• June 4, 2026

ಮತ್ತೆ ಸುದ್ದಿಯಾದ ಸುಷ್ಮಿತಾ ಸೇನ್, ಲಲಿತ್ ಮೋದಿ: ಮಾಜಿ ವಿಶ್ವಸುಂದರಿ ಲುಕ್ ಗೆ ಕ್ಲೀನ್ ಬೋಲ್ಡ್ ಆದ ಲಲಿತ್

ಇತ್ತೀಚೆಗೆ ಲಲಿತ್ ಮೋದಿ ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ಜೊತೆ ಡೇಟಿಂಗ್ ಮಾಡುತ್ತಿದ್ದು, ಸದ್ಯದಲ್ಲೇ ಮದುವೆಯಾಗೋದಾಗಿ ಹೇಳಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದರು. ಬಳಿಕ ಸುಷ್ಮಿತಾ ಸೇನ್ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದು ಆ ಬಳಿಕ ಸುದ್ದಿ ತಣ್ಣಗಾಗಿತ್ತು. ಇದೀಗ ಮತ್ತೆ ಸುಷ್ಮಿತಾ ಸೇನ್ ಕುರಿತಾಗಿ ಲಲಿತ್ ಮೋದಿ ಮಾಡಿರುವ ಪೋಸ್ಟ್ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದೆ. ಸುಷ್ಮಿತಾ ಸೇನ್ ಜೊತೆಗಿರುವ ಕೆಲವೊಂದಷ್ಟು ಫೋಟೋಗಳನ್ನು ಹಂಚಿಕೊಂಡ ಲಲಿತ್ ಮೋದಿ ತಾವಿಬ್ಬರು ಡೇಟಿಂಗ್ ಮಾಡುತ್ತಿರೋದಾಗಿ ತಿಳಿಸಿದ್ದರು. ಆದ್ರೆ ಸುಷ್ಮಿತಾ ತಾವಿಬ್ಬರು ಜಸ್ಟ್ ಫ್ರೆಂಡ್ಸ್, ಬೇರೆನ್ನೂ ಇಲ್ಲ ಎನ್ನುವಂತಹ ಬರಹವೊಂದನ್ನು ಹಂಚಿಕೊಂಡಿದ್ದರು. ಈ ವೇಳೆ ಸುಷ್ಮಿತಾ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರು. ಹಣಕ್ಕಾಗಿ ಸುಷ್ಮಿತಾ ಸೇನ್ ಲಲಿತ್ ಮೋದಿ ಹಿಂದೆ ಬಿದ್ದಿದ್ದಾರೆ ಎನ್ನಲಾಗಿತ್ತು. ನಿತ್ಯ ಒಂದಲ್ಲ ಒಂದು ರೀತಿಯ ಟ್ರೋಲ್ ಗೆ ಒಳಗಾಗುತ್ತಿರುವ ಸುಷ್ಮಿತಾ ಇವುಗಳಿಂದ ರಿಲ್ಯಾಕ್ಸ್ ಪಡೆದುಕೊಳ್ಳಲು ಇಟಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಕೆಲವು ಫೊಟೋ ಮತ್ತು ವಿಡಿಯೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಸುಷ್ಮಿತಾ ಸೇನ್ ಹಂಚಿಕೊಂಡಿದ್ದಾರೆ. ಸುಷ್ಮಿತಾ ಹಂಚಿಕೊಂಡಿರುವ ವಿಡಿಯೋದಲ್ಲಿ ಸುಷ್ಮಿತಾ ಈಜುಡುಗೆಯಲ್ಲಿ ಸಮುದ್ರಕ್ಕೆ ಜಂಪ್ ಮಾಡುತ್ತಿರುವ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು ಸುಷ್ಮಿತಾ ಸೇನ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಂತೆಯೆ ಲಲಿತ್ ಮೋದಿ ಅದಕ್ಕೆ ಕಾಮೆಂಟ್ ಮಾಡಿದ್ದಾರೆ. ಲುಕ್ಕಿಂಗ್ ಹಾಟ್ ಎಂದು ಬರೆದಿದ್ದಾರೆ. ಈ ಬರಹ ಇದೀಗ ಚರ್ಚೆಗೆ ಕಾರಣವಾಗಿದೆ. ಸುಷ್ಮಿತಾ ಸೇನ್ ಜೊತೆ ಇವರಿಗಿದ್ದ ಪ್ರೇಮವನ್ನು ಈ ರೀತಿಯಲ್ಲಿನ ಹೇಳಿದ್ದಾರೆ ಎಂದು ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now