ಕಳೆದ ಕೆಲ ಸಮಯದಿಂದ ಮುಂದೂಡಿದಿಕೊಂಡು ಬಂದಿದ್ದ ಸಮಂತಾ ನಟನೆಯ ಬಹುನಿರೀಕ್ಷಿತ ಯಶೋಧ ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ನವೆಂಬರ್ 14ರಂದು ಯಶೋದ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ಅದಕ್ಕೂ ಮೊದಲು ಚಿತ್ರತಂಡ ಟ್ರೈಲರ್ ರಿಲೀಸ್ ಮಾಡುತ್ತಿದೆ. ಯಶೋದ ಚಿತ್ರದ ಟ್ರೈಲರ್ ಐದು ಭಾಷೆಯಲ್ಲೂ ಬಿಡುಗಡೆಗೊಳ್ಳುತ್ತಿದೆ. ಕನ್ನಡದ ಟ್ರೈಲರ್ ಅನ್ನು ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡುತ್ತಿದ್ದಾರೆ. ಇನ್ನುಳಿದಂತೆ ಆಯಾ ಭಾಷೆಯ ಸ್ಟಾರ್ ನಟರು ಯಶೋದ […]readmore
ಕಳೆದ ಕೆಲ ದಿನಗಳಿಂದ ಸ್ಯಾಂಡಲ್ ವುಡ್ ಮೋಹಕ ತಾರೆ ನಟಿ ರಮ್ಯಾ ನಡೆ ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ. ಸಾಕಷ್ಟು ವರ್ಷಗಳಿಂದ ಸಿನಿಮಾ ರಂಗದಿಂದ ದೂರವಿದ್ದ ರಮ್ಯಾ ಇದೀಗ ತಮ್ಮದೇ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದಾರೆ. ಜೊತೆಗೆ ಮತ್ತೆ ರಾಜಕೀಯದಲ್ಲಿ ತೊಡಗಿಕೊಳ್ಳುವ ಎಲ್ಲಾಲಕ್ಷಣಗಳು ಕಾಣಿಸುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಖ್ಯಾತಿ ಘಳಿಸಿದ್ದ ರಮ್ಯಾ ಬಳಿಕ ರಾಜಕೀಯ ರಂಗದತ್ತ ಮುಖ ಮಾಡಿದರು. ಆದರೆ ರಮ್ಯಾಗೆ ರಾಜಕೀಯ ಕೈ ಹಿಡಿಯಲಿಲ್ಲ. ಮಂಡ್ಯದಿಂದ ಸೋತ ಬಳಿಕ ರಾಜಕೀಯದಿಂದ ದೂರವಿದ್ದ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ […]readmore
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಒಂದು ವರ್ಷ ಕಳೆಯುತ್ತ ಬಂದಿದೆ. ಆದರೆ ಇಂದಿಗೂ ಅದೆಷ್ಟೋ ಮಂದಿ ಅಪ್ಪು ನಮ್ಮ ನಡುವೆಯೇ ಇದ್ದಾರೆ ಎಂದುಕೊಂಡು ಜೀವನ ನಡೆಸುತ್ತಿದ್ದಾರೆ. ಅಪ್ಪು ಇಲ್ಲ ಎಂಬ ಕಹಿ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವೆ ಇಲ್ಲ ಎನ್ನುವಂತಾಗಿದೆ. ಅಪ್ಪು ನಿಧನರಾದಾಗ ಲಕ್ಷಾಂತರ ಮಂದಿ ಮೃತ ದೇಹದ ದರ್ಶನ ಪಡೆದಿದ್ದರು. ಆ ಬಳಿಕ ನಿತ್ಯ ಅಪ್ಪ ಸಮಾಧಿಗೆ ಸಾವಿರಾರು ಮಂದಿ ಭೇಟಿ ನೀಡಿ ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ದೂರುದ ಊರುಗಳಿಂದ ವಾಹನಗಳನ್ನು ಮಾಡಿಕೊಂಡು ಬಂದು […]readmore
