ನಟ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ಪೂರಿ ಜಗನ್ನಾಥ್ ಕಾಂಬಿನೇಷನ್ ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಸದ್ಯದಲ್ಲೇ ತೆರೆಗೆ ಬರಲಿದೆ. ಇದೇ ಆಗಸ್ಟ್ 25ಕ್ಕೆ ಸಿನಿಮಾ ಬಿಡುಗಡೆ ಆಗಲಿದ್ದು ಈ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದೆ. ಚಿತ್ರದ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದ ವಿಜಯ್ ದೇವರಕೊಂಡ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಾಂದವ್ಯವನ್ನು ಮೆಲುಕು ಹಾಕಿದರು. ನಾನು ಬೆಂಗಳೂರಿಗೆ ಬಂದಾಗಲೆಲ್ಲ ಪುನೀತ್ ಅಣ್ಣನನ್ನು ಮೀಟ್ ಮಾಡಿ ಹೋಗುತ್ತಿದ್ದೆ. ಅವರು […]readmore
ಝೀ ಕನ್ನಡ ವಾಹಿನಿಯಲ್ಲಿ ಪ್ರವಾರವಾಗುವ ಖ್ಯಾತ ಧಾರಾವಾಹಿ ಜೊತೆ ಜೊತೆಯಲಿ ತಂಡದಿಂದ ಅನಿರುದ್ಧ್ ಅವರನ್ನು ಕೈ ಬಿಡಲಾಗಿದೆ. ಕಳೆದ ಕೆಲ ದಿನಗಳಿಂದ ಅನಿರುದ್ಧ್ ಹಾಗೂ ಧಾರವಾಹಿ ತಂಡದಲ್ಲಿ ಮನಸ್ತಾಪ ಶುರುವಾಗಿತ್ತು. ಇದೀಗ ನಟ ಅನಿರುದ್ಧ್ ರನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಲಾಗಿದೆ. ಕಳೆದ ಕೆಲ ದಿನಗಳಿಂದ ಅನಿರುದ್ಧ್ ಹಾಗೂ ಧಾರವಾಹಿ ತಂಡದ ಮಧ್ಯೆ ಮನಸ್ತಾಪ ಹೆಚ್ಚಾಗಿತ್ತು, ಜೊತೆಗೆ ಎರಡು ದಿನಗಳ ಹಿಂದ ಶೂಟಿಂಗ್ ನಿಂದ ಅನಿರುದ್ಧ್ ಹೊರಟು ಹೋಗಿದ್ದರು. ಈ ಬಗ್ಗೆ ಕಿರುತೆರೆ ನಿರ್ಮಾಪಕರ ಸಂಘಕ್ಕೆ […]readmore
ಬಾಲಿವುಡ್ ನಲ್ಲಿ ಸಾಕಷ್ಟು ಸದ್ದು ಮಾಡಿದ್ದ, ಪ್ರಧಾನಿ ನರೇಂದ್ರ ಮೋದಿಯಿಂದ ಮೆಚ್ಚುಗೆ ಘಳಿಸಿ ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಆಸ್ಕರ್ ರೇಸ್ ಗೆ ಕಳುಹಿಸುವ ಕುರಿತ ಚರ್ಚೆ ಶುರುವಾಗಿದೆ. ಆದರೆ ಈ ಬಗ್ಗೆ ನಿರ್ದೇಶಕ ಅನುರಾಗ್ ಕಶ್ಯಪ್ ಅಸಮಾಧಾನ ಹೊರ ಹಾಕಿದ್ದರು. ಇದೀಗ ಅನುರಾಗ್ ಕಶ್ಯಪ್ ಮಾತಿಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ. ನಿನ್ನೆಯಷ್ಟೇ ಅನುರಾಗ್ ಕಶ್ಯಪ್ ನಿರ್ದೇಶನದ, ತಾಪ್ಸಿ ಪನ್ನು ನಟನೆಯ ದೋಬಾರ […]readmore
