ತೆಲುಗಿನ ಸ್ಟಾರ್ ಜೋಡಿಗಳಲ್ಲಿ ನಟಿ ಸಮಂತಾ ಹಾಗೂ ನಾಗಚೈತನ್ಯ ಕೂಡ ಒಂದು. ಸಾಕಷ್ಟು ವರ್ಷಗಳ ಕಾಲ ಕೈ ಕೈ ಹಿಡಿದು ಸುತ್ತಾಡಿದ್ದ ಈ ಜೋಡಿಗಳು ಮದುವೆಯಾದ ಮೂರೇ ಮೂರು ವರ್ಷಕ್ಕೆ ದೂರವಾಗಿ ಬಿಟ್ಟಿದ್ದರು. ಸಮಂತ ಹಾಗೂ ನಾಗಚೈತನ್ಯ ಡಿವೋರ್ಸ್ ಪಡೆದು ಸಾಕಷ್ಟು ತಿಂಗಳುಗಳೇ ಕಳೆದಿದೆ. ಆದರೆ ಈ ಬಗ್ಗೆ ಈ ಜೋಡಿಗಳು ಎಲ್ಲೂ ಬಾಯಿ ಬಿಟ್ಟಿರಲಿಲ್ಲ. ಇದೀಗ ಸಮಂತಾ ವಿಚ್ಚೇಧನದ ಬಳಿಕ ಜೀವನ ಹೇಗಿದೆ ಅನ್ನೋದನ್ನ ಹೇಳಿದ್ದು, ಸಮಂತಾ ಹೇಳಿಕೆಯ ಬೆನ್ನಲ್ಲೆ ನಟ ನಾಗಚೈತನ್ಯ ಕೂಡ ಈ […]readmore
ತೆಲುಗು ನಟ ಶ್ರೀವಿಷ್ಣು ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಶ್ರೀವಿಷ್ಣು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ನಿನ್ನೆ ರಾತ್ರಿಯಿಂದ ಮತ್ತೆ ವಿಪರೀತ ಜ್ವರ ಹೆಚ್ಚಾದ ಕಾರಣ ಶ್ರೀವಿಷ್ಣು ಅವರನ್ನು ಎಮರ್ಜೆನ್ಸಿ ವಾರ್ಡ್ ಗೆ ದಾಖಲಿಸಲಾಗಿದೆ. ಶ್ರೀವಿಷ್ಣು ಅವರಿಗೆ ಡೆಂಗ್ಯೂ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ಲೇಟ್ ಲೇಟ್ಸ್ ಸಂಖ್ಯೆ ತುಂಬಾ ಕಮ್ಮಿಯಾಗಿದ್ದು, ವಿಷ್ಣು ಗಂಭೀರ ಸ್ಥಿತಿಯಲ್ಲಿದ್ದಾರೆ.ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಪ್ರಾಣಕ್ಕೆ ಅಪಾಯವಿಲ್ಲ ಎಂದು […]readmore
2020ರ 68ನೇ ಸಾಲಿನ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅದರಲ್ಲಿ ‘ಅಯ್ಯಪ್ಪನುಂ ಕೊಶಿಯುಂ’ ಸಿನಿಮಾದ ಗಾಯಕಿ ನಾಂಚಿಯಮ್ಮ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಈ ಮೂಲಕ ಪ್ರಶಸ್ತಿ ಗೆದ್ದ ಮೊದಲ ಬುಡಕಟ್ಟು ಮಹಿಳೆ ಎಂದು ಖ್ಯಾತಿಗೆ ಗಾಯಕಿ ನಾಂಚಿಯಮ್ಮ ಪಾತ್ರರಾಗಿದ್ದಾರೆ. ಗಾಯಕಿ ನಾಂಚಿಯಮ್ಮ ಪ್ರಶಸ್ತಿಯನ್ನು ಅಯ್ಯಪ್ಪನುಂ ಕೊಶಿಯು ಸಿನಿಮಾ ನಿರ್ದೇಶಕ ಸಚಿಗೆ ಅರ್ಪಿಸಿತ್ತಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ನಾಂಚಿಯಮ್ಮ, ನಾನು ಗುಡ್ಡದ ಮೇಲೆ ಆಡು ಹಾಗೂ ಹಸುಗಳನ್ನು ಮೇಯಿಸಿಕೊಂಡಿದ್ದೆ. ನನ್ನ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. […]readmore