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಒಂದು ವರ್ಷಗಳೇ ಆಗುತ್ತಾ ಬಂದಿದೆ. ಅಪ್ಪು ನಮ್ಮೊಂದಿಗೆ ದೈಹಿಕವಾಗಿ ಇಲ್ಲವಾದರು, ಪ್ರತಿಯೊಬ್ಬರ ಮನೆ, ಮನಗಳಲ್ಲೂ ಅಪ್ಪು ರಾರಾಜಿಸುತ್ತಿದ್ದಾರೆ. ಇದೀಗ ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವ ಸಮಯ ಹತ್ತಿರ ಬಂದಿದ್ದು ಈ ಪ್ರತಿಷ್ಠಿತ ಗೌರವವನ್ನು ಮರಣೋತ್ತರವಾಗಿ ಪುನೀತ್ಗೆ ಯಾರು ಸಮರ್ಪಿಸುತ್ತಾರೆ ಎಂದು ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಿನಿಮಾ ಹಾಗೂ ಸಮಾಜಮುಖಿ ಕೆಲಸಗಳ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿರೋ ನಟ ಪುನೀತ್ ರಾಜ್ ಕುಮಾರ್ ಅವರಿಗೆ […]readmore
ಹಿಂದಿ ಕಿರುತೆರೆಯ ಖ್ಯಾತ ನಟಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ವೈಶಾಲಿ ಠಕ್ಕರ್ ಅ.16ರಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದರು. ಅಲ್ಲದೆ ವೈಶಾಲಿ ಬರೆದ ಡೆತ್ ನೋಡ್ ನಲ್ಲಿ ಸಾವಿಗೆ ರಾಹುಲ್ ಕಾರಣ ಎಂದು ಬರೆಯಲಾಗಿತ್ತು. ಇದೀಗ ನಟಿಯ ಸಾವಿನ ಕುರಿತು ಸಹ ನಟ ಹಾಗೂ ಸ್ನೇಹಿತ ನಿಶಾಂತ್ ಮಲ್ಕಾನಿ ಮಹತ್ವದ ಸುಳಿವು ನೀಡಿದ್ದಾರೆ. ವೈಶಾಲಿ ಠಕ್ಕರ್ ದೀರ್ಘಕಾಲದಿಂದ ಖಿನ್ನತೆಗೆ ಬಳಲುತ್ತಿದ್ದು, ಇದಕ್ಕಾಗಿ ಮನೋವೈದ್ಯರಿಂದ ವೈದ್ಯಕೀಯ ಸಹಾಯವನ್ನು ತೆಗೆದುಕೊಳ್ಳುತ್ತಿದ್ದರು. ವೈಶಾಲಿ ಖಿನ್ನತೆಗೆ ಒಳಗಾಗಿದ್ದ ಕಾರಣ […]readmore
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರ ದೊಟ್ಟ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಾಂತಾರ ಈ ಮಟ್ಟಿಗಿನ ಸಕ್ಸಸ್ ಘಳಿಸದೆ ಅನ್ನೋ ಐಡಿಯಾ ಕೂಡ ಇಡೀ ಚಿತ್ರತಂಡಕ್ಕೆ ಇರಲಿಲ್ಲ ಅನಿಸುತ್ತೆ. ದಿನದಿಂದ ದಿನಕ್ಕೆ ಬಾಕ್ಸ್ ಆಫೀಸ್ ಕೊಳ್ಳೊ ಹೊಡೆಯುತ್ತಿರುವ ಕಾಂತಾರ ಚಿತ್ರ ಮತ್ತೊಂದು ದಾಖಲೆ ನಿರ್ಮಿಸಿದೆ. ಸೆ.30ರಂದು ಕನ್ನಡದಲ್ಲಿ ತೆರೆಕಂಡ ಕಾಂತಾರ ಬಳಿಕ ಪರಭಾಷೆಯಲ್ಲೂ ಸದ್ದು ಮಾಡಿತ್ತು. ದೇಶ, ವಿದೇಶದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಕಾಂತಾರ ಬಿಗ್ ಬಜೆಟ್ ಸಿನಿಮಾಗಳನ್ನು ಹಿಂದಿಕ್ಕಿ ನಾಗಾಲೋಟದಲ್ಲಿ ಮುನ್ನುಗುತ್ತಿದೆ. ಈಗಾಗ್ಲೆ […]readmore
ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ದೋನಿ ಕ್ರಿಕೆಟ್ ಜೊತೆಗೆ ಹಲವು ಉದ್ಯಮಗಳಲ್ಲು ತೊಡಗಿಕೊಂಡಿದ್ದಾರೆ. ಇದೀಗ ‘ದೋನಿ ಎಂಟರ್ ಟೈನ್’ ಮೂಲಕ ಸಿನಿ ರಂಗಕ್ಕೂ ಕಾಲಿಟ್ಟಿದ್ದಾರೆ. ಧೋನಿ ಎಂಟರ್ಟೈನ್ಮೆಂಟ್ ಮೂಲಕ ಜನರನ್ನು ಎಂಟರ್ಟೈನ್ ಮಾಡಲು ಮುಂದಾಗಿದ್ದಾರೆ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ದೋನಿ. ಧೋನಿ ಎಂಟರ್ಟೈನ್ಮೆಂಟ್ ಮೂಲಕ ಹೊರ ಬರುತ್ತಿರುವ ಸಿನಿಮಾ ಪತ್ನಿ ಸಾಕ್ಷಿ ಪರಿಕಲ್ಪನೆಯಲ್ಲಿ ಮೂಡಿ ಬರುತ್ತಿದೆ. ತಮಿಳು ನಾಡಿನ ಜೊತೆ ಉತ್ತಮ ಬಾಂದವ್ಯ ಹೊಂದಿರುವ ದೋನಿ ಮೊದಲ ಚಿತ್ರವನ್ನು ತಮಿಳಿನಲ್ಲೇ ರಿಲೀಸ್ ಮಾಡುವ […]readmore
