• March 18, 2026

ನನ್ನ ಮೇಲೆ ನಡೆದ ಕಪಾಳ ಮೋಕ್ಷ ಪ್ರಕರಣ ಪೂರ್ವ ನಿಯೋಜಿತ: ನಟ ಚಂದನ್ ಕುಮಾರ್

ಇಂದು ಮುಂಜಾನೆಯಿಂದಲೂ ನಟ ಚಂದನ್ ಕುಮಾರ್ ಗೆ ತೆಲುಗು ಧಾರವಾಹಿಯ ಶೂಟಿಂಗ್ ಸೆಟ್ ನಲ್ಲಿ ನಡೆದ ಹಲ್ಲೆಯ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಚಂದನ್ ಮೇಲೆ ನಡೆದಿರುವುದು ಪೂರ್ವ ನಿಯೋಜಿತ ಕೃತ್ಯ ಎನ್ನಲಾಗುತ್ತಿದ್ದು ಇದು ಒಂದು ತಿಂಗಳ ಹಿಂದೆ ನಡೆದ ಘಟನೆಯಲ್ಲ, ನಿನ್ನೆಯಷ್ಟೇ ನಡೆದಿದೆ ಎನ್ನಲಾಗುತ್ತಿದೆ. ಘಟನೆ ಕುರಿತು ಮಾತನಾಡಿದ ಚಂದನ್, ‘ನಿನ್ನೆ ನನ್ನ ಕಾಲ್ ಶೀಟ್ ಇರಲಿಲ್ಲ. ಆದರೂ, ಶೂಟಿಂಗೆಗೆ ಹೋಗಿದ್ದೆ. ಅದು ನನ್ನ ವೃತ್ತಿ ಬದ್ಧತೆ ಆಗಿತ್ತು. ನನ್ನ ತಾಯಿಗೆ ಹುಷಾರಿಲ್ಲ ಎಂದರೂ, ನಾನು ಚಿತ್ರೀಕರಣದಲ್ಲಿ ಭಾಗಿ ಆಗುವ ಮೂಲಕ ಒಬ್ಬ ನಟನಾಗಿ ಮಾಡಬೇಕಾದ ಕರ್ತವ್ಯ ಮಾಡಿದೆ. ಆದರೆ, ಅವರು ಅದನ್ನು ಉಳಿಸಿಕೊಳ್ಳಲಿಲ್ಲ. ನನ್ನ ಮೇಲಿನ ಘಟನೆಯು ಪ್ರೀಪ್ಲ್ಯಾನ್ಡ್ ಅನ್ಸುತ್ತೆ. ಘಟನೆ ಏನೇ ನಡೆದಿದ್ದರೂ, ಕುಳಿತು ಮಾತನಾಡಬಹುದಿತ್ತು. ಹಾಗೆ ಮಾಡಲಿಲ್ಲ. ಎಲ್ಲರೂ ಒಟ್ಟಾಗಿ ಸೇರಿ ನನ್ನ ಮೇಲೆ ದುರ್ವರ್ತನೆ ತೋರಿದ್ದಾರೆ. ಹೊಡೆದಿದ್ದು ಸರಿ ಇಲ್ಲ ಅಂತ ಅಲ್ಲಿದ್ದ ಯಾರೊಬ್ಬ ತಂತ್ರಜ್ಞರೂ ಹೇಳಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಿದ್ದರು’ ಎಂದು ಚಂದನ್ ಬೇಸರ ವ್ಯಕ್ತಪಡಿಸಿದರು. ‘ನಿನ್ನೆ ಶೂಟಿಂಗ್ ಸಮಯದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಬಂದು ಎದ್ದೇಳಿಸಿ ಏನೇನೋ ಮಾತನಾಡಿದ್ರು. ಹೋಗೋ ಬರ್ತೀನಿ ಅಂತ ತಳ್ಳಿದೆ ಅಷ್ಟೇ. ಆಮೇಲೆ ಆತ ಹೋಗಿ ಎಲ್ಲರನ್ನೂ ಸೇರಿಸಿ ಈ ರೀತಿ ವರ್ತಿಸಿದ್ದಾನೆ. ಧಾರಾವಾಹಿಯಲ್ಲಿ ನಟಿಸಲ್ಲ ಅಂತ ಹೇಳಿದಾಗಲೂ ಅವರೇ ನನ್ನನ್ನು ಕರೆದು ಆಕ್ಟ್ ಮಾಡಲು ಕೇಳಿಕೊಂಡಿದ್ದರು. ಹಾಗಾಗಿ ಹೋಗಿದ್ದೆ, ನಾನಾಗಿಯೇ ಅವಕಾಶ ಹುಡುಕಿಕೊಂಡು ಹೋಗಿಲ್ಲ. ಈ ಘಟನೆ ನಡೆದು ಬೆಂಗಳೂರಿಗೆ ವಾಪಸ್ ಬರಬೇಕು ಎಂದಾಗ ಮತ್ತೆ ಕಷ್ಟ ಕೊಟ್ಟರು. ಕ್ಯಾಬ್ ಬುಕ್ ಮಾಡಿಕೊಂಡು ಹೋಗೋಕೂ ಬಿಡಲಿಲ್ಲ. ರೂಮ್ ಕೊಡ್ಲಿಲ್ಲ’ ಎಂದು ಘಟನೆಯ ಕುರಿತು ಚಂದನ್ ಬೇಸರ ವ್ಯಕ್ತಪಡಿಸಿದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now