• June 15, 2026

ವಿಚ್ಚೇದನ ನಿರ್ಧಾರ ಕೈ ಬಿಟ್ಟ ಧನುಷ್, ಐಶ್ವರ್ಯಾ: ಈ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎಂದು ಧನುಷ್ ತಂದೆ

ದಕ್ಷಿಣ ಭಾರತದ ಖ್ಯಾತ ನಟ ಧನುಷ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಕಳೆದ 9 ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಪಡೆದುಕೊಳ್ಳುತ್ತಿರುವ ಕುರಿತಾಗಿ ತಿಳಿಸಿದ್ದರು. ಈ ಜೋಡಿಗಳು ದೂರವಾಗ್ತಿರೋ ವಿಷಯ ಕೇಳಿ ಅಭಿಮಾನಿಗಳು ದಂಗಾಗಿದ್ದರು. ಇದೀಗ ಈ ಜೋಡಿ ಡಿವೋರ್ಸ್ ವಿಷಯವನ್ನು ಕೈ ಬಿಟ್ಟಿರುವುದಾಗಿ ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಧನುಷ್ ತಂದೆ ಹೇಳಿದ್ದಾರೆ. ಸುಮಾರು 18 ವರ್ಷಗಳ ಸಂಸಾರಿಕ ಜೀವನದಿಂದ ದೂರ ದೂರವಾಗ್ತಿರೋದಾಗಿ ಸೋಷಿಯಲ್ ಮೀಡಿಯಾದಲ್ಲಿ ಧನುಷ್ ಹಾಗೂ ಐಶ್ವರ್ಯಾ ಹೇಳಿಕೊಂಡಿದ್ದರು. ಜೊತೆಗೆ ತಮ್ಮ ಖಾಸಗಿ ತನಕ್ಕೆ ಗೌರವ ನೀಡಿ ಎಂದು ಮನವಿ ಮಾಡಿಕೊಂಡಿದ್ದರು. ಇದೀಗ ಈ ಜೋಡಿಗಳು ವಿಚ್ಚೇದನ ಕೈ ಬಿಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನಟ ಧನುಷ್ ತಂದೆ ಕಸ್ತೂರಿ ರಾಜಾ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರ ನಡುವೆ ಒಪ್ಪಂದ ಆಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಕ್ಕಳ ವೈಯಕ್ತಿಕ ವಿಚಾರಗಳಿಂದ ಸದಾ ದೂರ ಇರುತ್ತೇನೆ. ಮಕ್ಕಳು ತೆಗೆದುಕೊಳ್ಳುವ ನಿರ್ಧಾರಗಳಿಗೆ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ. ಇಬ್ಬರ ನಡುವೆ ಒಪ್ಪಂದ ಆಗಿ ವಿಚ್ಛೇದನ ನಿರ್ಧಾರ ಕೈ ಬಿಡುವ  ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ‘ನಾನು ನನ್ನ ಹೆಂಡತಿ ಮಕ್ಕಳ ಬೆಂಬಲ ಇಲ್ಲದೆ ಉತ್ತಮ ಜೀವನ ನಡೆಸುತ್ತಿದ್ದೇವೆ. ಸಂತೋಷವಾಗಿದ್ದೀವಿ. ಮಕ್ಕಳು ಸಂತೋಷವಾಗಿರಲಿ ಎನ್ನುವುದಷ್ಟೆ ನನ್ನ ನಿರೀಕ್ಷೆ. ಅವರು ಸಂತೋಷವಾಗಿರಲಿ ಎನ್ನವುದಷ್ಟೇ ನನ್ನ ಉದ್ದೇಶ’ ಎಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now