• June 20, 2026

karnatakaspecial.in

https://karnatakaspecial.in/

1 ಕೋಟಿ 20 ಲಕ್ಷ ವೆಚ್ಚದಲ್ಲಿ ಸಾರ್ವಜನಿಕರಿಗಾಗಿ ಲೀಲಾವತಿ ಕಟ್ಟಿಸಿದ ಆಸ್ಪತ್ರೆ ಉದ್ಘಾಟಿಸಿದ

ಸ್ಯಾಂಡಲ್ ವುಡ್ ಹಿರಿಯ ನಟಿ ಡಾ.ಲೀಲಾವತಿ ನೆಲಮಂಗಲದ ಬಳಿ ಇರುವ ಸೋಲದೇವನ ಹಳ್ಳಿಯಲ್ಲಿ ಕಟ್ಟಿಸಿರುವ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಲೀಲಾವತಿ ಸಮಾಜ ಸೇವೆಯನ್ನು ಮನಸಾರೆ ಹೊಗಳಿದರು. ಚೆನ್ನೈನಲ್ಲಿ ಇದ್ದ ಭೂಮಿಯನ್ನು ಮಾರಿ ಅದರಿಂದ ಬಂದ ಹಣದಲ್ಲಿ ಲೀಲಾವತಿ ಆಸ್ಪತ್ರೆ ಕಟ್ಟಿಸಿದ್ದಾರೆ. ಅಲ್ಲದೆ ಉದ್ಘಾಟನೆ ಬಳಿಕ ಆಸ್ಪತ್ರೆಯನ್ನು ಸರ್ಕಾರಕ್ಕೆ ಬಿಟ್ಟುಕೊಡುವುದಾಗಿ ಈ ಹಿಂದೆಯೇ ಹೇಳಿದ್ದರು. ಕಳೆದ ಕೆಲ ದಿನಗಳ ಹಿಂದೆಯೇ ಮುಖ್ಯಮಂತ್ರಿಯನ್ನು ಭೇಟಿಯಾಗಿ ಆಸ್ಪತ್ರೆ ಉದ್ಘಾಟಿಸಲು ಕೇಳಿಕೊಂಡಿದ್ದರು. ಇದೀಗ ಮುಖ್ಯಮಂತ್ರಿಗಳು ಲೀಲಾವತಿ ಹಾಗೂ ವಿನೋದ್ ರಾಜ್ […]Read More

ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಪಬ್ಲಿಕ್ ನಲ್ಲೇ ಕೆನ್ನೆಗೆ ಭಾರಿಸಿದ ಸ್ಟಾರ್ ನಟಿ

ಸಿನಿಮಾ ನಟಿಯರಿಗೆ ಪಬ್ಲಿಕ್ ಪ್ಲೇಸ್ ನಲ್ಲಿ ಕೆಲವೊಮ್ಮೆ ಅನುಚಿತ ವರ್ತನೆಗಳು ಎದುರಾಗೋದು ಸಾಮಾನ್ಯ. ಅಂತೆಯೇ ಮಲಯಾಳಂ ಸ್ಟಾರ್ ನಟಿ ಸಾನಿಯಾ ಐಯ್ಯಪ್ಪನ್ ಜೊತೆ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೋರ್ವ ಅನುಚಿತವಾಗಿ ವರ್ತಿಸಿದ್ದಾನೆ. ಸ್ಯಾಟರ್ಡೆ ನೈಟ್ ಸಿನಿಮಾದ ಪ್ರಮೋಷಯ್ ಕೆಲಸದಲ್ಲಿ ತೊಡಗಿಕೊಂಡಿರುವ ನಟಿಗೆ ವ್ಯಕ್ತಿಯೋರ್ವ ಅನುಚಿತವಾಗಿ ವರ್ತಿಸಿದ್ದು ಆತನಿಗೆ ನಟಿ ಕಪಾಳ ಮೋಕ್ಷ ಮಾಡಿದ್ದಾರೆ. ಮಾಲಯಾಳಂ ಸಿನಿಮಾ ರಂಗದಲ್ಲಿ ಸಾಕಷ್ಟು ಖ್ಯಾತಿ ಘಳಿಸಿರುವ ಸಾನಿಯಾ ಐಯ್ಯಪ್ಪನ್ ನಟನೆಯ `ಸ್ಯಾಟರ್ಡೆ ನೈಟ್’ ಚಿತ್ರ ಇದೀಗ ರಿಲೀಸ್‌ಗೆ ರೆಡಿಯಿದೆ. ಕೇರಳದ ವಿವಿಧ ಕಡೆ […]Read More