ದುನಿಯಾ, ಕಡ್ಡಿಪುಡಿ, ದೊಡ್ಮನೆ ಹುಡುಗ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದ ದುನಿಯಾ ಸೂರಿ ಸೋಷಿಯಲ್ ಮೀಡಿಯಾದಿಂದ ಸದಾ ದೂರ. ಸೂರಿ ಇನ್ ಸ್ಟಾಗ್ರಾಂ ಖಾತೆ ಹೊಂದಿದ್ದರು ಹೆಚ್ಚು ಫೋಸ್ಟ್ ಗಳನ್ನು ಹಂಚಿಕೊಳ್ಳುವುದಿಲ್ಲ. ಇದೀಗ ದುನಿಯಾ ಸೂರಿ ಹೆಸರಿನಲ್ಲಿ ಸಾಕಷ್ಟು ಸೋಷಿಯಲ್ ಮೀಡಿಯಾ ಖಾತೆಗಳು ಓಪನ್ ಆಗಿದ್ದು ಈ ಬಗ್ಗೆ ಸೂರಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಕಿಡಿಗೇಡಿಗಳು ದುನಿಯಾ ಸೂರಿ ಹೆಸರಿನಲ್ಲಿ ಟ್ವಿಟ್ಟರ್ ಮತ್ತು ಫೇಸ್ ಬುಕ್ ಖಾತೆ ತೆರೆದಿದ್ದಾರಂತೆ. ಅವುಗಳ ಮೂಲಕ ದಿನವೂ […]readmore
ಕರ್ನಾಟಕ ಉಚ್ಚ ನ್ಯಾಯಾಲಯವು ಆಗಸ್ಟ್ 2022 ರ ಕರ್ನಾಟಕ ಹೈಕೋರ್ಟ್ ಅಧಿಕೃತ ಅಧಿಸೂಚನೆಯ ಮೂಲಕ ಗ್ರೂಪ್-ಡಿ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 17-Sep-2022 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸಂಸ್ಥೆಯ ಹೆಸರು : ಹೈ ಕೋರ್ಟ್ ಆಫ್ ಕರ್ನಾಟಕ ಪೋಸ್ಟ್‌ಗಳ ಸಂಖ್ಯೆ: 150 ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ ಪೋಸ್ಟ್ ಹೆಸರು: ಗುಂಪು-ಡಿ ಸಂಬಳ: ರೂ.19900-63200/- ಪ್ರತಿ ತಿಂಗಳು […]readmore
ಶಿವರಾಜ್ಕುಮಾರ್ ಅವರ ವೃತ್ತಿಜೀವನದ ಅತಿ ಮುಖ್ಯ ಸಿನಿಮಾಗಳಲ್ಲಿ ‘ಜೋಗಿ’ ಚಿತ್ರಕ್ಕೆ ಪ್ರಮುಖ ಸ್ಥಾನವಿದೆ. ಈ ಸಿನಿಮಾ ನೋಡಿ ಡಾ. ರಾಜ್ಕುಮಾರ್, ರಜನಿಕಾಂತ್ ಮುಂತಾದ ದಿಗ್ಗಜರು ಮೆಚ್ಚಿಕೊಂಡಿದ್ದರು. ಜೋಗಿ ಅಂದಾಕ್ಷಣ…..ತಾಯಿ-ಮಗನ ಮಮತೆ, ರೌಡಿಸಂ, ಸೂಪರ್ ಹಿಟ್ ಗೀತೆಗಳು..ಜೋಗಿ ಅಲಿಯಾಸ್ ಮಾದೇಶ, ಬಿಡ್ಡ, ಪಟ್ರೆ, ಕೋಟೆ ಸಿದ್ದ, ಪುಂಗ ಪಾತ್ರಗಳು ಥಟ್ ಅಂತ ನೆನಪಾಗುತ್ತೆ. ಅದು 2005ರ ಆಗಸ್ಟ್ ತಿಂಗಳು. ಇಡೀ ಕರ್ನಾಟಕವೇ ‘ಜೋಗಿ’ ಸಿನಿಮಾಗಾಗಿ ಕಾಯುತ್ತಿತ್ತು. ಅದಾಗಲೇ ಬಿಡುಗಡೆ ಆಗಿದ್ದ ಹಾಡುಗಳು ಧೂಳೆಬ್ಬಿಸಿದ್ದವು. ಶಿವರಾಜ್ಕುಮಾರ್ ಅವರ ವಿಭಿನ್ನ ಗೆಟಪ್ಗಳು ಪೋಸ್ಟರ್ಗಳಲ್ಲಿ […]readmore
ಬಾಲನಟಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ಬಳಿಕ ಸ್ಟಾರ್ ನಟಿಯಾಗಿ ಗುರುತಿಸಿಕೊಂಡ ನಟಿ ಅಮೂಲ್ಯ ಇದೀಗ ಮುದ್ದು ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಕೃಷ್ಣ ಜನ್ಮಷ್ಟಮಿಯ ಪ್ರಯುಕ್ತ ಮೊದಲ ಭಾರಿಗೆ ಅಮೂಲ್ಯ ಮುದ್ದು ಮಕ್ಕಳ ಮುಖವನ್ನು ತೋರಿಸಿದ್ದಾರೆ. ಸಿನಿಮಾ ರಂಗದಿಂದ ದೂರವಿದ್ದು ನಟಿ ಅಮೂಲ್ಯ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮಗು ಹುಟ್ಟಿದ ಕೆಲ ದಿನಗಳ ಬಳಿಕ ಮಕ್ಕಳ ಬೆರಳುಗಳನ್ನ ಮಾತ್ರವೇ ತೋರಿಸಿದ್ದ ಅಮೂಲ್ಯ ಇದೀಗ ಅವಳಿ ಮಕ್ಕಳ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. […]readmore
