• January 1, 2026

ಮೀ ಟೂ ಅನ್ನೋದು ಕಾಮನ್ ಆಗಿದ್ದು ಹೆಣ್ಣು ಮಕ್ಕಳು ಅದನ್ನು ನಿಭಾಯಿಸುವುದನ್ನು ಕಲಿತುಕೊಳ್ಳಬೇಕು: ನಿರ್ದೇಶಕ ಶಶಾಂಕ್

ನಟಿ ಆಶಿತಾ ಮಾಡಿರುವ ಸ್ಯಾಂಡಲ್ ವುಡ್ ನಟನ ವಿರುದ್ಧ ಮೀಟೂ ಆರೋಪ ಇದೀಗ ದೊಡ್ಟ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಹೆಸರು ಹೇಳದೆ ನಿರ್ದೇಶಕನ ವಿರುದ್ಧ ಆಶಿತಾ ಆರೋಪ ಮಾಡಿದ್ದು ಇದೇ ಕಾರಣಕ್ಕೆ ತಾನು ಸಿನಿಮಾ ರಂಗದಿಂದ ದೂರವಾಗಿದ್ದಾಗಿ ಹೇಳಿದ್ದಾರೆ. ಆಶಿತಾ ಆರೋಪದ ಕುರಿತು ನಿರ್ದೇಶಕ ಶಶಾಂಕ್ ಪ್ರತಿಕ್ರಿಯೆ ನೀಡಿದ್ದಾರೆ. ಮೀಟು ಎನ್ನುವುದು ಬಹಳ ಕಾಮನ್ ಆಗಿದೆ. ಊರು ಅಂದ ಮೇಲೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಹೆಣ್ಣು ಮಕ್ಕಳು ಅದನ್ನು ನಿಭಾಯಿಸಲು ಕಲಿತುಕೊಳ್ಳಬೇಕು ಎಂದಿದ್ದಾರೆ. ‘ಆಶಿತಾ ಅವರಿಗೆ ಆಗಿರುವ ಅನುಭವದಿಂದ ಅವರು ಸಿನಿಮಾ ಬಿಟ್ಟು ಹೋಗಿದ್ದಾರೆ. ಯಾರೂ ಇನ್ನೊಬ್ಬರಿಗೆ ತಲೆ ಬಗ್ಗಿಸುವ ಅವಶ್ಯಕತೆ ಇಲ್ಲ. ಯಾವುದೇ ಕ್ಷೇತ್ರದಲ್ಲಿ ಆಗಲಿ ಗಂಡಸರು ಈ ರೀತಿ ಮಾಡಲು ಹೆದರುತ್ತಾರೆ. ಬಾ ಬಾರೋ ರಸಿಕ ಟೈಮ್ ನಲ್ಲಿ ನಾನು ಗೀತ ಸಾಹಿತಿಯಾಗಿ ಅವರ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಮೊಗ್ಗಿನ ಮನಸ್ಸು ಸಿನಿಮಾಗೆ ಆಶಿತಾ ಅವರಿಗೆ ಪಾತ್ರದ ಆಫರ್ ಮಾಡಿದ್ದೆ. ಕೆಲವು ಕಾರಣಗಳಿಂದ ಅವರು ನಟಿಸಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ. ಆಶಿಕಾ, ‘ಅವರ ಅನುಭವಕ್ಕೆ ಬಂದಿರುವ ವಿಚಾರವನ್ನು ಅವರು ಹೇಳಿ ಕೊಂಡಿದ್ದಾರೆ. ಮೀಟು ಅನ್ನುವುದು ಅನಾದಿಕಾಲದಿಂದಲೂ ಬಂದಿರುವ ಸಮಸ್ಯೆಯಾಗಿದೆ. ಕೆಟ್ಟ ಮನಸ್ಸಿರುವ ವ್ಯಕ್ತಿಗಳು ಬದಲಾಗಬೇಕು. ಹೆಣ್ಣುಮಕ್ಕಳು ಅದನ್ನು ನಿಭಾಯಿಸುವ ರೀತಿ ಕಲಿತು ಕೊಳ್ಳಬೇಕು’ ಎಂದು ಎಂದಿದ್ದಾರೆ. ನಾನು ಸಿನಿಮಾ ರಂಗದಲ್ಲಿ ಸಾಕಷ್ಟು ಗುರುತಿಸಿಕೊಂಡ ಮೇಲೆ ನನಗೆ ಮೀ ಟೂ ಅನುಭವವಾಯಿತು. ಚಿತ್ರರಂಗದಲ್ಲಿ ನಟನೆ ಆರಂಭಿಸಿದ ಸಂದರ್ಭದಲ್ಲಿ ಈ ರೀತಿಯಾಗಿರಲಿಲ್ಲ. ದೊಡ್ಡ ದೊಡ್ಡ ಕಲಾವಿದರ ಜೊತೆ ಕೆಲಸ ಮಾಡುವ ಸಂದರ್ಭದಲ್ಲಿ ನನಗೆ ಏನು ಆಗಿರ್ಲಿಲ್ಲ. ಆದರೆ ಹೊಸಬರ ಜೊತೆ ಕೆಲಸ ಮಾಡುವಾಗ ಇಂಥಹ ಅನುಭವವಾಗಿದೆ ಎಂದರು. ಆ ನಿರ್ದೇಶಕರ ಹೆಸರು ಹೇಳುವುದು ಬೇಡ, ಅವರು ತನ್ನೊಂದಿಗೆ ಸಲುಗೆಯಿಂದ ಇರಲು ಹೇಳಿದರು. ಅದಕ್ಕೆ ಒಪ್ಪದಾಗ ಬೇಕಾಬಿಟ್ಟಿ ಅವಮಾನಗಳನ್ನು ಮಾಡಿದ್ದರು. ಟೇಕ್ ಚೆನ್ನಾಗಿ ಬಂದರೂ, ಮತ್ತೆ ರಿಟೇಕ್ ಮಾಡಿಸುತ್ತಿದ್ದರು. ಇದೆಲ್ಲದರಿಂದ ನಾನು ಬೇಸತ್ತಿದ್ದೆ’ ಸಿನಿಮಾ ರಂಗ ತೊರೆಯುವ ನಿರ್ಧಾರ ಮಾಡಿದೆ ಎಂದು ಆಶಿತಾ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now