• June 2, 2026

ಕಂಬ್ಯಾಕ್ ಮಾಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ವಿಜಯ್ ದೇವರಕೊಂಡ

ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದಿದ್ದ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತ್ತು. ಆ ಬಳಿಕ ವಿಜಯ್ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ ನ ಜನ ಗಣ ಮನ ಸಿನಿಮಾ ಕೂಡ ಆರಂಭಕ್ಕೆ ಮೊದಲೇ ಅಂತ್ಯಕಂಡಿತ್ತು. ಲೈಗರ್ ಸೋಲಿನ ಬಳಿಕ ಇದೇ ಮೊದಲ ಭಾರಿಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ. ಲೈಗರ್ ಸಿನಿಮಾದ ಸೋಲಿನ ಬಳಿಕ ಸಾಕಷ್ಟು ವಿಜಯ್ ದೇವರಕೊಂಡ ಅವರಿಗೆ ಕಂಬ್ಯಾಕ್ ಮಾಡಿ ಎನ್ನುತ್ತಿದ್ದಾರೆ. ಯಾವುದೇ ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ವಿಜಯ್ ದೇವರಕೊಂಡ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಇತ್ತೀಚೆಗೆ ತೆರೆಕಂಡ ಲೈಗರ್ ಚಿತ್ರ ಸೋಲಿನ ಬಳಿಕ ವಿಜಯ್ ದೇವರಕೊಂಡ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಇದೀಗ ಇದೇ ಮೊದಲ ಭಾರಿಗೆ ವಿಜಯ್ ಸೋಲಿನ ಬಗ್ಗೆ ಮೌನ ಮುರಿದಿದ್ದಾರೆ. `ಲೈಗರ್’ ಚಿತ್ರದ ಸೋಲಿನ ನಂತರ ಸಾಕಷ್ಟು ಟೀಕೆಗಳನ್ನ ಎದುರಿಸಿದ್ದ ವಿಜಯ್ ಇತ್ತೀಚೆಗೆ ಈವೆಂಟ್‌ವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನಾನು ಎಲ್ಲೇ ಹೋದರು ಅಭಿಮಾನಿಗಳು ಕಮ್ ಬ್ಯಾಕ್ ಮಾಡಿ ಎನ್ನುತ್ತಲೇ ಇರುತ್ತಾರೆ. ನಾನು ನಿಮಗೆ ಒಂದು ಹೇಳಲು ಬಯಸುತ್ತೇನೆ. ಕಮ್‌ಬ್ಯಾಕ್ ಮಾಡಲು ನಾನೇಲ್ಲೂ ಹೋಗಿಲ್ಲ ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಹಾಗೂ ಸಮಂತ ನಟನೆಯ ಖುಷಿ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಈಗಾಗ್ಲೆ  60% ಶೂಟಿಂಗ್ ಮುಗಿಸಿರುವ ಖುಷಿ ತಂಡ ಸಮಂತಾ ಆರೋಗ್ಯ ಸಮಸ್ಯೆಯ ಕಾರಣದಿಂದ ಕೊಂಚ ದಿನಗಳ ಮಟ್ಟಿಗೆ ಸೈಲೆಂಟ್ ಆಗಿದೆ. ಸದ್ಯ ಸಮಂತಾ ಯಶೋದ ಸಿನಿಮಾದ ಪ್ರಮೋಷನ್ ಕೆಲಸದಲ್ಲಿ ತೊಡಗಿಕೊಂಡಿದ್ದು ಸದ್ಯದಲ್ಲೇ ಖುಷಿ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now