• January 2, 2026

ರಿಯಲ್ ಲೈಫ್ ನಲ್ಲಿ ಮದುವೆಯಾಗಬೇಕಿದ್ದ ಅದಿತಿ ಪ್ರಭುದೇವ, ಡಾಲಿ ಧನಂಜಯ್: ಇಬ್ಬರು ಒಂದಾಗೋದನ್ನು ತಪ್ಪಿಸಿದ್ದು ಯಾರು ಗೊತ್ತಾ?

ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಕೆಲ ವರ್ಷಗಳ ಬಳಿಕ ಮದುವೆಯಾಗಲು ನಿರ್ಧರಿಸಿದ್ದಾರೆ. ಈ ಮಧ್ಯೆ ನಟ ಜಗ್ಗೇಶ್ ಇಂಟ್ರಸ್ಟಿಂಗ್ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಎಲ್ಲ ಅಂದುಕೊಂಡತೆ ಆಗಿದ್ದಿದ್ದರೆ ಅದಿತಿ ಪ್ರಭುದೇವ್ ಹಾಗೂ ಡಾಲಿ ಧನಂಜಯ್ ಮದುವೆಯಾಗ ಬೇಕಿತ್ತು ಎಂದು ಹೇಳಿ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ರಿಯಲ್ ಲೈಫ್ ನಲ್ಲಿ ಅದಿತಿ ಪ್ರಭುದೇವ ಹಾಗೂ ಡಾಲಿ ಧನಂಜಯ್ ಮಗುವೆ ಆಗಬೇಕಿತ್ತು. ಅದಕ್ಕಾಗಿ ಪೂರ್ವ ತಯಾರಿ ಕೂಡ ನಡೆದಿತ್ತು. ಇಬ್ಬರನ್ನು ಒಂದು ಮಾಡುವುದಕ್ಕೆ ಜಗ್ಗೇಶ್ ಕೂಡ ಪ್ರಯತ್ನಿಸಿದ್ದರು. ಆದರೆ ಡಾಲಿಯನ್ನು ಅವರು ಒಪ್ಪದ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ ಎಂದು ಹೇಳಿ ಜಗ್ಗೇಶ್ ಅಚ್ಚರಿ ಮೂಡಿಸಿದ್ದಾರೆ. ತೋತಾಪುರಿ ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಜಗ್ಗೇಶ್, ‘ಡಾಲಿ ಧನಂಜಯ್ ಮತ್ತು ಅದಿತಿಯನ್ನು ಮದುವೆ ಮಾಡಿಸಲು ನಾನು ಪ್ರಯತ್ನ ಪಟ್ಟೆ. ಆದರೆ, ಅದು ಸಾಧ್ಯವಾಗಲಿಲ್ಲ’. ಅದಿತಿ ತಾಯಿ ಒಪ್ಪದೇ ಇರುವ ಕಾರಣಕ್ಕಾಗಿ ಇಬ್ಬರೂ ಮದುವೆ ಆಗಲಿಲ್ಲ. ಅದಿತಿ ತಾಯಿ ಈ ಮದುವೆಗೆ ಸಮ್ಮತಿಸಿದ್ದರೆ ಮತ್ತೊಂದು ಸ್ಟಾರ್ ಜೋಡಿ ಕನ್ನಡ ಸಿನಿಮಾ ರಂಗಕ್ಕೆ ಸಿಕ್ಕಿರೋದು ಎಂದರು. ವಿಜಯ್ ಪ್ರಸಾದ್ ನಿರ್ದೇಶನದ ತೋತಪುರಿ ಸಿನಿಮಾದಲ್ಲಿ ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ ನಟಿಸಿದ್ದಾರೆ. ಈ ಸಿನಿಮಾದ ಪ್ರಮುಖ ಪಾತ್ರವೊಂದಲ್ಲಿ ನಟ ಡಾಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಶೂಟಿಂಗ್ ಸಂದರ್ಭದಲ್ಲಿ ಇಬ್ಬರು ಸಾಕಷ್ಟು ಭಾರಿ ಭೇಟಿ ಮಾಡಿದ್ದಾರೆ. ಇಬ್ಬರನ್ನು ಒಪ್ಪಿಸಿ ಮದುವೆ ಮಾಡಿಸೋಕೆ ಜಗ್ಗೇಶ್ ಮುಂದಾಗಿದ್ದಾರೆ. ಆದರೆ ಅದು ಕೈಗೂಡಲಿಲ್ಲ. ಸದ್ಯ ಅದಿತಿ ಉದ್ಯಮಿಯೊಬ್ಬರ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಇತ ಡಾಲಿ ಧನಂಜಯ್ ಹೆಸರು ಕೂಡ ನಟಿ ಅಮೃತ ಐಯ್ಯಂಗರ್ ಜೊತೆ ಕೇಳಿ ಬರ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now