• June 2, 2026

ಎಬಿಡಿ ಭೇಟಿ ಮಾಡಿದ ನಟ ರಿಷಬ್ ಶೆಟ್ಟಿ

ಕಾಂತಾರ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ದೇಶ ವಿದೇಶದಲ್ಲೂ ಸಖತ್ ಸದ್ದು ಮಾಡುತ್ತಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಕಾಂತಾರ ಸಕ್ಸಸ್ ಖುಷಿಯಲ್ಲಿದ್ದು ಈ ಮಧ್ಯೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಆಟಗಾರ ಎಬಿ ಡಿವಿಲಿಯರ್ಸ್‌ ಭೇಟಿ ಮಾಡಿದ್ದಾರೆ. ರಿಷಬ್ ಹಾಗೂ ಎಬಿ ಡಿವಿಲಿಯರ್ಸ್‌ ಭೇಟಿಯ ಫೋಟೋಗಳನ್ನು ಹೊಂಬಾಳೆ ಫಿಲ್ಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಸಿನಿಮಾದ 360 ಡಿಗ್ರಿ ಹಾಗೂ ಕ್ರಿಕೆಟ್‌ನ 360 ಡಿಗ್ರಿ ಮುಖಾಮುಖಿಯಾಗಿದ್ದಾರೆ ಎಂದು ಹೊಂಬಾಳೆ ಫಿಲ್ಸ್ಂ ಟ್ವೀಟ್ ಮಾಡಿದೆ. ಕಂಬಳದಲ್ಲಿ ಕೋಣ ಓಡಿಸುವ ಮುನ್ನ ಹೇಳುವ ʻಬಿಡಿಯಾ…ʼ ಪದವನ್ನು ರಿಷಬ್‌ ಹಾಗೂ ಎಬಿಡಿ ಒಟ್ಟಿಗೆ ಹೇಳಿದ್ದಾರೆ. ಇದಕ್ಕೆ ರಿಷಬ್ ಕೋಣ ಓಡಿಸುವ ವಿಡಿಯೋ ಹಾಗೂ ಎಬಿ ಡಿವಿಲಿಯರ್ಸ್ ಕ್ರಿಕೆಟ್ ಬ್ಯಾಟ್ ಬೀಸುವ ವಿಡಿಯೋ ಹಾಕಿ ಪೋಸ್ಟ್ ಹಂಚಿಕೊಂಡಿದ್ದು ಈ ಫೋಟ್ಸ್ ವೈರಲ್ ಆಗಿದೆ. ರಿಷಬ್ ಶೆಟ್ಟಿ ಕೂಡ ವೀಡಿಯೋ ಪೋಸ್ಟ್ ಮಾಡಿದ್ದು, ಇದು ಪಂದ್ಯ, ನಿಜವಾದ 360ಯನ್ನು ಭೇಟಿಯಾದೆ. ಸೂಪರ್ ಹೀರೋ ಮತ್ತೆ ತಮ್ಮ ಮೂಲಸ್ಥಾನಕ್ಕೆ ಮರಳಿದ್ದಾರೆ. ನಮ್ಮ ಬೆಂಗಳೂರು ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ. ಈ ವೀಡಿಯೋ ಮೂಲಕ ರಾಯಲ್ ಚಾಲೆಂಜರ್ಸ್‌ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಈ ವರ್ಷದ ಐಪಿಲ್​ ಹರಾಜಿಗೂ ಮುನ್ನವೇ ಎಬಿ ಡಿವಿಲಿಯರ್ಸ್ ಅವರು ಬೆಂಗಳೂರಿಗೆ ಬಂದಿದ್ದಾರೆ. ಅವರನ್ನು ‘ರಾಯಲ್​ ಚಾಲೆಂಜರ್ಸ್​ ಬೆಂಗಳೂರು’ ತಂಡ ಅದ್ದೂರಿಯಾಗಿ ಸ್ವಾಗತಿಸಿದೆ. ಈ ವೇಳೆ ರಿಷಬ್ ಹಾಗೂ ಎಬಿಡಿ ಭೇಟಿ ಮಾಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now