ಪವನ್ ಒಡೆಯರ್ ನಿರ್ಮಾಣದ ಚೊಚ್ಚಲ ಸಿನಿಮಾ ಡೊಳ್ಳು ಮುಕುಟಕ್ಕೆ ಮತ್ತೊಂದು ಪ್ರಶಸ್ತಿ ಗರಿ ಸೇರಿದೆ. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. 30 ವಿವಿಧ ಭಾಷೆಯ 400 ಸಿನಿಮಾಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು. ಈ ಪೈಕಿ ಡೊಳ್ಳು ಸಿನಿಮಾ ಎರಡು ವಿಭಾಗದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕನ್ನಡದ ಅತ್ಯುತ್ತಮ ಚಿತ್ರ, ಬೆಸ್ಟ್ ಆಡಿಯೋಗ್ರಾಫಿ ಡೊಳ್ಳು ಸಿನಿಮಾ ಭತ್ತಳಿಕೆ ಸೇರಿದೆ. ಡೊಳ್ಳು ಕುಣಿತದ ಸುತ್ತ ಸಾಗುವ ಈ ಸಿನಿಮಾವನ್ನು ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದು, ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ […]readmore
2020ನೇ ಸಾಲಿನ 68ನೇ ಸಾಲಿನ ಸಿನಿಮಾಗಳಿಗೆ ಇಂದು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಂಚಾರಿ ವಿಜಯ್ ನಟನೆಯ ಕೊನೆಯ ಸಿನಿಮಾ ತಲೆತಂಡಕ್ಕೆ ಅತ್ಯುತ್ತಮ ಪರಿಸರ ಕಾಳಜಿ ಪ್ರಶಸ್ತಿ ದೊರೆತಿದೆ. ಕೃಪಾಕರ ನಿರ್ದೇಶನದ ತಲೆದಂಡ ಸಿನಿಮಾದಲ್ಲಿ ವಿಜಯ್ ವಿಶೇಷ ಚೇತನ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನ ಗೆದ್ದಿದ್ದರು. ಇತ್ತೀಚೆಗಷ್ಟೇ ತೆರೆಕಂಡ ತಲೆದಂಡ ಸಿನಿಮಾದ ನಟನೆಗೆ ವಿಜಯ್ ನ್ಯಾಷನಲ್ ಅವಾರ್ಡ್ ಪಡೆದುಕೊಳ್ಳುತ್ತಾರೆ ಎಂದು ಅಭಿಮಾನಿಗಳು ಎಂದುಕೊಂಡಿದ್ದರು. ಅಂತೆಯೇ ಈ ಸಿನಿಮಾಗೆ ವಿಜಯ್ ಗೆ ರಾಷ್ಟ್ರಪ್ರಶಸ್ತಿ ಲಭಿಸಿದೆ. ಈ ಹಿಂದೆ […]readmore
ಸಿನಿಮಾ ಮತ್ತು ಕಿರುತೆರೆಯಲ್ಲಿ ರಂಗಭೂಮಿ ಹಿನ್ನೆಲೆಯಿಂದ ಬಂದವರ ಸಂಖ್ಯೆ ದಿನೇ ದಿನೆ ಕಡಿಮೆ ಆಗುತ್ತಿದೆ. ಅಂದ ಚೆಂದವನ್ನೇ ಆಧರಿಸಿ ನೇರವಾಗಿ ಬಣ್ಣದ ಲೋಕಕ್ಕೆ ಧುಮುಕುವವರೇ ಹೆಚ್ಚಾಗಿದ್ದಾರೆ. ಆದರೆ, ಗಟ್ಟಿ ನಟನೆ, ದೈಹಿಕ ಭಾಷೆ, ಮಾತಿನ ಧಾಟಿ, ಹಾಗೂ ಬದುಕು ಇದೆಲ್ಲವನ್ನು ಕಲಿಸುವುದು ರಂಗಭೂಮಿ. ಇದೀಗ ರಂಗಭೂಮಿಯಲ್ಲಿಯೇ ತೊಡಗಿಸಿಕೊಂಡಿರುವ ಒಂದು ಸಮಾನ ಮನಸ್ಕರ ತಂಡವೀಗ ರಂಗಭೂಮಿಯ ಒಂದಷ್ಟು ಪಟ್ಟುಗಳನ್ನು ಆಸಕ್ತರಿಗೆ ತಿಳಿಸಲು ಮುಂದೆ ಬಂದಿದೆ. ಹಾಗಂತ ಇದು ತಿಂಗಳಾನುಗಟ್ಟಲೆ ಇರುವ ಕೋರ್ಸ್ ಅಲ್ಲ ಕೇವಲ 7 ದಿನ ಮಾತ್ರ! […]readmore
ಕನ್ನಡ ಸಿನಿಮಾ ರಂಗದ ದಿಕ್ಕನೇ ಬದಲಾಯಿಸಿದ್ದು ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ. ಈ ಚಿತ್ರ ಇಡೀ ವಿಶ್ವವೇ ಗಾಂಧಿನಗರದತ್ತ ತಿರುಗಿ ನೋಡುವಂತೆ ಮಾಡಿತ್ತು. ಇದೀಗ ಸಿನಿಮಾ ಬಿಡುಗಡೆ ಆಗಿ 100 ದಿನಗಳನ್ನು ಪೂರೈಸಿದೆ. ಈ ಸಂಭ್ರಮಕ್ಕೆ ಅಭಿಮಾನಿಗಳಿಗೆ ಹೊಂಬಾಳೆ ಫಿಲ್ಮ್ಸ್ ಧನ್ಯವಾದ ತಿಳಿಸಿದೆ. ಕೆಜಿಎಫ್ ಸಿನಿಮಾದ ತುಣಕನ್ನು ಹಂಚಿಕೊಳ್ಳುವ ಮೂಲಕ ಸಿನಿಮಾದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಕೆಜಿಎಫ್ ಚಿತ್ರತಂಡ ಧನ್ಯವಾದ ತಿಳಿಸಿದೆ. ಕಳೆದ ಏಪ್ರಿಲ್ 14ರಂದು ಕೆಜಿಎಫ್ ಚಾಪ್ಟರ್ 2 ಸಿನಿಮಾ ತೆರೆಗೆ ಬಂದಿತ್ತು. […]readmore
ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಮತ್ತೆ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ಸಮಯದಿಂದ ಬಣ್ಣದ ಬದುಕಿನಿಂದ ದೂರ ಉಳಿದಿದ್ದ ಮೇಘನಾ ಇದೀಗ ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಟಿ ಮೇಘನಾ ರಾಜ್ ನಿರ್ಮಾಪಕಿಯಾಗಿಯೂ ಗುರುತಿಸಿಕೊಳ್ತಿದ್ದಾರೆ. ಚಿರಂಜೀವಿ ಸರ್ಜಾ ನಿಧನದ ಬಳಿಕ ಸಿನಿಮಾ ರಂಗದಿಂದ ದೂರವೇ ಉಳಿದಿದ್ದ ನಟಿ ಮೇಘನಾ ರಾಜ್ ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ರು. ಈ ಮಧ್ಯೆ ಮಗ ಕೊಂಚ ದೊಡ್ಡವನಾಗಿದ್ದು ಹೀಗಾಗಿ ಮತ್ತೆ ಬಣ್ಣದ ಬದುಕಿನತ್ತ ಮುಖ ಮಾಡಿದ್ದಾರೆ. ಈಗಾಗ್ಲೆ […]readmore
ಸಿನಿಮಾ ಹಾಗೂ ವಿಭಿನ್ನ ಕಾಸ್ಟ್ಯೂಮ್ ನಿಂದಲೇ ಪ್ರತಿಭಾರಿ ಸುದ್ದಿಯಾಗೋ ನಟ ರಣವೀರ್ ಸಿಂಗ್ ಈ ಬಾರಿ ಫೋಟೋ ಶೂಟ್ ಮೂಲಕ ನೆಟ್ಟಿಗರನ್ನು ಹೌಹಾರುವಂತೆ ಮಾಡಿದ್ದಾರೆ. ಮ್ಯಾಗಜೀನ್ ಫೋಟೋ ಶೂಟ್ ಗಾಗಿ ರಣವೀರ್ ಸಿಂಗ್ ಬೆತ್ತಲಾಗಿ ಫೋಸ್ ನೀಡಿದ್ದು ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟರ್ಕಿ ದೇಶದ ಜನಪ್ರಿಯ ರಗ್‌ನ ನೆಲದ ಮೇಲೆ ಹಾಸಿ ಅದರ ಮೇಲೆ ಬೆತ್ತಲಾಗಿ ಮಲಗಿಕೊಂಡು ರಣವೀರ್ ಸಿಂಗ್ ಫೋಟೋಗೆ ಫೋಸ್ ನೀಡಿದ್ದಾರೆ. 1972ರಲ್ಲಿ ಬುರ್ಟ್ ರೆನಾಲ್ಡ್ ಕೊಸ್ಮೋಪಾಲಿಟನ್ ಮ್ಯಾಗಜಿನ್ ಗೆ […]readmore
ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಕಳೆದ ತಿಂಗಳು ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ. ಮದುವೆ ಸಮಾರಂಭಕ್ಕೆ ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದ್ದು ಮದುವೆಯ ಕೆಲವೊಂದು ಫೋಟೋಗಳನ್ನು ಮಾತ್ರವೇ ಹಂಚಿಕೊಳ್ಳಲಾಗಿತ್ತು. ಮದುವೆಯಲ್ಲಿ ಯಾರು ಫೋಟೋ ಹಾಗೂ ವಿಡಿಯೋ ಚಿತ್ರೀಕರಣಕ್ಕೆ ನಿರ್ಬಂಧ ಹೇರಲಾಗಿತ್ತು. ಈ ಮುದ್ದು ಜೋಡಿಗಳ ಮದುವೆಯ ಅದ್ಭುತ ಕ್ಷಣವನ್ನು ನೆಟ್ ಫ್ಲಿಕ್ಸ್ ಪ್ರಸಾರದ ಹಕ್ಕನ್ನು ಪಡೆದುಕೊಂಡಿದೆ. ಆದರೆ ಕಳೆದ ಕೆಲ ದಿನಗಳಿಂದ ಈ ಕುರಿತು ಗಾಸಿಪ್ ಗಳು ಹರಿದಾಡುತ್ತಿದ್ದು ಅವುಗಳಿಗೆ ನೆಟ್ ಫ್ಲಿಕ್ಸ್ ಕಡೆಯಿಂದ ಅಧಿಕೃತ […]readmore
