• June 4, 2026

‘ದೋಬಾರ’ ಸಿನಿಮಾ ಆಸ್ಕರ್ ಗೆ ಕಳುಹಿಸಿ: ಅನುರಾಗ್ ಕಶ್ಯಪ್ ಗೆ ತಿರುಗೇಟು ನೀಡಿದ ವಿವೇಕ್ ಅಗ್ನಿಹೋತ್ರಿ

ಬಾಲಿವುಡ್ ನಲ್ಲಿ ಸಾಕಷ್ಟು ಸದ್ದು ಮಾಡಿದ್ದ, ಪ್ರಧಾನಿ ನರೇಂದ್ರ ಮೋದಿಯಿಂದ ಮೆಚ್ಚುಗೆ ಘಳಿಸಿ ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಆಸ್ಕರ್ ರೇಸ್ ಗೆ ಕಳುಹಿಸುವ ಕುರಿತ ಚರ್ಚೆ ಶುರುವಾಗಿದೆ. ಆದರೆ ಈ ಬಗ್ಗೆ ನಿರ್ದೇಶಕ ಅನುರಾಗ್ ಕಶ್ಯಪ್ ಅಸಮಾಧಾನ ಹೊರ ಹಾಕಿದ್ದರು. ಇದೀಗ ಅನುರಾಗ್ ಕಶ್ಯಪ್ ಮಾತಿಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ. ನಿನ್ನೆಯಷ್ಟೇ ಅನುರಾಗ್ ಕಶ್ಯಪ್ ನಿರ್ದೇಶನದ, ತಾಪ್ಸಿ ಪನ್ನು ನಟನೆಯ ದೋಬಾರ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಚೆನ್ನಾಗಿದ್ರು ಬಾಕ್ಸ್ ಆಫೀಸ್ ಕಲೆಕ್ಷನ್ ಮಾತ್ರ ಮಕಾಡೆ ಮಲಗಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ದೋಬಾರ ಬಿಡುಗಡೆಯಾದ ಎರಡೇ ದಿನಕ್ಕೆ ಸೈಲೆಂಟ್ ಆಗಿದೆ. ಹಾಗಾಗಿಯೇ ವಿವೇಕ್ ಅಗ್ನಿಹೋತ್ರಿ ವ್ಯಂಗ್ಯವಾಗಿಯೇ ಇಂತಹ ಸಿನಿಮಾವನ್ನು ಆಸ್ಕರ್ ಗೆ ಕಳುಹಿಸಿ ಎಂದು ಟ್ವೀಟ್ ಮಾಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸಮಾಜದಲ್ಲಿ ದ್ವೇಷವನ್ನು ಬಿತ್ತುತ್ತಿದೆ. ಕಲಾತ್ಮಕ ಯಾವುದೇ ಅಂಶಗಳು ಇಲ್ಲದ ಸಿನಿಮಾ ಇದಾಗಿದೆ. ಹಾಗಾಗಿ ಇಂತಹ ಸಿನಿಮಾವನ್ನು ಆಸ್ಕರ್ ಗೆ ಕಳುಹಿಸಿದರೆ, ದೇಶದ ಮಾನ ಹರಾಜಾಗುತ್ತದೆ ಇಂತಹ ಸಿನಿಮಾಗಳು ದೇಶದಲ್ಲಿ ನಿರ್ಮಾಣ ಆಗುವುದೇ ತಲೆತಗ್ಗಿಸುವಂಥದ್ದು ಎಂದು ಹೇಳಿದ್ದರು. ಕಶ್ಯಪ್ ಮಾತು ಭಾರೀ ಚರ್ಚೆಗೆ ಕಾರಣವಾಗಿತ್ತು.    

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now