• June 2, 2026

ರಿಂಗೂ ಇಲ್ಲ, ಮದುವೆನೂ ಇಲ್ಲ: ಲಲಿತ್ ಮೋದಿ ಜೊತೆಗಿನ ಸುದ್ದಿಗೆ ಬ್ರೇಕ್ ಹಾಕಿದ ಸುಶ್ಮಿತಾ ಸೇನ್

ಕಳೆದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದು ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಹಾಗೂ ಉದ್ಯಮಿ ಲಲಿತ್ ಮೋದಿಯ ಲವ್ವಿ ಡವ್ವಿ ಕಹಾನಿ. ಸುಶ್ಮಿತಾ ಸೇನ್ ಹೆಸರು ಸಾಕಷ್ಟು ಮಂದಿಯೊಂದಿಗೆ ತಳುಕು ಹಾಕಿಕೊಂಡಿದ್ದರು ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದೆ ಅಭಿಮಾನಿಗಳು ಲಲಿತ್ ಮೋದಿ ಜೊತೆಗಿನ ಡೇಟಿಂಗ್ ಸುದ್ದಿ ಕೇಳಿ ದಂಗಾಗಿದ್ರು. ಇಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿತ್ತು. ಇದೀಗ ಸುಶ್ಮಿತಾ ಸೇನ್ ಎಲ್ಲದಕ್ಕೂ ಎರಡೇ ಎರಡು ಮಾತಿನಲ್ಲಿ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸುಶ್ಮಿತಾ ಸೇನ್ ಜೊತೆಗಿರುವ ಕೆಲವೊಂದು ಫೋಟೋಗಳನ್ನು ಹಂಚಿಕೊಂಡ ಲಲಿತ್ ಮೋದಿ ಆಕೆಯೊಂದಿಗೆ ಡೇಟಿಂಗ್ ನಲ್ಲಿದ್ದು ಸದ್ಯದಲ್ಲೇ ಮದುವೆಯೂ ಆಗುತ್ತೇನೆ ಎಂದು ಬರೆದುಕೊಂಡಿದ್ದರು. ಅಲ್ಲದೆ ಲಲಿತ್ ಮೋದಿ ಪುತ್ರ ಕೂಡ ಅಪ್ಪನ ಪ್ರೇಮದ ಬಗ್ಗೆ ಏನೂ ಮಾತನಾಡಲಾರೆ. ಮನೆಯಲ್ಲೂ ಇದರ ಬಗ್ಗೆ ಯಾರು ಮಾತನಾಡಿಲ್ಲ ಎಂದಿದ್ದರು. ಹೀಗಾಗಿ ಇಬ್ಬರು ನಡುವೆ ಏನೋ ನಡಿತಿದೆ ಅಂಥಲೇ ಸಾಕಷ್ಟು ಮಂದಿ ಅಂದುಕೊಂಡಿದ್ದರು. ಇದೀಗ ಲಲಿತ್ ಮೋದಿ ಹೇಳಿಕೆಗೆ ಸುಶ್ಮಿತಾ ಸೇನ್ ಪ್ರತಿಕ್ರಿಯಿಸಿದ್ದಾರೆ. ಮಕ್ಕಳ ಜೊತೆಗಿರುವ ಫೋಟೋ ಹಂಚಿಕೊಂಡ ನಟಿ ಮದುವೆನೂ ಇಲ್ಲ, ರಿಂಗೂ ಇಲ್ಲ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಲಲಿತ್ ಮೋದಿ ಜೊತೆ ಯಾವುದೇ ಎಂಗೇಜ್ ಮೆಂಟ್ ಅಥವಾ ಮದುವೆ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now