ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಂಧನದ ಭೀತಿಯಿಂದ ಎಸ್ಕೇಪ್ ಆದ ನಟಿ ಶ್ರೀಲೀಲಾ ತಾಯಿ: ಜಾಮೀನಿಗೆ ಅರ್ಜಿ ಸಲ್ಲಿಸಿದ ಸ್ವರ್ಣಲತಾ
ಅನೇಕಲ್ ಪೊಲೀಸರು ಸ್ವರ್ಣಲತಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಂಧನದ ಭೀತಿ ಎದುರಿಸುತ್ತಿರುವ ಸ್ವರ್ಣಲತಾ ಇದೀಗ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಆನೇಕಲ್ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿದ್ದು ತಮ್ಮ ವಕೀಲರ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 10ರಂದು ಮರಾಕಾಸ್ತ್ರಗಳೊಂದಿಗೆ ಆನೇಕಲ್ ನ ಅಲಯನ್ಸ್ ಯೂನಿವರ್ಸಿಟಿ ಪ್ರವೇಶಿಸಿದ ಸ್ವರ್ಣಲತಾ ದಾಂದಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸ್ವರ್ಣಲತಾ ವಿರುದ್ಧ ಅಕ್ರಮ ಪ್ರವೇಶ, ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ಹತ್ತಕ್ಕೂ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದ್ದು ಎಫ್ಐಆರ್ ದಾಖಲಾಗಿದೆ. ನಾಳೆ ಸ್ವರ್ಣಲತಾ ಅರ್ಜಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದ್ದು ಇವರು ಮುಂಗಡ ಜಾಮೀನು ಪಡೆಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
