• January 2, 2026

ಖಾಸಗಿ ವಿಡಿಯೋ ಕುರಿತು ಮತ್ತೆ ಮಾತನಾಡಿದ ಸೋನು ಗೌಡ: ನನ್ನ ರೀತಿ ಯಾರಿಗೂ ಆಗಬಾರದು ಎಂದು ಸೋಷಿಯಲ್ ಮೀಡಿಯಾ ಸ್ಟಾರ್

ಬಿಗ್ ಬಾಸ್ ಓಟಿಟಿ ಮನೆಗೆ ಹೋಗಿ ಬಂದಿರೋ ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ಲೀಕ್ ಆಗಿ ಸಖತ್ ಸದ್ದು ಮಾಡಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ವಿಡಿಯೋ ಕುರಿತು ಸೋನು ಗೌಡ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡು ಕಣ್ಣೀರು ಹಾಕಿದ್ದರು. ಜೊತೆಗೆ ಮತ್ತೊಂದು ವಿಡಿಯೋ ಎಂದು ಹೇಳಿ ಶಾಕ್ ನೀಡಿದ್ದರು. ಇದೀಗ ಮತ್ತೆ ಸೋನು ಗೌಡ ತಮ್ಮ ಖಾಸಗಿ ವಿಡಿಯೋ ಬಗ್ಗೆ ಮಾತನಾಡಿದ್ದಾರೆ. ಸೋನು ಗೌಡ ಬಿಗ್ ಬಾಸ್ ಮನೆಯಲ್ಲಿ ಸಿಂಪತಿ ಗಿಟ್ಟಿಸಿಕೊಳ್ಳಲು ಖಾಸಗಿ ವಿಡಿಯೋ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿತ್ತು. ಆದರೆ ಸೋನು ಮಾತ್ರ ನಾನು ಸಿಂಪತಿ ಗಿಟ್ಟಿಸಿಕೊಳ್ಳಲು ಆ ಬಗ್ಗೆ ಮಾತನಾಡಿಲ್ಲ. ನನ್ನ ಹಾಗೆ ಯಾವ ಹುಡುಗಿಯು ಮೊಸ ಹೋಗಬಾರದು. ಅದಕ್ಕಾಗಿ ಅದರ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ. ಖಾಸಗಿ ಸಂಗತಿಗಳು ಎಂದರೆ ಅದು ಒಬ್ಬರಲ್ಲೇ ಇರಬೇಕು. ಆದರೆ ಆ ಹುಡುಗ ನನಗೆ ಮೋಸ ಮಾಡಿದೆ. ನನ್ನ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡ. ನಾನು ಆ ಹುಡುಗನನ್ನು ತುಂಬಾ ಇಷ್ಟ ಪಡುತ್ತಿದೆ. ಜೊತೆಗೆ ಆತನ ಮೇಲೆ ತುಂಬಾ ನಂಬಿಕೆ ಇಟ್ಟಿದ್ದ. ಆದರೆ ಆತ ನನ್ನ ನಂಬಿಕೆ ದ್ರೋಹ ಬಗೆದ. ಆತ ಆ ರೀತಿ ನಡೆದುಕೊಳ್ಳುತ್ತಾನೆ ಅಂತ ಅಂದುಕೊಂಡಿರಲಿಲ್ಲ. ಮೊದಲು ಆ ವಿಡಿಯೋವನ್ನು ಮಾಡಿಕೊಂಡಿದ್ದು ತಪ್ಪು. ಎರಡನೆಯದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು ತಪ್ಪು. ಅದರಿಂದಾಗಿ ನನ್ನ ಮರ್ಯಾದೆ ಹೋಯಿತು ಎಂದು ಸೋನು ಗೌಡ ಹೇಳಿದ್ದಾರೆ. ನನ್ನ ಖಾಸಗಿ ವಿಡಿಯೋವನ್ನು ಆ ಹುಡುಗ ಸೋಷಿಯಲ್ ಮೀಡಿಯಾದಲ್ಲಿ ಹಾಕಿದನೋ ಅಥವಾ ಬೇರೆಯವರು ಹಾಕಿದರೋ ನನಗೆ ಗೊತ್ತಿಲ್ಲ. ಆದರೆ ಆತ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದರಿಂದಲೇ ಇಷ್ಟೆಲ್ಲಾ ಆಗಿದೆ. ಈ ರೀತಿ ಯಾವ ಹುಡುಗಿಯೂ ಮೋಸ ಹೋಗಬಾರದು ಎಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now