• June 13, 2026

‘ವಿಕ್ರಾಂತ್ ರೋಣ’ನ ಮೇಕಿಂಗ್ ಝಲಕ್ ಹಂಚಿಕೊಂಡ ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ಜೊತೆಗೆ ಪರಭಾಷೆಯಲ್ಲೂ ಸದ್ಯದ ಮಟ್ಟಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿರು ಸಿನಿಮಾ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ವಿಕ್ರಾಂತ್ ರೋಣ ಸಿನಿಮಾವನ್ನು ಪರಭಾಷೆಯಲ್ಲಿ ಬಿಡಗುಡೆ ಮಾಡಲು ದೊಡ್ಡ ದೊಡ್ಡ ಸ್ಟಾರ್ ಗಳು ಮುಂದೆ ಬಂದಿದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ವಿಕ್ರಾಂತ್ ರೋಣನ ಮೇಕಿಂಗ್ ಝಲಕ್ ಹರಿ ಬಿಟ್ಟು ಮತ್ತಷ್ಟು ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ್ದಾರೆ. ಶೂಟಿಂಗ್ ಸ್ಪಾಟ್ ನ ಕೆಲವು ದೃಶ್ಯಗಳನ್ನು ಸುದೀಪ್ ಹಂಚಿಕೊಂಡಿದ್ದಾರೆ. ಸದ್ಯ ಸುದೀಪ್ ಶೇರ್ ಮಾಡಿರುವ ಸ್ಟಿಲ್ ನೋಡಿದ್ರೆ ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳಿಗೆ ಯಾವುದೇ ಕೊರತೆ ಇಲ್ಲ ಅನ್ನೋದು ಗೊತ್ತಾಗುತ್ತೆ. ವಿಕ್ರಾಂತ್ ರೋಣ ಸಿನಿಮಾದ ಸ್ಟಂಟ್ ಕೊರಿಯೋಗ್ರಾಫಿಯನ್ನು ವಿಜಯ್ ಮಾಸ್ಟರ್ ಮಾಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾಗಾಗಿ ಹೈದರಾಬಾದ್ ನಲ್ಲಿ ದುಬಾರಿ ಸೆಟ್ ಹಾಕಿ ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಆರ್ಟ್ ಡೈರೆಕ್ಟರ್ ಶಿವಕುಮಾರ್ ಸೆಟ್ ವರ್ಕ್ ಮಾಡಿದ್ದು ಅಲ್ಲಿನ ವಿಡಿಯೋವನ್ನ ಸುದೀಪ್ ಹಂಚಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ವಿಕ್ರಾಂತ್ ರೋಣ ಸಿನಿಮಾ ಬಿಡಗಡೆ ಆಗಲಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರೋ ಸಿನಿಮಾ ಜುಲೈ 28ರಂದು ತೆರೆಗೆ ಬರ್ತಿದ್ದು ಅಭಿಮಾನಿಗಳು ಕಾದು ಕೂತಿದ್ದಾರೆ. https://www.instagram.com/tv/CgBVJHDgeno/?utm_source=ig_web_copy_link

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now