• June 21, 2026

karnatakaspecial.in

https://karnatakaspecial.in/

ನಟಿ ವರಲಕ್ಷ್ಮೀ ಶರತ್ ಕುಮಾರ್ ಗೆ ಕೋವಿಡ್ ಪಾಸಿಟಿವ್

ಕಿಚ್ಚ ಸುದೀಪ್ ನಟನೆಯ ಮಾಣಿಕ್ಯ ಸಿನಿಮಾದ ಮೂಲಕ ಕನ್ನಡಿಗರ ಮನ ಗೆದಿದ್ದ ನಟಿ ವರಲಕ್ಷ್ಮೀ ಶರತ್ ಕುಮಾರ್ ಅವರಿಗೆ ಕೋವಿಡ್ ದೃಢಪಟ್ಟಿದೆ. ಈ ಬಗ್ಗೆ ಸ್ವತಃ ನಟಿ ವರಲಕ್ಷ್ಮೀ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೋವಿಡ್ ದೃಡಪಟ್ಟಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ, ಮಾಸ್ಕ್ ಧರಿಸಿ, ಕೋವಿಡ್ ಲಕ್ಷಣಗಳಿದ್ದರೆ ವೈದ್ಯರನ್ನ ಕೂಡಲೇ ಸಂಪರ್ಕಿಸಿ, ಜೊತೆಗೆ ಇತ್ತೀಚೆಗೆ ನನ್ನನ್ನು ಭೇಟಿಯಾದವರು ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಜ್ವರ ಹಾಗೂ ಮೈ ಕೈ ನೋವಿನಿಂದ ಬಳಲುತ್ತಿರುವ […]Read More

ಮಹಾಲಕ್ಷ್ಮಿ ಲೇಔಟ್ ವಾರ್ಡ್ ಗೆ ಪುನೀತ್ ಹೆಸರಟ್ಟಿರೋದು ಖುಷಿ ತಂದಿದೆ: ಬೊಮ್ಮಾಯಿ

ಮಹಾಲಕ್ಷ್ಮಿ ಲೇಔಟ್‍ನ 55ನೇ ವಾರ್ಡ್‍ಗೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೆಸರಿಟ್ಟಿರೋದು ಸಂತೋಷ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನ ಶಂಕರಮಠ ವಾರ್ಡ್‍ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಬೊಮ್ಮಾಯಿ, ವಾರ್ಡ್ ಗೆ ಪುನೀತ್ ರಾಜ್ ಕುಮಾರ್ ಹೆಸರನ್ನು  ಇಟ್ಟಿರೋದು ಸಾಕಷ್ಟು ಖುಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದಿರು. ಪಾಲಿಕೆಯ ಯಾವುದಾದರೂ ಒಂದು ವಾರ್ಡ್​ಗೆ ಕರ್ನಾಟಕ ರತ್ನ ಪುನೀತ್ ರಾಜ್​ಕುಮಾರ್ […]Read More

“ಆಕಾಶವಾಣಿ ಮೈಸೂರು ಕೇಂದ್ರ” ದಿಂದ ಹೊರಬಂತು ಸುಮಧುರ ಹಾಡು

  ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಸದ್ಯದಲ್ಲೇ ತೆರೆಗೆ. ಬೆಳಗ್ಗೆ ಎದ್ದು ರೆಡಿಯೋ ಆನ್ ಮಾಡಿದ್ದರೆ ನಮಸ್ಕಾರ ಆಕಾಶವಾಣಿ ಮೈಸೂರು ಕೇಂದ್ರ ಎಂಬ ಮಧುರವಾದ ಮಾತು ಕೇಳಿ ಬರುತ್ತದೆ. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಜಬರ್ದಸ್ತ್ ಶೋ ಖ್ಯಾತಿಯ ಸತೀಶ್ ಬತ್ತುಲ ನಿರ್ದೇಶಿಸಿರುವ “ಆಕಾಶವಾಣಿ ಮೈಸೂರು ಕೇಂದ್ರ” ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿ, ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಕಾರ್ತಿಕ್ ಕೊಡಕಂಡ್ಲ ಈ ಹಾಡಿಗೆ ಸಂಗೀತ […]Read More

ಚೆನ್ನೈನ ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟ ಪ್ರತಾಪ್ ಪೋತೆನ್

ಬಹುಭಾಷಾ ನಟ, ನಿರ್ದೇಶಕ, ಬರಹಗಾರ ಪ್ರತಾಪ್ ಪೋತೆನ್ ಅವರ ದೇಹ ಚೆನ್ನೈನ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ. 69 ವರ್ಷ ವಯಸ್ಸಿನ ಪ್ರತಾಪ್ ಚೆನ್ನೈನ ಕಿಲ್ ಪೌಕ್ ನ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದು ಇಂದು ಬೆಳಗ್ಗೆ ಅವರ ದೇಹ ಶವವಾಗಿ ಪತ್ತೆಯಾಗಿದೆ. ಮಲಯಾಳಂ ಸಿನಿಮಾ ರಂಗದ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಪ್ರತಾಪ್ ಪೋತೆನ್ ಬಳಿಕ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದರು. ಕಿಲ್ ಪೌಕ್ ಅಪಾರ್ಟ್ ಮೆಂಟ್ ನಲ್ಲಿ […]Read More

