ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಂಬ್ಯಾಕ್ ಮಾಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ವಿಜಯ್ ದೇವರಕೊಂಡ
`ಲೈಗರ್’ ಚಿತ್ರದ ಸೋಲಿನ ನಂತರ ಸಾಕಷ್ಟು ಟೀಕೆಗಳನ್ನ ಎದುರಿಸಿದ್ದ ವಿಜಯ್ ಇತ್ತೀಚೆಗೆ ಈವೆಂಟ್ವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನಾನು ಎಲ್ಲೇ ಹೋದರು ಅಭಿಮಾನಿಗಳು ಕಮ್ ಬ್ಯಾಕ್ ಮಾಡಿ ಎನ್ನುತ್ತಲೇ ಇರುತ್ತಾರೆ. ನಾನು ನಿಮಗೆ ಒಂದು ಹೇಳಲು ಬಯಸುತ್ತೇನೆ. ಕಮ್ಬ್ಯಾಕ್ ಮಾಡಲು ನಾನೇಲ್ಲೂ ಹೋಗಿಲ್ಲ ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ.
ಸದ್ಯ ವಿಜಯ್ ದೇವರಕೊಂಡ ಹಾಗೂ ಸಮಂತ ನಟನೆಯ ಖುಷಿ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಈಗಾಗ್ಲೆ 60% ಶೂಟಿಂಗ್ ಮುಗಿಸಿರುವ ಖುಷಿ ತಂಡ ಸಮಂತಾ ಆರೋಗ್ಯ ಸಮಸ್ಯೆಯ ಕಾರಣದಿಂದ ಕೊಂಚ ದಿನಗಳ ಮಟ್ಟಿಗೆ ಸೈಲೆಂಟ್ ಆಗಿದೆ. ಸದ್ಯ ಸಮಂತಾ ಯಶೋದ ಸಿನಿಮಾದ ಪ್ರಮೋಷನ್ ಕೆಲಸದಲ್ಲಿ ತೊಡಗಿಕೊಂಡಿದ್ದು ಸದ್ಯದಲ್ಲೇ ಖುಷಿ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.
