• June 13, 2026

ಡಾಲಿ ಧನಂಜಯ್ ಚಿತ್ರದ ಮೂಲಕ ನಟಿ ರಮ್ಯಾ ಕಂಬ್ಯಾಕ್

ಸಾಕಷ್ಟು ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರವಿದ್ದ ಮೋಹಕ ತಾರೆ ರಮ್ಯಾ ಇತ್ತೀಚೆಗಷ್ಟೇ ಆ್ಯಪಲ್ ಬಾಕ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದರೆ. ಜೊತೆಗೆ ತಮ್ಮದೆ ಪ್ರೊಡಕ್ಷನ್ ಹೌಸ್ ನಲ್ಲಿ ಆರಂಭವಾಗಲಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಮೂಲಕ ಕಂಬ್ಯಾಕ್ ಮಾಡುವುದಾಗಿ ಹೇಳಿ ಅಭಿಮಾನಿಗಳಿಗೆ ಖುಷಿ ನೀಡಿದ್ದರು. ಆದರೆ ಇದೀಗ ರಮ್ಯಾ ಜಾಗಕ್ಕೆ ಮತ್ತೊಬ್ಬ ಎಂಟ್ರಿಯಾಗಿದೆ. ರಮ್ಯಾ ಕಂಬ್ಯಾಕ್ ಸುದ್ದಿ ಕೇಳಿ ಖುಷಿಯಾಗಿದ್ದ ಅಭಿಮಾನಿಗಳು ರಮ್ಯಾ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿ ಕೇಳಿ ಬೇಸರಗೊಂಡಿದ್ದರು. ಆದರೆ ಇದೀಗ ರಮ್ಯಾ ಕಡೆಯಿಂದ ಮತ್ತೊಂದು ಗುಡ್ ನ್ಯೂಸ ಹೊರ ಬಿದ್ದಿದೆ. ಇತ್ತೀಚೆಗಷ್ಟೇ ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಚಿತ್ರ ರಿಲೀಸ್ ಆಗಿದೆ. ಈ ಸಿನಿಮಾದ ಮೂಲಕ ರಮ್ಯಾ ಕಂಬ್ಯಾಕ್ ಮಾಡಲಿದ್ದಾರೆ ಎಂಬ ಸುದ್ದಿ ಉತ್ತರಕಾಂಡ ಚಿತ್ರತಂಡ ಕಡೆಯಿಂದ ಕೇಳಿಬಂದಿದೆ. ಆದ್ರೆ ಈ ಬಗ್ಗೆ ರಮ್ಯಾ ಆಗಲಿ ಉತ್ತರಕಾಂಡ ಚಿತ್ರತಂಡವಾಗಲಿ ಸ್ಪಷ್ಟನೆ ನೀಡಿಲ್ಲ. ವಿಜಯ್ ಕಿರಗಂದೂರು ಅವರು ಪ್ರಸ್ತುತ ಪಡಿಸುತ್ತಿರುವ ಚಿತ್ರ “ಉತ್ತರಕಾಂಡ ” ವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಅವರು ನಿರ್ಮಿಸುತ್ತಿದ್ದು, ಡಾಲಿ ಧನಂಜಯ ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ರತ್ನನ್ ಪ್ರಪಂಚ ಸಿನಿಮಾದಲ್ಲಿ ಕೈ ಜೋಡಿಸಿದ್ದ ತಂಡವೇ ಉತ್ತರಕಾಂಡದಲ್ಲೂ ಒಂದಾಗಲಿದೆ. ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ಮಾಡ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now