• March 15, 2026

ಸುಷ್ಮಿತಾ ಸೇನ್ ಬಾಳಿಗೆ ಎಕ್ಸ್ ಬಾಯ್ ಫ್ರೆಂಡ್ ಎಂಟ್ರಿ: ಮಾಜಿ ವಿಶ್ವಸುಂದರಿಯಿಂದ ದೂರವಾದ ಲಲಿತ್ ಮೋದಿ

ಮಾಜಿ ವಿಶ್ವಸುಂದರಿ ಬಾಲಿವುಡ್ ನಟಿ ಸುಷ್ಮಿತಾ ಸೇನ್ ಜೊತೆಗಿರುವ ಫೋಟೋವನ್ನು ಕಳೆದು ಒಂದೂವರೆ ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಹಂಚಿಕೊಂಡಿದ್ದರು. ಜೊತೆಗೆ ಆಕೆಯ ಜೊತೆ ಡೇಟಿಂಗ್ ಮಾಡ್ತಿರೋದಾಗಿಯೂ ಹೇಳಿಕೊಂಡಿದ್ದರು. ಲಲಿತ್ ಮೋದಿ ಹಂಚಿಕೊಂಡಿದ್ದ ಫೋಟೋ ಸೋಷಿಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಟ್ಟದಲ್ಲಿ ಸದ್ದು ಮಾಡಿತ್ತು. ಲಲಿತ್ ಮೋದಿ ಜೊತೆಗಿನ ಫೋಟೋಗಳು ವೈರಲ್ ಆದರೂ ಸುಷ್ಮಿತಾ ಮಾತ್ರ ಯಾವುದಕ್ಕೂ ಪ್ರತಿಕ್ರಿಯಿಸದೇ ಸೈಲೆಂಟ್ ಆಗಿ ಬಿಟ್ಟಿದ್ದರು.ಜೊತೆಗೆ ವಿದೇಶಕ್ಕೆ ಹಾರಿ ಅಲ್ಲಿನ ಸುಂದರ ಸ್ಥಳಗಳಲ್ಲಿ ಎಂಜಾಯ್ ಮಾಡುತ್ತಿದ್ದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಲಲಿತ್ ಮೋದಿ ಹಂಚಿಕೊಂಡಿದ್ದ ಫೋಟೋಗಳು ನೋಡಿ ಸುಷ್ಮಿತಾ ಹಾಗೂ ಲಲಿತ್ ಮೋದಿ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇದೆ ಎಂಥಲೆ ಪ್ರತಿಯೊಬ್ಬರು ಅಂದುಕೊಂಡಿದ್ದರು. ಈ ಮಧ್ಯೆ ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಮತ್ತೆ ಸುಷ್ಮಿತಾ ಸುತ್ತಾಟ ನಡೆಸುತ್ತಿದ್ದಾರೆ.ಇತ್ತೀಚೆಗೆ ಇಬ್ಬರು ವಿದೇಶಕ್ಕೆ ಹೋಗಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಇದರಿಂದ ಲಲಿತ್ ಮೋದಿಗೆ ಸಾಕಷ್ಟು ಮುಜುಗರ ಆಗಿರುವ ಹಾಗಿದೆ. ಅದೇ ಕಾರಣಕ್ಕೆ ಸುಷ್ಮಿತಾರಿಂದ ಅಂತರ ಕಾಯ್ದುಕೊಳ್ಳಲು ಲಲಿತ್ ಮೋದಿ ಮುಂದಾಗಿದ್ದಾರೆ. ಮಾಜಿ ಬಾಯ್ ಫ್ರೆಂಡ್ ಜೊತೆ ವಿದೇಶದಲ್ಲಿರುವ ಫೋಟೋವನ್ನು ಸುಷ್ಮಿತಾ ಫೋಸ್ಟ್ ಮಾಡುತ್ತಿದ್ದಂತೆ ಇತ್ತ ಲಲಿತ್ ಮೋದಿ ಆಕೆಯನ್ನ ತಮ್ಮ ಸೋಷಿಯಲ್ ಮೀಡಿಯಾದಿಂದ ಅನ್ ಫ್ರೆಂಡ್ ಮಾಡಿದ್ದಾರೆ. ಇನ್ಸ್ಟಾದಲ್ಲಿ ತಮ್ಮ ಹೆಸರಿನ ಮುಂದೆ ಹಾಕಿಕೊಂಡಿದ್ದ ಸುಷ್ಮಿತಾ ಹೆಸರನ್ನು ತೆಗೆದು ಹಾಕಿದ್ದಾರೆ. ಈ ಮೂಲಕ ಸುಷ್ಮಿತಾ ಪ್ರೀತಿಗೆ ಲಲಿತ್ ಮೋದಿ ಫುಲ್ ಸ್ಟಾಪ್ ಇಟ್ಟಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now