• March 14, 2026

ಎರಡೆರಡು ಭಾರಿ ಮಣಿರತ್ನಂ ಸಿನಿಮಾದ ಆಫರ್ ತಿರಸ್ಕರಿಸಿದ ‘ಹೆಬ್ಬುಲಿ’ ಚಿತ್ರದ ನಟಿ

ಸಿನಿಮಾ ರಂಗದ ಖ್ಯಾತ ನಿರ್ದೇಶಕರಲ್ಲಿ ಮಣಿರತ್ನಂ ಕೂಡ ಒಬ್ಬರು. ಚಿತ್ರರಂಗದಲ್ಲಿ ತಮ್ಮದೇ ಆದ ಛಾಪೂ ಮೂಡಿಸಿರುವ ಮಣಿರತ್ನಂ ಚಿತ್ರದಲ್ಲಿ ನಟಿಸಲು ಸ್ಟಾರ್ ನಟ, ನಟಿಯರು ಕಾದು ಕೂತಿರ್ತಾರೆ. ಆದರೆ ನಟಿ ಅಮಲಾ ಪೌಲ್ ಮಾತ್ರ ಮಣಿರತ್ನಂ ಸಿನಿಮಾದಲ್ಲಿ ನಟಿಸೋ ಅವಕಾಶವನ್ನು ನಿರಾಕರಿಸಿದ್ದಾರೆ. ಅದು ಒಂದಲ್ಲ, ಎರಡೇರಡು ಭಾರಿ. ಹೌದು. ಮಣಿರತ್ನಂ ನಿರ್ದೇಶನದ ಪೊನ್ನಿಯಲ್ ಸೆಲ್ವನ್ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ನಟಿ ಐಶ್ವರ್ಯ ರೈ ಬಚ್ಚನ್, ತ್ರಿಷಾ, ಚಿಯಾನ್ ವಿಕ್ರಂ, ಕಾರ್ತಿ, ಜಯಂ ರವಿ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ದಂಡೆ ಸಿನಿಮಾದಲ್ಲಿದೆ. ಅಂದ ಹಾಗೆ ಈ ಚಿತ್ರದಲ್ಲಿ ನಟಿಸಲು ಮೊದಲು ಅಮಪಾ ಪೌಲ್ ಗೆ ಆಫರ್ ನೀಡಲಾಗಿತ್ತಂತೆ. ಪೊನ್ನಿಯನ್ ಸೆಲ್ವನ್ ಒಂದು ಮುಖ್ಯ ಪಾತ್ರದಲ್ಲಿ ನಟಿಸಲು ಅಮಲಾ ಪೌಲ್​ ಅವರಿಗೆ ಆಫರ್​ ನೀಡಲಾಗಿತ್ತು. ಅದಕ್ಕಾಗಿ ಅಮಲಾ ಆಡಿಷನ್​ನಲ್ಲಿಯೂ ಭಾಗವಹಿಸಿ ಆಯ್ಕೆ ಆಗಿದ್ದರು. ಆದರೆ ಆ ಸಂದರ್ಭದಲ್ಲಿ ‘ಪೊನ್ನಿಯಿನ್​ ಸೆಲ್ವನ್​’ ಚಿತ್ರ ಸೆಟ್ಟೇರುವುದು ತಡವಾದ್ದರಿಂದ ಅಪಮಾ ಪೌಲ್ ಚಿತ್ರತಂಡದಿಂದ ಹೊರನಡೆದಿದ್ದರು. ‘ನಾನು ಮಣಿರತ್ನಂ ಸರ್​ ಅಭಿಮಾನಿ. ಮೊದಲ ಸಲ ಈ ಚಿತ್ರ ಸೆಟ್ಟೇರದೇ ಇದ್ದಾಗ ನನಗೆ ತುಂಬ ಬೇಸರ ಆಗಿತ್ತು. 2021ರಲ್ಲಿ ಅದೇ ಪ್ರಾಜೆಕ್ಟ್​ಗಾಗಿ ನನಗೆ ಅವರು ಮತ್ತೆ ಕರೆ ಮಾಡಿದರು. ಆದರೆ ಆಗ ನಾನು ಸಿನಿಮಾದಲ್ಲಿ ನಟಿಸುವ ಮನಸ್ಥಿತಿ ಹೊಂದಿರಲಿಲ್ಲ. ಅಂಥ ಅವಕಾಶ ಮಿಸ್​ ಮಾಡಿಕೊಂಡಿದ್ದಕ್ಕೆ ನನಗೆ ಬೇಸರ ಇಲ್ಲ. ಕೆಲವೊಂದು ವಿಷಯಗಳು ಆಗುವುದೇ ಹೀಗೆ’ ಎಂದು ಅಮಲಾ ಪೌಲ್ ಸಂದರ್ಶನವೊಂದರಲ್ಲಿ ​ ಹೇಳಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯನ್ ಸೆಲ್ವನ್ ಕಾದಂಬರಿ ಆಧಾರಿಸಿ ಈ ಚಿತ್ರ ತಯಾರಾಗುತ್ತಿದ್ದು ಸಾಕಷ್ಟು ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಿದೆ.ಈಗಾಗ್ಲೆ ಟ್ರೈಲರ್ ಸಾಕಷ್ಟು ಸದ್ದು ಮಾಡಿದ್ದು ಇದೇ ಸೆಪ್ಟೆಂಬರ್ 30ರಂದು ಸಿನಿಮಾ ತೆರೆಗೆ ಬರಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now