ನಟ ವಿಶಾಲ್ ಮನೆ ಮೇಲೆ ಅಪರಿಚಿತ ವ್ಯಕ್ತಿಗಳಿಂದ ಕಲ್ಲು ತೂರಾಟ: ಆರೋಪಿಗಳ ಬಂಧನಕ್ಕೆ

ತಮಿಳಿನ ಖ್ಯಾತ ನಟ ವಿಶಾಲ್ ಅವರ ಚೆನ್ನೈನ ಅಣ್ಣಾ ನಗರದಲ್ಲಿರುವ ನಿವಾಸಕ್ಕೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಅಣ್ಣಾ ನಗರದಲ್ಲಿರುವ ವಿಶಾಲ್ ಮನೆಯಲ್ಲಿ ಅವರ ತಂದೆ ತಾಯಿ ವಾಸಿಸುತ್ತಿದ್ದು ಕಿಡಿಗೇಡಿಗಳ ಕೃತ್ಯಕ್ಕೆ ಮನೆಯ ಕಿಟಕಿ ಗಾಜು ಪುಡಿ ಪುಡಿಯಾಗಿದೆ. ದಾಳಿಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಗಳ ಬಂಧನಕ್ಕೆ ವಿಶಾಲ್ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಕೆಂಪು ಬಣ್ಣದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ವಿಶಾಲ್ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಎಸ್ಕೇಪ್ ಆಗಿದ್ದಾರೆ. ದಾಳಿಯಲ್ಲಿ ಮನೆಯ ಬಾಲ್ಕನಿ ಗ್ಲಾಸ್ […]Read More

ಬಿಡುಗಡೆ ಹೊಸ್ತಿನಲ್ಲೇ ‘ಪೊನ್ನಿಯಲ್ ಸೆಲ್ವನ್’ ಗೆ ಎದುರಾಯ್ತು ಸಂಕಷ್ಟ: ಚಿತ್ರ ರಿಲೀಸ್ ಮಾಡಿದ್ರೆ

ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ರಿಲೀಸ್ ಗೆ ಇನ್ನೊಂದು ದಿನ ಮಾತ್ರವೇ ಭಾಕಿ ಇದೆ. ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ತಮಿಳಿನ ಜೊತೆಗೆ ಕನ್ನಡ, ತೆಲುಗು ಭಾಷೆಗಳಿಗೂ ಡಬ್ ಆಗಿ ಬಿಡುಗಡೆ ಆಗುತ್ತಿದೆ. ದೊಡ್ಡ ದೊಡ್ಡ ಕಲಾವಿದರು ಬಣ್ಣ ಹಚ್ಚಿರುವ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇದ್ದು ಇದೀಗ ರಿಲೀಸ್ ಸಂದರ್ಭದಲ್ಲಿ ಸಂಕಷ್ಟವೊಂದು ಎದುರಾಗಿದೆ. ಪೊನ್ನಿಯನ್ ಸೆಲ್ವನ್ ಸಿನಿಮಾ ನಾಳೆ(ಸೆ.30)ರಂದು ಬಿಡುಗಡೆ ಆಗುತ್ತಿದೆ. ಈ ವೇಳೆ ಸಿನಿಮಾ ರಿಲೀಸ್ ಮಾಡಿದರೆ […]Read More

