ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಗಾಡ್ ಫಾದರ್ ನಲ್ಲಿ ನಟಿಸೋಕೆ ನನ್ನ ಬದಲು ಸಲ್ಮಾನ್ ಖಾನ್ ಗೆ ಅವಕಾಶ ನೀಡಿದ್ದೇಕೆ: ಚಿರಂಜೀವಿಗೆ ಅಮೀರ್ ಖಾನ್ ಪ್ರಶ್ನೆ
ಅಮೀರ್ ಪ್ರಶ್ನೆಗೆ ಉತ್ತರಿಸಿದ ಚಿರಂಜೀವಿ, ನಮಗೆ ಹೃದಯ ಇರುವ ಬುದ್ಧಿವಂತಿಕೆ ಇರುವ ನಟನಿಗಿಂತಲೂ ದೈತ್ಯ ದೇಹಿಯಾಗಿರುವ, ಅಂಗಸೌಷ್ಟವ ಇರುವ ನಟನ ಅವಶ್ಯಕತೆ ಇತ್ತು ಹಾಗಾಗಿ ನಾವು ಸಲ್ಮಾನ್ ಖಾನ್ ಅನ್ನು ಆಯ್ಕೆ ಮಾಡಿಕೊಂಡೆವು” ಎಂದಿದ್ದಾರೆ. ಚಿರಂಜೀವಿ ಉತ್ತರ ಮೆಚ್ಚಿಕೊಂಡ ಅಮೀರ್ ಮುಂದೆ ಅವಕಾಶ ಸಿಕ್ಕರೆ ಒಟ್ಟಿಗೆ ಸಿನಿಮಾ ಮಾಡೋಣ ಎಂದಿದ್ದಾರೆ.
ಅಮೀರ್ ಖಾನ್ ನಟನೆಯ ಅದ್ವೈತ್ ಚಂದನ್ ನಿರ್ದೇಶನದ ಲಾಲ್ ಸಿಂಗ್ ಛಡ್ಡಾ ಸಿನಿಮಾ ಆಗಸ್ಟ್ 11ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಅಮೀರ್ ಖಾನ್ ತಂಡ ಚಿರಂಜೀವಿಗಾಗಿ ವಿಶೇಷ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿತ್ತು. ಚಿರಂಜೀವಿ ಮನೆಯಲ್ಲಿ ಅಮೀರ್ ಖಾನ್ ಜೊತೆ ಚಿರಂಜೀವಿ, ರಾಜಮೌಳಿ, ಸುಕುಮಾರನ್, ನಾಗಾರ್ಜುನ್, ನಾಗಚೈತನ್ಯ ಸಿನಿಮಾವನ್ನು ವೀಕ್ಷಿಸಿದರು. ಸಿನಿಮಾ ಮುಗಿದ ಬಳಿಕ ಅಮೀರ್ ನಟನೆಗೆ ಕ್ಲೀನ್ ಬೋಲ್ಡ್ ಆದ ಚಿರಂಜೀವಿ ಅಮೀರ್ ಖಾನ್ ರನ್ನು ಭಾಚಿ ತಬ್ಬಿಕೊಂಡರು.
‘ಲಾಲ್ ಸಿಂಗ್ ಛಡ್ಡ’ ಇಂಗ್ಲೀಷ್ನ ‘ಫಾರೆಸ್ಟ್ ಗಂಫ್’ ಸಿನಿಮಾದ ರೀಮೇಕ್ ಆಗಿದ್ದು ಆಮಿರ್ ಖಾನ್ ಗೆ ಜೋಡಿಯಾಗಿ ನಟಿ ಕರೀನಾ ಕಪೂರ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
