದಿನಗಳ ಹಿಂದೆ ತಿರುಪತಿಯಲ್ಲಿ ವಿವಾಹವಾದ ತಮಿಳು ನಟಿ ಮಹಾಲಕ್ಷ್ಮೀ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗ್ತಿದ್ದಾರೆ. ಮಹಾಲಕ್ಷ್ಮೀ ಮದುವೆಯ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ಟ್ರೋಲಿಗರು ನಾನಾ ರೀತಿಯ ಕಾಮೆಂಟ್ ಮಾಡೋಕೆ ಶುರುಮಾಡಿದ್ದರು. ಆದರೆ ಈ ಜೋಡಿಗಳು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನದೆ ಹೊಸ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೀಗ ತಮ್ಮ ಮದುವೆಯ ಬಗ್ಗೆ ರವೀಂದರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆಯ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಪತ್ನಿಯ ಕುರಿತು ರವೀಂದರ್ ಬರೆದುಕೊಂಡಿದ್ದಾರೆ. ‘ನೀನು ನನಗೆ ದೇವರು ಕೊಟ್ಟಿರುವ ಗಿಫ್ಟ್. ನನ್ನೆಲ್ಲ ಸಂಕಟಗಳನ್ನು ದಾಟಿಕೊಳ್ಳಲು ಖುದ್ದಾಗಿ ಆ ಪರಮಾತ್ಮನೇ ನಿನ್ನನ್ನು ಕಳುಹಿಸಿದ್ದಾನೆ’ ಎಂದಿದ್ದಾರೆ. ತಮ್ಮ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಹಾರೈಸಿ ಎಂದು ಅಭಿಮಾನಿಗಳ ಬಳಿ ರವೀಂದರ್ ಕೇಳಿಕೊಂಡಿದ್ದಾರೆ.  ಈಗಾಗಲೇ ಮಹಾಲಕ್ಷ್ಮೀ ಹಾಗೂ ರವೀಂದರ್ ಗೆ ಮದುವೆಯಾಗಿ ದಾಂಪತ್ಯದಲ್ಲಿ ಸರಿ ಬರದ ಕಾರಣ ಡಿವೋರ್ಸ್ ಪಡೆದುಕೊಂಡಿದ್ದರು. ಮಗನ ಜೊತೆ ಜೀವನ ನಡೆಸುತ್ತಿದ್ದ ಮಹಾಲಕ್ಷ್ಮೀ ನಿರೂಪಣೆಯ ಜೊತೆಗೆ ನಟಿಯಾಗಿಯೂ ಗುರುತಿಸಿಕೊಂಡಿದ್ದರು. ರವೀಂದರ್ ನಿರ್ಮಾಣ ಮಾಡಿದ್ದ ಧಾರಾವಾಹಿಯಲ್ಲಿ ಮಹಾಲಕ್ಷ್ಮೀ ನಟಿಸಿದ್ದು ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಮೊದಲು ಸ್ನೇಹಿತರಾಗಿದ್ದ ರವೀಂದರ್ ಹಾಗೂ ಮಹಾಲಕ್ಷ್ಮೀ ಬಳಿಕ ಪ್ರೇಮಿಗಳಾಗಿದ್ದಾರೆ. ಆ ಬಳಿಕ ಇಬ್ಬರ ಮನೆಯಲ್ಲೂ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಕಳೆದ ಮೂರು ದಿನಗಳ ಹಿಂದೆ ತಿರುಪತಿಯಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now