ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
‘ಮರಾಠ ಮಂದಿರ್’ ಮಾಲೀಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ವಿಜಯ್ ದೇವರಕೊಂಡ: ವಿವಾದಕ್ಕೆ ಅಂತ್ಯ
ವಿಜಯ್ ದೇವರಕೊಂಡ ಮತ್ತು ಮನೋಜ್ ದೇಸಾಯಿ ಅವರು ಪರಸ್ಪರ ಭೇಟಿಯಾಗಿ ಮಾತುಕಥೆ ನಡೆಸಿ, ತಮ್ಮ ನಡುವಿದ್ದ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಮುಂಬೈಗೆ ತೆರಳಿ ಮನೋಜ್ ದೇಸಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಮನೋಜ್ ದೇಸಾಯಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.
‘ವಿಜಯ್ ದೇವರಕೊಂಡ ತುಂಬ ಒಳ್ಳೆಯ ಹುಡುಗ. ವಿನಯವಂತ ವ್ಯಕ್ತಿ. ಆತನಿಗೆ ನನ್ನ ಪ್ರೀತಿ ಯಾವಾಗಲೂ ಇರಲಿದೆ. ಅವನಿಗೆ ಒಳ್ಳೆಯ ಭವಿಷ್ಯ ಇದೆ. ಆತನ ಎಲ್ಲ ಸಿನಿಮಾಗಳನ್ನು ನಾನು ತೆಗೆದುಕೊಳ್ಳುವುದಾಗಿ ಭರವಸೆ ನೀಡುತ್ತೇನೆ. ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ’ ಎಂದು ಮನೋಜ್ ದೇಸಾಯಿ ಹೇಳಿದ್ದಾರೆ.
