• June 15, 2026

ಗಂಧದ ಗುಡಿ ಅಪ್ಪು ಕೊನೆಯ ಚಿತ್ರವಲ್ಲ ಇದು ಆರಂಭ: ನಟ ಶಿವರಾಜ್ ಕುಮಾರ್

ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ಚಿತ್ರ ಇಂದು ಎಲ್ಲೆಡೆ ಭರ್ಜರಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗ್ಲೆ ಸಾಕಷ್ಟು ಮಂದಿ ಚಿತ್ರ ವೀಕ್ಷಿಸಿದ್ದು ಚಿತ್ರದ ಕುರಿತಾಗಿ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ನಟ ಶಿವರಾಜ್ ಕುಮಾರ್ ಗಂಧದ ಗುಡಿ ಕುರಿತಾಗಿ ಪ್ರತಿಕ್ರಿಯಿಸಿದ್ದು ಇದು ಅಪ್ಪು ಕೊನೆಯ ಚಿತ್ರವಲ್ಲ ಎಂದಿದ್ದಾರೆ. ಚಿತ್ರ ನೋಡುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಿವಣ್ಣ, ನಾನು ಇಂದು ಸಂಜೆ ಸಿನಿಮಾ ವೀಕ್ಷಣೆ ಮಾಡುತ್ತೇನೆ. ಗಂಧದಗುಡಿ ಅಪ್ಪು ಅವರ ಕೊನೆಯ ಚಿತ್ರ ಅಲ್ಲ. ಇದು ಆರಂಭ, ಅಪ್ಪು ಯಾವಾಗಲೂ ನಮ್ಮ ಜೊತೆ ಇರುತ್ತಾರೆ ಎಂದು ಭಾವುಕರಾದರು. ಈ ವೇಳೆ ಅವರ ಜೊತೆಗಿದ್ದವರು ಕೂಡ ಪುನೀತ್ ನೆನೆದು ದುಃಖಿತರಾದರು. ಪ್ರಕೃತಿಯ ಬಗ್ಗೆ ಗಂಧದಗುಡಿಯಲ್ಲಿ ಅಪ್ಪಾಜಿ ತಿಳಿಸಿದ್ರು. ಅದರಿಂದ ಅದೆಷ್ಟೋ ಜನ ಪ್ರೇರಣೆಯಾಗಿದ್ರು, ನನ್ನ ಅದೃಷ್ಟ ನಾನು ಗಂಧದಗುಡಿ ಪಾರ್ಟ್ 2 ಮಾಡಿದ್ದೆ. ಇಂದು ಅತಿವೃಷ್ಠಿ ಆಗ್ತಿದೆ. ಪ್ರಕೃತಿಯಲ್ಲಿ ಏರೇಪೇರು ಆಗುತ್ತಿದೆ ಎಂದು  ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆ ಕುರಿತು ವಿಶಾದ ವ್ಯಕ್ತಪಡಿಸಿದರು. ಕಾಡಿನ ಮಹತ್ವದ ಬಗ್ಗೆ ಅಪ್ಪು ತಿಳಿಸಿದ್ದಾರೆ. ಅಭಿಮಾನಿಗಳು ಅಪ್ಪುವನ್ನ ನೋಡಲು ಬರಬೇಕು. ಅವರಿಗೆ ಈ ಮೂಲಕ ಗೌರವ ಕೊಡಬೇಕು ಎಂದು ಶಿವರಾಜ್ ಕುಮಾರ್ ಮನವಿ ಮಾಡಿದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now