• June 4, 2026

ನಟಿ ಶ್ರೀಲೀಲಾ ತಾಯಿ ವಿರುದ್ಧ FIR: ನೂರಾರು ಕೋಟಿ ಡೀಲ್ ಕುದುರಿಸಲು ಹೋದ ಸ್ವರ್ಣಲತಾ ಎಸ್ಕೇಪ್

ಖ್ಯಾತ ರಾಜಕಾರಣಯೊಬ್ಬರಿಗೆ ಸೇರಿದ ಅಲಯನ್ಸ್ ಯೂನಿವರ್ಸಿಯ ವಿವಾದಿಸ ಆಸ್ತಿ ಮಾರಾಟ ಮಾಡಲು ಯತ್ನಿಸಿ, ಮಾರಕಾಸ್ತ್ರಗಳೊಂದಿಗೆ ಗುಂಪು ಕಟ್ಟಿಕೊಂಡು ಯೂನಿವರ್ಸಿಟಿಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ತಾಯಿಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.ಸದ್ಯ ಪೊಲೀಸರು ಶ್ರೀಲೀಲಾ ತಾಯಿ ಸ್ವರ್ಣಲತಾ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸೆ,10ರಂದು ಬೆಳಗ್ಗೆ 11 ಗಂಟೆಗೆ ಯುನಿವರ್ಸಿಟಿ ಅಡ್ಮಿನ್ ಬ್ಲಾಕ್ ಗೆ ನುಗ್ಗಿದ್ದ ಸುರ್ಣಲತಾ ಹಾಗೂ ಇನ್ನೂ ಕೆಲವರು ಗಲಾಟೆ ಮಾಡಿದ್ದಾರೆ. ಸ್ವರ್ಣಲತಾ ಹಾಗೂ ಮಧುಕರ್ ಗುಂಪು ಕಟ್ಟಿಕೊಂಡು, ಮರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ಯೂನಿವರ್ಸಿಟಿಯಲ್ಲಿದ್ದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದಾರ ಎಂದು ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ. ಗುಂಪುಕಟ್ಟಿಕೊಂಡು ಬಂದು ಬೆದರಿಕೆ ಹಾಕಿರುವ ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳುವಂತೆ ಯುನಿವರ್ಸಿಟಿಯ ರಿಜಿಸ್ಟರ್ ಡಾ.ನಿವೇದಿತಾ ಮಿಶ್ರಾ ಅನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇತ್ತ ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಸ್ವರ್ಣಲತಾ ಎಸ್ಕೇಪ್ ಆಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now