• February 10, 2026

ಕೂದಲು ಕತ್ತರಿಸಿ ಹಿಜಬ್ ಪ್ರತಿಭಟನಾಕಾರರಿಗೆ ಸಾಥ್ ನೀಡಿದ ನಟಿ ಊರ್ವಶಿ ರೌಟೇಲಾ

ನೈತಿಕ ಪೊಲೀಸ್ ಗಿರಿಗೆ ಇರಾನ್ ನಲ್ಲಿ 19ರ ವಯಸ್ಸಿನ ಮಹ್ಸಾ ಅಮಿನಿ ಹತ್ಯೆ ಬಳಿಕ ಆರಂಭವಾದ ಪ್ರತಿಭಟನೆ ದಿನೇ ದಿನೇ ಹೆಚ್ಚುತ್ತಿದೆ. ಈಗಾಗ್ಲೆ ಲಕ್ಷಾಂತರ ಮಂದಿ ಬೀದಿಗಿಳಿದು ಪ್ರತಿಭಟನೆಯ ನಡೆಸುತ್ತಿದ್ದು ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ. ಸದ್ಯ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಪ್ರತಿಭಟನಾಕಾರರಿಗೆ ಸಾಥ್ ನೀಡಿದ್ದಾರೆ. ಇರಾನ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಾಕಷ್ಟು ಮಂದಿ ಸಾಥ್ ನೀಡಿದ್ದಾರೆ. ಇದೀಗ ನಟಿ ಊರ್ವಶಿ ರೌಟೇಲಾ ತಮ್ಮ ಕೂದಲು ಕತ್ತರಿಸಿಕೊಳ್ಳುವ ಮೂಲಕ ಪ್ರತಿಭಟನಾಕಾರರ ಜೊತೆಯಾಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಊರ್ವಶಿ ಬರೆದುಕೊಂಡಿದ್ದಾರೆ. ‘ನನ್ನ ಕೂದಲು ಕತ್ತರಿಸಿಕೊಂಡಿದ್ದೇನೆ. ಮಹ್ಸಾ ಅಮಿನಿ ಹತ್ಯೆ ನಂತರ ಶುರುವಾದ ಹಿಜಾಬ್​ ವಿರುದ್ಧದ ಹೋರಾಟದಲ್ಲಿ ನಿಧನರಾದ ಮಹಿಳೆಯರಿಗೆ ಬೆಂಬಲ ನೀಡಲು ಹಾಗೂ ಉತ್ತರಖಾಂಡದ 19ರ ಪ್ರಾಯದ ಯುವತಿ ಅಂತಿಕಾ ಭಂಡಾರಿ ಸಲುವಾಗಿ ಹೀಗೆ ಮಾಡಿದ್ದೇನೆ. ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಜಗತ್ತಿನಾದ್ಯಂತ ಇರುವ ಮಹಿಳೆಯರು ಇರಾನ್​ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಒಗ್ಗೂಡುತ್ತಿದ್ದಾರೆ. ಮಹಿಳೆಯರಿಗೆ ಗೌರವ ನೀಡಿ’ ಎಂದು ಊರ್ವಶಿ ರೌಟೇಲಾ ಬರೆದುಕೊಂಡಿದ್ದಾರೆ. ‘ಕೂದಲನ್ನು ಮಹಿಳೆಯರ ಸೌಂದರ್ಯದ ಸಂಕೇತದ ರೀತಿ ನೋಡಲಾಗುತ್ತದೆ. ಸಾರ್ವಜನಿಕವಾಗಿ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಸಮಾಜ ಹೇರಿರುವ ಸೌಂದರ್ಯದ ಪರಿಕಲ್ಪನೆಯನ್ನು ತಾವು ಕೇರ್​ ಮಾಡುವುದಿಲ್ಲ ಎಂದು ಮಹಿಳೆಯರು ತೋರಿಸುತ್ತಿದ್ದಾರೆ. ಹೇಗೆ ಬಟ್ಟೆ ಹಾಕಬೇಕು, ಹೇಗೆ ನಡೆದುಕೊಳ್ಳಬೇಕು, ಹೇಗೆ ಬದುಕಬೇಕು ಎಂಬುದನ್ನು ಬೇರೆ ಯಾರೋ ನಿರ್ಧರಿಸಲು ಬಿಡಬೇಡಿ. ಮಹಿಳೆಯರೆಲ್ಲರೂ ಒಗ್ಗೂಡಿದರೆ ಸ್ತ್ರೀವಾದಕ್ಕೆ ಹೊಸ ಶಕ್ತಿ ಬರುತ್ತದೆ’ ಎಂದು ಊರ್ವಶಿ ರೌಟೇಲಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. 2013ರಲ್ಲಿ ಸಿಂಗ್ ಸಬ್ ದಿ ಗ್ರೇಟ್ ಸಿನಿಮಾದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ಊರ್ವಶಿ ರೌಟೇಲಾ ಬಾಲಿವುಡ್ ನಲ್ಲಿ ಸಖತ್ ಬೇಡಿಕೆ ಕಂಡುಕೊಂಡಿದ್ದಾರೆ. ಸದ್ಯ ಊರ್ವಶಿ ಹಿಂದಿ, ತಮಿಳು ಹಾಗೂ ತೆಲುಗು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now