ಪ್ರಶಾಂತ್ ಸಂಬರ್ಗಿಯನ್ನು ‘ಕುತಂತ್ರಿ ಕಲಾವಿದ’ ಎಂದ ಸಾನ್ಯಾ ಐಯ್ಯರ್

ಬಿಗ್ ಬಾಸ್ ಮನೆಯ ಆಟ ರಂಗೇರಿದೆ. ಈಗಾಗ್ಲೆ ದೊಡ್ಮನೆ ಒಳಗೆ ಪ್ರೀತಿ, ಪ್ರೇಮ, ಕಣ್ಣೀರು ಶುರುವಾಗಿದ್ದು ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ಸಿಗ್ತಿದೆ. ಆದರೆ ನಟಿ ಸಾನ್ಯಾ ಐಯ್ಯರ್ ಮಾತ್ರ ಸಖತ್ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿ ಸದಾ ಲವಲವಿಕೆಯಿಂದ ಇದ್ದ ಸಾನ್ಯಾ ಐಯ್ಯರ್ ಬಿಗ್ ಬಾಸ್ ಟಿವಿ ಶೋನಲ್ಲಿ ಗುಂಪಿಂದ ಗೋವಿಂದ್ ಆಗಿದ್ದಾರೆ. ಒಟಿಟಿಯಲ್ಲಿ ರೂಪೇಶ್ ಶೆಟ್ಟಿ ಜೊತೆ ಅಂಟಿಕೊಂಡೆ ಓಡಾಡುತ್ತಿದ್ದ ಸಾನ್ಯಾ ಐಯ್ಯರ್ ಇದೀಗ ಕೊಂಚ ಅಂತರ ಕಂಡುಕೊಳ್ತಿದ್ದಾರೆ. ಈ ಮಧ್ಯೆ ಸಾನ್ಯಾ […]Read More

ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ಚಿತ್ರದ ಟೈಟಲ್ ಲಾಂಚ್ ಗೆ ಕೌಂಟ್ ಡೌನ್

ರಾಜಕಾರಣಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಸ್ಯಾಂಡಲ್ ವುಡ್ ಸಿನಿ ಇಂಡಸ್ಟ್ರಿಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿರೋದು ಗೊತ್ತೆ ಇದೆ. ಕಿರೀಟಿ ನಟನೆಯ ಮೊದಲ ಸಿನಿಮಾದ ಮುಹೂರ್ತ ಸಖತ್ ಅದ್ದೂರಿಯಾಗಿ ನಡೆದಿದ್ದು ನಿರ್ದೇಶಕ ರಾಜ ಮೌಳಿ ಕಿರೀಟಿಗೆ ಸಾಥ್ ನೀಡಿದ್ದರು. ಇತ್ತೀಚೆಗಷ್ಟೇ ನಟ ಶಿವರಾಜ್ ಕುಮಾರ್ ಕಿರೀಟಿ ಸಿನಿಮಾದ ಶೂಟಿಂಗ್ ಸೆಟ್ ಗೆ ಭೇಟಿ ನೀಡಿ ಕೆಲ ಸಮಯ ಸಿನಿಮಾ ತಂಡದ ಜೊತೆ ಕಳೆದಿದ್ದರು. ಇದೀಗ ಕಿರೀಟಿ ನಟನೆಯ ಮೊದಲ ಸಿನಿಮಾದ ಟೈಟಲ್ ಲಾಂಚ್ ಗೆ ಕೌಂಟ್ ಡೌನ್ ಶುರುವಾಗಿದೆ. […]Read More

ಝೈದ್ ಖಾನ್ ಸಿನಿಮಾದ ಮೇಲೆ ಹೆಚ್ಚಾಯ್ತು ನಿರೀಕ್ಷೆ: 4 ಮಿಲಿಯನ್ ವೀವ್ಸ್ ಪಡೆದ

ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಈಗಾಗ್ಲೆ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿರುವ ಝೈದ್ ಖಾನ್ ಗಾಂಧಿನಗರದಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗ್ತಿದೆ. ಜಯತೀರ್ಥ ನಿರ್ದೇಶನದಲ್ಲಿ ಮೂಡಿಬಂದಿರೋ ಬನಾರಸ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಯುಟ್ಯೂಬ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾದ ಟ್ರೈಲರ್ ಇದೇ ಸೋಮವಾರ (ಸೆ.26) ರಂದು ಐದು ಭಾಷೆಯಲ್ಲಿ ರಿಲೀಸ್ ಆಗಿದೆ. ಟ್ರೈಲರ್ […]Read More

ನಟ ಮಹೇಶ್ ಬಾಬು ತಾಯಿ ಇಂದಿರಾ ದೇವಿ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ನಟ ಮಹೇಶ್ ಬಾಬು ತಾಯಿ ಇಂದಿರಾ ದೇವಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕಳೆದ ಕೆಲ ಸಮಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಂದಿರಾ ದೇವಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಮಹೇಶ್ ತಾಯಿ ಅವರಿಗೆ ಹೈದರಾಬಾದ್ ನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮಹೇಶ್ ತಾಯಿ ನಿಧನದ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಸಿನಿಮಾ ರಂಗದ ಹಿನ್ನೆಲೆಯಿಂದ ಬಂದವರು. […]Read More

