ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಮ್ಮ ಕಣ್ಣುಗಳು ತಂಪಾಗಲಿ ಬಿಡಿ: ರಣಬೀರ್ ನ್ಯೂಡ್ ಫೋಟೋಗೆ ಪ್ರತಿಕ್ರಿಯಿಸಿದ ವಿದ್ಯಾ ಬಾಲನ್
ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ವಿದ್ಯಾ ಬಾಲನ್ ಹಾಜರಾಗಿದ್ದರು. ಈ ವೇಳೆ ಪತ್ರಕರ್ತರು ರಣವೀರ್ ಸಿಂಗ್ ನ್ಯೂಡ್ ಫೋಟೋ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ವಿದ್ಯಾ ಬಾಲನ್ ನಮ್ಮ ಕಣ್ಣುಗಳು ಕೂಡ ತಂಪಾಗಲಿ ಬಿಡಿ ಎಂದು ತಮಾಷೆ ಮಾಡಿದ್ದಾರೆ.
ರಣವೀರ್ ಸಿಂಗ್ ಆ ರೀತಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರೆ ಅದರಲ್ಲಿ ಸಮಸ್ಯೆ ಏನಿದೆ? ಮೊದಲ ಬಾರಿಗೆ ಒಬ್ಬ ಪುರುಷ ಈ ರೀತಿ ಮಾಡಿದ್ದಾನೆ. ನಮ್ಮ ಕಣ್ಣುಗಳು ಕೂಡ ತಂಪಾಗಲಿ ಬಿಡಿ. ಕೆಲವರಿಗೆ ಮಾಡಲು ಕೆಲಸವಿಲ್ಲ. ಅಂಥವರು ಕೇಸ್ ಹಾಕಿಕೊಂಡು ಸಮಯ ಹಾಳ ಮಾಡುತ್ತಿದ್ದಾರೆ. ನಿಮಗೆ ಆ ಫೋಟೋ ಇಷ್ಟ ಆಗಿಲ್ಲ ಎಂದರೆ ಅದನ್ನು ಎಸೆದು ಬಿಡಿ. ನಿಮಗೆ ಏನು ಅನಿಸುತ್ತೋ ಅದನ್ನು ಮಾಡಿ. ಅದಕ್ಕೆಲ್ಲ ಎಫ್ ಐ ಆರ್ ಯಾಕೆ ? ಎಂದು ವಿದ್ಯಾ ಬಾಲನ್ ಪ್ರಶ್ನಿಸಿದ್ದಾರೆ.
