• March 15, 2026

215 ಕೋಟಿ ವಂಚನೆ ಪ್ರಕರಣ: ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ ನಟಿ ಜಾಕ್ವೆಲಿನ್

ಬೆಂಗಳೂರು ಮೂಲಕ ವಂಚಕ ಸುಕೇಶ್ ಜೊತೆ ಸ್ನೇಹ ಮಾಡಿದ ತಪ್ಪಿಗಾಗಿ ಇದೀಗ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೋರ್ಟ್ ಮೆಟ್ಟಿಲೇರುವಂತಾಗಿದೆ. ಬರೋಬ್ಬರಿ 215 ಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯನ್ನಾಗಿ ನಟಿ ಜಾಕ್ವೆಲಿನ್ ಅವರನ್ನು ಇಡಿ ಅಧಿಕಾರಿಗಳು ದೆಹಲಿ ಇಡಿ ವಿಶೇಷ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಬೆನ್ನಲ್ಲೆ ನಟಿ ಜಾಕ್ವೆಲಿನ್ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನು ಎಲ್ಲಾ ಒಳ್ಳೆಯದಕ್ಕೆ ಅರ್ಹನಾಗಿದ್ದೇನೆ, ನಾನು ಶಕ್ತಿಶಾಲಿಯಾಗಿದ್ದೇನೆ, ನಾನು ನನ್ನನ್ನು ಒಪ್ಪಿಕೊಳ್ಳುತ್ತೇನೆ, ಎಲ್ಲವೂ ಸರಿಯಾಗುತ್ತದೆ, ನಾನು ಬಲಶಾಲಿಯಾಗಿದ್ದೇನೆ, ನನ್ನ ಗುರಿ ಮತ್ತು ಕನಸುಗಳನ್ನು ಸಾಧಿಸುತ್ತೇನೆ,ನಾನು ಅದನ್ನು ಮಾಡಬಲ್ಲೇ ಎಂದು ಜಾಕ್ವೆಲಿನ್ ಬರೆದುಕೊಂಡಿದ್ದಾರೆ. ವಂಚನೆ ಕುರಿತಾಗಿ ಜಾಕ್ವೆಲಿನ್ ಮಾಡಿರುವ ಫೋಸ್ಟ್ ಸದ್ಯ ವೈರಲ್ ಆಗಿದೆ. ಜೈಲಿನಲ್ಲಿರುವ ಉದ್ಯಮಿ ಖೈದಿಯನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿ ಉದ್ಯಮಿ ಪತ್ನಿಯನ್ನು ನಂಬಿಸಿ ವಂಚಕ ಸುಕೇಶ್ ಚಂದ್ರಶೇಖರ್ ಬರೋಬ್ಬರಿ 215 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಿದ್ದ. ಬಳಿಕ ಉದ್ಯಮಿ ಪತ್ನಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದ್ದು ಈ ಬಗ್ಗೆ ಪೊಲೀಸರಿಗೆ ದೂರ ನೀಡಿದ್ದರು. ಸುಕೇಶ್ ವಂಚಿಸಿದ್ದ 215 ಕೋಟಿ ರೂಪಾಯಿ ಹಣದಲ್ಲಿ ಹತ್ತು ಕೋಟಿ ರೂಪಾಯಿ ಹಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಗಿಫ್ಟ್ ನೀಡಿದ್ದ. ಲಕ್ಸುರಿ ಬಿಎಂಡಬ್ಲ್ಯು ಕಾರ್, ಡೈಮೆಂಡ್ ಬ್ರಾಸಲೆಟ್‌, ಫ್ರಾಂಕ್ ಮುಲ್ಲರ್ ಲಕ್ಸುರಿ ವಾಚ್, ದುಬಾರಿ ಬೆಲೆಬಾಳುವ ಗುಸ್ಸಿ, ಚಾನಲ್‌ಬ್ಯಾಗ್‌ಗಳ ಜೊತೆಗೆ ಕುದುರೆಯೊಂದನ್ನು ಗಿಫ್ಟ್ ಆಗಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸುಖೇಶ್ ನೀಡಿದ್ದ. ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸುಕೇಶ್ ಚಂದ್ರಶೇಖರ್ ವಂಚನೆ ಮಾಡಿ ಹಣ ಗಳಿಸಿದ್ದಾನೆ ಎಂಬುದು ಗೊತ್ತಿತ್ತು ಎಂದು ಇ.ಡಿ. ಹೇಳಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now