ಝೀ ಕನ್ನಡದ ಖ್ಯಾತ ಧಾರವಾಹಿ ಜೊತೆ ಜೊತೆಯಲ್ಲಿ ತಂಡದಿಂದ ನಟ ಅನಿರುದ್ಧ್ ಅವರನ್ನು ಕೈ ಬಿಡಲಾಗಿದೆ. ಅನಿರುದ್ಧ್ ಹಾಗೂ ಧಾರವಾಹಿ ತಂಡದಲ್ಲಿ ಮನಸ್ತಾಪ ಶುರುವಾಗಿದ್ದು ಇಂದು ಅನಿರುದ್ಧ್ ಇಲ್ಲದೆ ಚಿತ್ರೀಕರಣ ಮಾಡಲಾಗಿದೆ. ಅಲ್ಲದೆ ಅನಿರುದ್ಧ್ ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಹೊಸ ಕಲಾವಿದರನ್ನು ಧಾರವಾಹಿ ತಂಡ ಹುಡುಕುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜೊತೆ ಜೊತೆಯಲಿ ಧಾರವಾಹಿಯ ನಿರ್ದೇಶಕ ಹಾಗೂ ನಿರ್ಮಾಪಕ ಆರೂರು ಜಗದೀಶ್, ‘ಜೊತೆ ಜೊತೆಯಲಿ ಧಾರಾವಾಹಿಗೆ ಕಥೆಯೇ ಹೀರೋ ಹಾಗೂ ಹಿರೋಯಿನ್. ಯಾರೇ ಇರಲಿ, ಇರದೇ ಇರಲಿ […]readmore
ಟಾಲಿವುಡ್ ನಟ ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷಿತ ಲೈಗರ್ ಸಿನಿಮಾ ಬಿಡುಗಡೆಗೆ ಕೆಲವೇ ಕೆಲವು ದಿನಗಳು ಮಾತ್ರ ಭಾಕಿ ಇದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇಂದು ಸಿನಿಮಾದ ಪ್ರಚಾರದ ಸಲುವಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿದೆ. ಈ ವೇಳೆ ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯಾ ಪಾಂಡೆ ಪುನೀತ್ ರಾಜ್ ಕುಮಾರ್ ಪುಣ್ಯ ಭೂಮಿಗೆ ಭೇಟಿ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ನಿಧನರಾಗಿ ಹಲವು ತಿಂಗಳುಗಳೇ ಕಳೆದಿದೆ. ಆದರೆ ಅಭಿಮಾನಿಗಳ ಮನಸ್ಸಲ್ಲಿ […]readmore
ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಹಿರಿಯ ಮಗ ಮನೋರಂಜನ್ ಮದುವೆ ತಯಾರಿ ಜೋರಾಗಿಯೇ ನಡೆಯುತ್ತಿದೆ. ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ರವಿಚಂದ್ರನ್ ಮಗನ ಮದುವೆಗೆ ಆಹ್ವಾನ ನೀಡಿದ್ದಾರೆ. ಮುಖ್ಯಮಂತ್ರಿಗಳನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ರವಿಚಂದ್ರನ್ ಕುಟುಂಬ ಸಮೇತ ಮದುವೆಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಇದೇ ಆಗಸ್ಟ್ 20 ಹಾಗೂ 21 ರಂದು ಬೆಂಗಳೂರಿನಲ್ಲಿ ಮನೋರಂಜನ್ ಮತ್ತು ಸಂಗೀತಾ ವಿವಾಹ ನಡೆಯಲಿದೆ. ಈಗಾಗ್ಲೆ ಸಿನಿಮಾ ರಂಗದವರು ಹಾಗೂ ರಾಜಕೀಯ ಗಣ್ಯರಿಗೆ ರವಿಚಂದ್ರನ್ ಆಹ್ವಾನ ನೀಡಿದ್ದಾರೆ. […]readmore
