• February 10, 2026

ಕಿಟಕಿ ರಾಡ್ ಮುರಿದು ಹಾಸ್ಟೆಲ್ ನಿಂದ ಎಸ್ಕೇಪ್ ಆದ ಮೂವರು ವಿದ್ಯಾರ್ಥಿನಿಯರು

ಮಂಗಳೂರು: ನಗರದ ಖಾಸಗಿ ಕಾಲೇಜೊಂದರ ಹಾಸ್ಟೆಲ್ ನಲ್ಲಿ ವಾಸವಿದ್ದು ಮೂವರು ವಿದ್ಯಾರ್ಥಿನಿಯರು ರಾತ್ರಿ ಸಮಯದಲ್ಲಿ ಹಾಸ್ಟೆಲ್ ನ ಕಿಟಿಕಿಯ ರಾಡ್ ಮುರಿದು ಎಸ್ಕೇಪ್ ಆಗಿದ್ದು ಸದ್ಯ ಸಿಸಿಟಿವಿಯಲ್ಲಿ ಬಯಲಾಗಿದೆ. ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರಾದ ಯಶಸ್ವಿನಿ, ದಕ್ಷತಾ, ಸಿಂಚನಾ ಅದೇ ಕಾಲೇಜಿಗೆ ಸಂಬಂಧಿಸಿದ ಹಾಸ್ಟೆಲ್ ನಲ್ಲಿ ವಾಸವಿದ್ದರು. ಆದರೆ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ನಾವು ಹೋಗುತ್ತಿದ್ದೇವೆ, ನಮ್ಮನ್ನು ಕ್ಷಮಿಸಿ ಎಂದು ಪತ್ರದಲ್ಲಿ ಬರೆದಿಟ್ಟು ಹಾಸ್ಟೆಲ್‍ನ ಕಿಟಕಿಯ ರಾಡ್ ಮುರಿದು ಹೊರ ಹೋಗಿದ್ದಾರೆ. ಮೂವರು ವಿದ್ಯಾರ್ಥಿನಿಯರು ಬ್ಯಾಗ್ ಹಿಡಿದು ಹಾಸ್ಟೆಲ್ ನಿಂದ ಹೊರ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಇಂದು ಮುಂಜಾನೆ ಎಷ್ಟು ಹೊತ್ತಾದರೂ ರೂಮಿಗೆ ಬಾಗಿಲು ತೆಗೆದಿರಲಿಲ್ಲ. ಹೀಗಾಗಿ ರೂಮಿನಿ ಹಿಂಬದಿಯಿಂದ ಬಂದು ನೋಡಿದಾಗ ಕಿಟಕಿಯ ರಾಡ್ ಮುರಿದು ಪರಾರಿಯಾಗಿರುವುದು ತಿಳಿದು ಬಂದಿದೆ. ಪರಾರಿಯಾದ ವಿದ್ಯಾರ್ಥಿನಿಯರಲ್ಲಿ ಯಶಸ್ವಿನಿ ಮತ್ತು ದಕ್ಷತಾ ಬೆಂಗಳೂರು ನಿವಾಸಿಗಳಾಗಿದ್ದು, ಸಿಂಚನಾ ಚಿತ್ರದುರ್ಗ ಮೂಲದ ವಿದ್ಯಾರ್ಥಿನಿ. ವಿದ್ಯಾರ್ಥಿಗಳು ಎಲ್ಲಿ ಹೋದರು ? ಹಾಸ್ಟೆಲ್ ನಿಂದ ಎಸ್ಕೇಪ್ ಆಗಲು ಕಾರಣ ಏನು ಎಂಬುದನ್ನು ಇದೀಗ ಪೊಲೀಸರು ಪತ್ತೆ ಹೆಚ್ಚುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now