ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಹತಾಶನಾದಾಗ ಕಾರಿನಲ್ಲೂ ಸೆಕ್ಸ್ ಮಾಡಿದ್ದೆ: ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಹಾಗೂ ಅನನ್ಯ ಪಾಂಡೆ ನಟನೆಯ ಲೈಗರ್ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದ್ದು, ಇದರ ಪ್ರಚಾರಕ್ಕಾಗಿ ಈ ಜೋಡಿಗಳು ಕಾಫಿ ವಿತ್ ಕರಣ್ ಶೋಗೆ ಬಂದಿದ್ದಾರೆ. ಶೋನಲ್ಲಿ ಕರಣ್ ಜೋಹರ್ ವಿಜಯ್ ದೇವರಕೊಂಡಗೆ ಕೊನೆಯದಾಗಿ ನೀವು ಯಾವಾಗ ಸೆಕ್ಸ್ ಮಾಡಿದ್ದೀರಿ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ವಿಜಯ್ ದೇವರಕೊಂಡ ಬದಲು ಅನನ್ಯಾ ಉತ್ತರಿಸಿದ್ದಾರೆ. ‘ಬಹುಶಃ ಇಂದು ಮುಂಜಾನೆ?’ ಎಂದು ವಿಜಯ್ ಮುಖ ನೋಡುತ್ತಾರೆ. ಅದಕ್ಕೆ ವಿಜಯ್ ನಗುತ್ತಲೆ ಉತ್ತರಿಸುತ್ತಾರೆ.
ಬಳಿಕ ಕರಣ್ ಜೋಹರ್ ಪ್ರಶ್ನೆಗೆ ಉತ್ತರಿಸಿದ ವಿಜಯ್ ದೇವರಕೊಂಡ, ತಾವು ಈ ಹಿಂದೆ ಕಾರಿನಲ್ಲೂ ಸೆಕ್ಸ್ ಮಾಡಿರುವುದಾಗಿ ಹೇಳಿದ್ದಾರೆ. ಹತಾಶನಾದಾಗ ಈ ರೀತಿ ಮಾಡಬೇಕಾಗುತ್ತದೆ ಎಂದು ವಿಜಯ್ ಉತ್ತರಿಸಿದ್ದಾರೆ. ವಿಜಯ್ ದೇವರಕೊಂಡ ಹೇಳಿಕೆ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
