• March 14, 2026

ವೈದ್ಯರು ಅವಳಿ ಮಕ್ಕಳು ಎಂದಾಗ ನಕ್ಕು ಬಿಟ್ಟಿದ್ದ ಅಮೂಲ್ಯ, ಖುಷಿಗಿಂತ ಜಾಸ್ತಿ ಟೆನ್ಷನ್ ಮಾಡಿಕೊಂಡಿದ್ದ ಕುಟುಂಬ

ಚೆಲುವಿನ ಚಿತ್ತಾದ ನಟಿ ಅಮೂಲ್ಯ ಸದ್ಯ ಮುದ್ದಾದ ಅವಳಿ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾ ರಂಗದಿಂದ ದೂರವಿದ್ದರು ಅಮೂಲ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಇದೀಗ ಅಮೂಲ್ಯ ಹೊಟ್ಟೆಯಲ್ಲಿ ಅವಳಿ ಮಕ್ಕಳಿವೆ ಎಂದು ವೈದ್ಯರು ಹೇಳಿದಾದ ರಿಯಾಕ್ಷನ್ ಹೇಗಿತ್ತು ಅನ್ನೋದನ್ನ ಅಮೂಲ್ಯ ಹೇಳಿಕೊಂಡಿದ್ದಾರೆ. ಜಗದೀಶ್ ಕೈ ಹಿಡಿದ ಬಳಿಕ ಅಮೂಲ್ಯ ಸಿನಿಮಾ ರಂಗದಿಂದ ದೂರವಾಗಿದ್ದಾರೆ. ಇದೀಗ ಮುದ್ದಾಗ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿರುವ ನಟಿ ಅವುಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಕ್ಕಳ ಮುದ್ದು ಮುದ್ದು ಫೋಟೋ ಹಂಚಿಕೊಳ್ಳುತ್ತಿರುವ ಅಮೂಲ್ಯ ಇತ್ತೀಚೆಗೆ ಅಭಿಮಾನಿಗಳಿಗೆ ಅವಕಾಶವೊಂದನ್ನು ನೀಡಿದ್ದಾರೆ. ನನ್ನ ಬಗ್ಗೆ ಏನಾದರೂ ಕೇಳಿ, ಉತ್ತರಿಸುತ್ತೇನೆ ಎಂದು ಅಮೂಲ್ಯ ಹೇಳಿಕೊಂಡಿದ್ದರು. ಈ ವೇಳೆ ಅಭಿಮಾನಿಯೊಬ್ಬರು ನಿಮ್ಮ ಹೊಟ್ಟೆಯಲ್ಲಿ ಅವಳಿ ಮಕ್ಕಳಿವೆ ಎಂದಾಗ ನಿಮ್ಮ ರಿಯಾಕ್ಷನ್ ಹೇಗಿತ್ತು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅಮೂಲ್ಯ ಸ್ಕ್ಯಾನಿಂಗ್ ರೂಂನಲ್ಲಿ ವೈದ್ಯರು ವಿಷಯ ತಿಳಿಸಿದ್ದಾಗ ನಾನು ನಕ್ಕು ಬಿಟ್ಟಿದ್ದೆ. ಪತಿ ಜಗದೀಶ್ ಟೆನ್ಷನ್ ಮಾಡಿಕೊಂಡರಂತೆ. ಇಡೀ ಫ್ಯಾಮಿಲಿಗೆ ಒಂದು ರೀತಿಯಲ್ಲಿ ಆತಂಕವಾಗಿತ್ತಂತೆ. ಅಮೂಲ್ಯ ಪುಟಾಣಿ ಹುಡುಗಿ. ಎರಡು ಮಕ್ಕಳನ್ನು ಹೇಗೆ ಮ್ಯಾನೇಜ್ ಮಾಡ್ತಾರೆ ಅನ್ನುವುದು ಕುಟುಂಬಕ್ಕೆ ಚಿಂತೆಯಾಗಿತ್ತಂತೆ. ಆದರೆ ಭಗವಂತ ಎರಡನ್ನೂ ನಿಭಾಯಿಸುವ ಶಕ್ತಿ ನನಗೆ ನೀಡಿದ್ದಾನೆ ಎಂದು ಅಮೂಲ್ಯ ಹೇಳಿಕೊಂಡಿದ್ದಾರೆ. ಮದುವೆಯ ಬಳಿಕ ಅಮೂಲ್ಯ ಸಿನಿಮಾ ರಂಗಕ್ಕೆ ಬರ್ತಾರೆ ಎಂದು ಕಾದು ಕೂತಿದ್ದ ಅಭೀಮಾನಿಗಳಿಗೆ ನಿರಾಸೆಯಾಗಿತ್ತು, ಚೆಲುವಿನ ಚಿತ್ತಾರದ ಬೆಡಗಿಯನ್ನ ಪರದೇ ಮೇಲೆ ನೋಡಲು ಎಷ್ಟು ದಿನ ಕಾಯಬೇಕು ಎಂದು ಪರಿತಪಿಸುತ್ತಿದ್ದರು. ಇದೀಗ ಅಮೂಲ್ಯ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿದ್ದು ಅಮೂಲ್ಯಳ ಕಂಬ್ಯಾಕ್ ಗೆ ಅಭಿಮಾನಿಗಳು ಕಾದು ಕೂತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now