ಅಕ್ಟೋಬರ್ ಅಂತ್ಯಕ್ಕೆ ಬಿಡುಗಡೆ ಆಗಲಿದೆ ಪುನೀತ್ ರಾಜ್ ಕುಮಾರ್ ಡ್ರೀಮ್ ಪ್ರಾಜೆಕ್ಟ್ ಗಂಧದ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನಸಿನ ಗಂಧದ ಗುಡಿ ಸಾಕ್ಷ್ಯಚಿತ್ರ ಅಕ್ಟೋಬರ್28ರಂದು ಬಿಡುಗಡೆ ಆಗಲಿದೆ ಎಂದು ಪುನೀತ್ ಪತ್ನಿ ಅಶ್ವೀನಿ ಪುನೀತ್ ರಾಜ್ ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅಶ್ವಿನಿ, ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರು ಪ್ರೀತಿಯ ಕಾಣಿಕೆ ಎಂದು ಅಶ್ವಿನಿ ಬರೆದುಕೊಂಡಿದ್ದಾರೆ. ಗಂಧದ ಗುಡಿ ಸಾಕ್ಷ್ಯಚಿತ್ರ ಪುನೀತ್ […]Read More

ಯಶ್ ಮುಂದಿನ ಸಿನಿಮಾ ಯಾವುದು? ನರ್ತನ್ ನಿರ್ದೇಶನದಲ್ಲಿ ನಟಿಸ್ತಿಲ್ವಾ ರಾಕಿಂಗ್ ಸ್ಟಾರ್?

ಕೆಜಿಎಫ್ ಸಿನಿಮಾ ರಿಲೀಸ್ ಆದ ಬಳಿಕ ಯಶ್ ದೇಶ ವಿದೇಶದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕೆಜಿಎಫ್ ಬಳಿಕ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಅನ್ನೋ ಪ್ರಶ್ನೆ ಶುರುವಾಗಿದೆ. ಪರಭಾಷೆಯ ನಿರ್ದೇಶಕರು ಯಶ್ ಕಾಲ್ ಶೀಟ್ ಗಾಗಿ ಕಾದು ಕೂತಿದ್ದು ಇದೀಗ ಯಶ್ ಟೀಂ ಕಡೆಯಿಂದ ಹೊಸ ವಿಷಯವೊಂದ ಹೊರ ಬಿದ್ದಿದೆ. ಕೆಜಿಎಫ್ ಸಿನಿಮಾದ ಬಳಿಕ ಯಶ್ ಗೆ ಆಕ್ಷಯ್ ಕಟ್ ಹೇಳೋಕೆ ಪರಭಾಷೆಯ ನಿರ್ದೇಶಕರು ಕ್ಯೂನಲ್ಲಿ ನಿಂತಿದ್ದಾರೆ. ಆದರೆ ಯಶ್ ಕಾಲ್ ಶೀಟ್ ಸಿಕ್ಕಿದ್ದು ಮಾತ್ರ […]Read More

ಬಿಗ್ ಬಾಸ್ ನಿರೂಪಣೆಗೆ ಸಾವಿರ ಕೋಟಿ ಸಂಭಾವನೆ ಪಡೆದ ಸಲ್ಮಾನ್ ಖಾನ್! ಕಿಚ್ಚ

ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಸೀಸನ್ 16 ಇನ್ನೇನೂ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಮಧ್ಯೆ ಸಲ್ಮಾನ್ ಖಾನ್ ಪಡೆದುಕೊಂಡಿರುವ ಸಂಭಾವನೆಯ ಬಗ್ಗೆ ಬಿಟೌನ್ ನಲ್ಲಿ ದೊಡ್ಡ ಸುದ್ದಿಯಾಗ್ತಿದೆ. ಈ ಭಾರಿ ಟಿವಿಯ ಜೊತೆಗೆ ಓಟಿಟಿಯಲ್ಲೂ ಬಿಗ್ ಬಾಸ್ ಪ್ರಸಾರವಾಗ್ತಿದ್ದು ಇದಕ್ಕಾಗಿ ಸಲ್ಮಾನ್ ದುಬಾರಿ ಸಂಭಾವನೆಯನ್ನೇ ಪಡೆದುಕೊಂಡಿದ್ದಾರಂತೆ. ಸಲ್ಮಾನ್ ಖಾನ್ ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡಲು 350 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದರು. ಆದರೆ ಬಿಗ್ ಬಾಸ್ ಸೀಸನ್ 16 ಟಿವಿ ಹಾಗೂ ಒಟಿಟಿಯಲ್ಲಿ […]Read More

