• January 1, 2026

‘ಮರಾಠ ಮಂದಿರ್’ ಮಾಲೀಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ವಿಜಯ್ ದೇವರಕೊಂಡ: ವಿವಾದಕ್ಕೆ ಅಂತ್ಯ

ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು ನಿರೀಕ್ಷೆಯನ್ನು ತಲುಪುವಲ್ಲಿ ಸೋಲನುಭವಿಸಿದೆ. ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದ ಲೈಗರ್ ಗಲ್ಲ ಪೆಟ್ಟಿಯಲ್ಲಿ ಮುಗ್ಗರಿಸಿತ್ತು. ಸಿನಿಮಾದ ಪ್ರಮೋಷನ್ ವೇಳೆ ವಿಜಯ್ ದೇವರಕೊಂಡ ನೀಡಿದ ಹೇಳಿಕೆಯೊಂದು ಪರ-ವಿರೋಧಕ್ಕೆ ಕಾರಣವಾಗಿತ್ತು. ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ‘ನಮ್ಮ ಸಿನಿಮಾವನ್ನು ಯಾರು ತಡೆಯುತ್ತಾರೋ ನೋಡೋಣ’ ಎಂದು ಅವರು ಹೇಳಿದ್ದಕ್ಕೆ ಮುಂಬೈನ ‘ಮರಾಠ ಮಂದಿರ್​’ ಚಿತ್ರಮಂದಿರದ ಮಾಲಿಕರಾದ ಮನೋಜ್​ ದೇಸಾಯಿ ಗರಂ ಆಗಿದ್ದರು. ಅಲ್ಲದೆ ವಿಜಯ್ ಅವರದ್ದು ಅಹಂಕಾರದ ಸ್ವಭಾವ’ ಎಂದು ಹೇಳಿದ್ದರು. ಸದ್ಯ ಈ ವಿವಾದಕ್ಕೆ ಇದೀಗ ತೆರೆ ಬಿದ್ದಿದೆ. ವಿಜಯ್​ ದೇವರಕೊಂಡ ಮತ್ತು ಮನೋಜ್​ ದೇಸಾಯಿ ಅವರು ಪರಸ್ಪರ ಭೇಟಿಯಾಗಿ ಮಾತುಕಥೆ ನಡೆಸಿ, ತಮ್ಮ ನಡುವಿದ್ದ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡಿದ್ದಾರೆ. ವಿಜಯ್​ ದೇವರಕೊಂಡ ಮುಂಬೈಗೆ ತೆರಳಿ ಮನೋಜ್ ದೇಸಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಮನೋಜ್​ ದೇಸಾಯಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ‘ವಿಜಯ್​ ದೇವರಕೊಂಡ ತುಂಬ ಒಳ್ಳೆಯ ಹುಡುಗ. ವಿನಯವಂತ ವ್ಯಕ್ತಿ. ಆತನಿಗೆ ನನ್ನ ಪ್ರೀತಿ ಯಾವಾಗಲೂ ಇರಲಿದೆ. ಅವನಿಗೆ ಒಳ್ಳೆಯ ಭವಿಷ್ಯ ಇದೆ. ಆತನ ಎಲ್ಲ ಸಿನಿಮಾಗಳನ್ನು ನಾನು ತೆಗೆದುಕೊಳ್ಳುವುದಾಗಿ ಭರವಸೆ ನೀಡುತ್ತೇನೆ. ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ’ ಎಂದು ಮನೋಜ್​ ದೇಸಾಯಿ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now