ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಲೈಗರ್ ಸಿನಿಮಾ ನೋಡಿ ಶಾಕ್ ಆದ ಸೆನ್ಸಾರ್ ಮಂಡಳಿ, ಹಲವು ದೃಶ್ಯಗಳಿಗೆ ಕತ್ತರಿ
ಲೈಗರ್ ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಜೊತೆಗೆ ಹಲವಾರು ಆಕ್ಷೇಪಣೆಗಳು ಚಿತ್ರಕ್ಕೆ ಎತ್ತಿದೆ. ಡೈಲಾಗ್‌ಗಳಲ್ಲಿ ಅಶ್ಲೀಲ ಭಾಷೆಯನ್ನು ಬಳಸಲಾಗಿದ್ದು, ಅದರಲ್ಲಿ ಕೆಲವು ಪದಗಳನ್ನು ತೆಗೆದು ಹಾಕಲು ಸೂಚಿಸಿದರೆ. ಇನ್ನು ಕೆಲವು ಪದಗಳನ್ನು ಮ್ಯೂಟ್ ಮಾಡಲು ಸೂಚಿಸಲಾಗಿದೆಯಂತೆ.
ಲೈಗರ್ ಚಿತ್ರದ ಮೂಲಕ ಭಾರತವನ್ನೇ ಅಲ್ಲಾಡಿಸಲಿದ್ದೇನೆ ಎಂದು ಈಗಾಗಲೇ ಸುಳಿವು ನೀಡಿದ್ದ ಪುರಿ ಜಗನ್ನಾಥ್ ಈ ಸಿನಿಮಾದಲ್ಲಿ ಹಲವು ಹೊಸ ಕೋನಗಳನ್ನು ಪರಿಚಯಿಸಲಿದ್ದಾರೆ. ಹಲವು ಅಚ್ಚರಿಯ ಅಂಶಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ.
ಮುಂಬೈನ ಹಿನ್ನೆಲೆಯನ್ನು ಆಯ್ದುಕೊಂಡು ಬಾಕ್ಸಿಂಗ್ ಹಿನ್ನೆಲೆಯಲ್ಲಿ ಸಿನಿಮಾವಾಗಿರೋ ಲೈಗರ್ ಆಗಸ್ಟ್ 25ರಂದು ತೆರೆಗೆ ಬರಲಿದೆ.