ಮಗನ ಮದುವೆಯ ಬಳಿಕ ಇಷ್ಟ ಪಟ್ಟು ಕಟ್ಟಿಸಿದ ಮನೆ ಬದಲಾಯಿಸಿದ ರವಿಚಂದ್ರನ್: ಇಲ್ಲಿದೆ

ಸ್ಯಾಂಡಲ್ ವುಡ್ ಸಿನಿ ರಂಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಎಷ್ಟು ಫೇಮಸ್ಸೋ ಅಷ್ಟೇ ಫೇಮಸ್ ರಾಜಾಜಿನಗರದಲ್ಲಿರುವ ಅವರ ನಿವಾಸ. ರವಿಚಂದ್ರನ್ ಮನೆ ಎಲ್ಲಿದೆ ಎಂದರೆ ಯಾರು ಬೇಕಾದರೂ ಹೇಳುತ್ತಾರೆ ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಮನೆ ಎಂದು. ಅಷ್ಟು ಫೇಮಸ್ ಆಗಿತ್ತು ರವಿಚಂದ್ರನ್ ಅವರ ಮನೆ. ಇದೀಗ ನಟ ರವಿಚಂದ್ರನ್ ಮನೆ ಖಾಲಿ ಮಾಡಿ ಬೇರೆಡೆಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ರವಿಚಂದ್ರನ್ ಸ್ಪಷ್ಟನೆ ನೀಡಿದ್ದಾರೆ. ದೊಡ್ಡ ಮಗನ ಮದುವೆಯ ಬಳಿಕ ರವಿಚಂದ್ರನ್ ರಾಜಾಜಿನಗರದ ರಾಜಕುಮಾರ ರಸ್ತೆಯಲ್ಲಿರುವ ಮನೆ ಬದಲಾಯಿಸಿದ್ದಾರೆ. […]Read More

ನನ್ನ ಮಗಳು ನಟಿಯಾಗಬೇಕು ಎಂದರು ನಾನು ಆಕೆಯ ಜೊತೆ ಮಲಗುತ್ತೇನೆ ಎಂದಿದ್ದ ಆ

ಕಾಸ್ಟಿಂಗ್ ಕೌಚ್ ಎನ್ನುವುದು ಎಲ್ಲಾ ಭಾಷೆಯಲ್ಲೂ ಇದ್ದೆ ಇದೆ. ಈ ಹಿಂದೆ ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುತ್ತಿದ್ದ ನಟಿಯರು ಇದೀಗ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಹಿ ಸತ್ಯಗಳನ್ನು ಅನೇಕ ನಟಿಯರು ಬಹಿರಂಗಗೊಳಿಸಿದ್ದಾರೆ. ಸದ್ಯ ನಟಿ ರತನ್​ ರಾಜಪೂತ್ ಕಾಸ್ಟಿಂಗ್ ಕೌಚ್ ಕುರಿತು ಕೆಲವು ಶಾಕಿಂಗ್ ವಿಚಾರಗಳನ್ನು ಬಹಿರಂಗಗೊಳಿಸಿದ್ದಾರೆ. ತಾನು ಸಿನಿಮಾ ರಂಗಕ್ಕೆ ಬಂದ ಸಂದರ್ಭದಲ್ಲಿ ನಿರ್ಮಾಪಕನೊಬ್ಬ ನಡೆದುಕೊಂಡ ರೀತಿ ಆಘಾತ ಉಂಟು ಮಾಡಿತ್ತು ಎಂದಿದ್ದಾರೆ. ಹಿಂದಿಯ ಕೆಲವೊಂದು ಧಾರವಾಹಿಗಳಲ್ಲಿ ನಟಿಸಿರುವ ರತನ್ ರಾಜಪೂತ್ ಹಿಂದಿ ಬಿಗ್ ಬಾಸ್ […]Read More

Phone icon
Call Now
Reach us!
WhatsApp icon
Chat Now