ಕಳೆದ ಕೆಲ ದಿನಗಳ ಹಿಂದಷ್ಟೇ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದ ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿಗಳು ಮುದ್ದು ಮಕ್ಕಳ ಜೊತೆ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಅವಳಿ ಮಕ್ಕಳನ್ನು ಎತ್ತಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಶ್ನೇಶ್ ಹಾಗೂ ನಯನತಾರ ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ. ಈ ದೀಪಾವಳಿ ಎಂದೆಂದಿಗೂ ಮರೆಯದ ದೀಪಾವಳಿ ಎಂದು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ನಯನತಾರಾ ಹಾಗೂ ವಿಶ್ನೇಶ್ ದೀಪಾವಳಿ ಶುಭಾಶಯಕ್ಕೆ ಅಭಿಮಾನಿಗಳು ಪ್ರತಿಕ್ರಿಯಿಸಿ ಶುಭ ಕೋರಿದ್ದಾರೆ. ಅಲ್ಲದೆ […]readmore
ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿ ಜೊತೆ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಯಥರ್ವ್ ಹಾಗೂ ಐರಾ ಜೊತೆ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಯಶ್ ಹಸಿರು ಶರ್ಟ್ ಹಾಗೂ ಜೀನ್ಸ್ ತೊಟ್ಟು ಸಂಭ್ರಮಿಸಿದರೆ ಯಥರ್ವ್ ಕೂಡ ಅಪ್ಪನಂತೆ ಮ್ಯಾಚಿಂಗ್ ಬಟ್ಟೆತೊಟ್ಟು ಮಿಂಚಿದ್ದಾರೆ. ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಕ್ರೀಮ್ ಕಲರ್ ಸಲ್ವಾರ್ ನಲ್ಲಿ ಕಂಗೊಳಿಸಿದ್ದಾರೆ. ಇತ್ತ ಐರಾ ಕೆಂಪು ಬಟ್ಟೆ ತೊಟ್ಟು ಹಬ್ಬದಲ್ಲಿ ಭಾಗಿಯಾಗಿದ್ದಾರೆ. ರಾಕಿಂಗ್ ಮನೆಯನ್ನು ಆರ್ಟೀಫಿಷಿಯಲ್ ಲೈಟಿಂಗ್ ಗಳಿಂದ ಸಿಂಗಾರ ಗೊಳಿಸಲಾಗಿದೆ. […]readmore
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿರುವ ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಆದರೆ ಈ ಹಾಡಿನ ಮೇಲೆ ಕೃತಿ ಚೌರ್ಯದ ಆರೋಪ ಕೇಳಿ ಬಂದಿತ್ತು. ಕಾಂತಾರ ಚಿತ್ರದ ವರಾಹ ರೂಪಂ ಹಾಡನ್ನು ಮಲಯಾಳಂನ ನವರಸಂ ಹಾಡಿನಿಂದ ಕಾಫಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಈ ಬಗ್ಗೆ ಸಂಗೀತ ನಿರ್ದೇಶಕ ಅಜನೀಶ್ […]readmore