ಕ್ರಾಂತಿ ಚಿತ್ರದ ಮೇಕಿಂಗ್ ಫೋಟೋ ವೈರಲ್: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಚಾಲೆಂಜಿಂಗ್ ಸ್ಟಾರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮುಂದಿನ ಸಿನಿಮಾ ಕ್ರಾಂತಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗ್ಲೆ ಬಿರುಸಿನಿಂದ ಶೂಟಿಂಗ್ ನಲ್ಲಿ ತೊಡಗಿಕೊಂಡಿರುವ ಚಿತ್ರತಂಡ ಕೊನೆಯ ಹಂತದ ಚಿತ್ರಕರಣದಲ್ಲಿ ಬ್ಯುಸಿಯಾಗಿದೆ. ಈ ಮಧ್ಯೆ ಸ್ವತಃ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನ ನೀಡಿದ್ದಾರೆ. ದರ್ಶನ್ ಸಿನಿಮಾ ಅಂದರೇನೆ ಹಾಗೆ. ಅವರ ಲುಕ್, ಗೆಟಪ್, ಪಾತ್ರದ ಬಗ್ಗೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ಅದ್ರಲ್ಲೂ ಕ್ರಾಂತಿ ಸಿನಿಮಾದ ಮೇಲೆ ನಿರೀಕ್ಷೆ ತುಸು ಹೆಚ್ಚಾಗಿಯೇ ಇದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿ ಸಾಕಷ್ಟು […]Read More

‘ವಿಕ್ರಾಂತ್ ರೋಣ’ನ ಮೇಕಿಂಗ್ ಝಲಕ್ ಹಂಚಿಕೊಂಡ ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ಜೊತೆಗೆ ಪರಭಾಷೆಯಲ್ಲೂ ಸದ್ಯದ ಮಟ್ಟಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿರು ಸಿನಿಮಾ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ವಿಕ್ರಾಂತ್ ರೋಣ ಸಿನಿಮಾವನ್ನು ಪರಭಾಷೆಯಲ್ಲಿ ಬಿಡಗುಡೆ ಮಾಡಲು ದೊಡ್ಡ ದೊಡ್ಡ ಸ್ಟಾರ್ ಗಳು ಮುಂದೆ ಬಂದಿದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ವಿಕ್ರಾಂತ್ ರೋಣನ ಮೇಕಿಂಗ್ ಝಲಕ್ ಹರಿ ಬಿಟ್ಟು ಮತ್ತಷ್ಟು ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ್ದಾರೆ. ಶೂಟಿಂಗ್ ಸ್ಪಾಟ್ ನ ಕೆಲವು ದೃಶ್ಯಗಳನ್ನು ಸುದೀಪ್ ಹಂಚಿಕೊಂಡಿದ್ದಾರೆ. ಸದ್ಯ ಸುದೀಪ್ […]Read More

ಡಾ.ರಾಜ್ ಕುಮಾರ್, ಪೃಥ್ವಿರಾಜ್ ಕಪೂರ್, ಬಾಲಕೃಷ್ಣರಂತಹ ದಿಗ್ಗಜರಿಗೆ ಮೇಕಪ್ ಮಾಡಿದ್ದ ಕೇಶವಣ್ಣ ವಿಧಿವಶ

ಚಿತ್ರರಂಗದ ಖ್ಯಾತ ನಟರುಗಳಾದ ಡಾ. ರಾಜ್ ಕುಮಾರ್, ಪೃಥ್ವಿ ರಾಜ್ಕಪೂರ್, ರಜನಿಕಾಂತ್ , ಬಾಲಕೃಷ್ಣ, ಅಂಬರೀಶ್, ನರಸಿಂಹ ರಾಜು, ಅನಂತ್ ನಾಗ್, ರವಿಚಂದ್ರನ್,ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಸೇರಿದಂತೆ ಸಾಕಷ್ಟು ದಿಗ್ಗಜ ನಟರಿಗೆ ಮೇಕಪ್ ಮಾಡಿದ್ದ ಮೇಕಪ್ ಆರ್ಟಿಸ್ಟ್ ಎಂ. ಎಸ್ ಕೇಶವಣ್ಣ ನಿಧನರಾಗಿದ್ದಾರೆ. 85 ವರ್ಷ ವಯಸ್ಸಾಗಿದ್ದ ಕೇಶವಣ್ಣ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಎರಡು ದಿನಗಳ ಹಿಂದೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ […]Read More

Phone icon
Call Now
Reach us!
WhatsApp icon
Chat Now